;

ಕನ್ನಡ ಸಾಹಿತ್ಯ ಪರಿಷತ್ ನಿಂದ ಪೂರ್ವಭಾವಿ ಸಭೆ.!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲೂರು/ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಯೊಬ್ಬ ಕನ್ನಡಿಗರ ಸಹಕಾರದೊಂದಿಗೆ ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ದೊಡ್ಡಮಲ್ಲಯ್ಯ ತಿಳಿಸಿದರು. ಪಟ್ಟಣದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಡಿ ಭಾಗದಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಅಗತ್ಯವಾಗಿದ್ದು ನಾಡಿನ ಪರಂಪರೆ ಮುಂದುವರಿಸಲು ಸಹಕಾರಿಯಾಗಿದೆ. ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಜನವರಿ ತಿಂಗಳಲ್ಲಿ ನಡೆಸಲು ಅವಕಾಶ ಕಲ್ಪಿಸಿರುವುದರಿಂದ ತ್ವರಿತವಾಗಿ ಸಕಲ ಸಿದ್ದತೆಯೊಂದಿಗೆ ಜವಾಬ್ದಾರಿಯಿಂದ ಸಮ್ಮೇಳನ ತಾಯಿ ಯಶಸ್ವಿಗೊಳಿಸಬೇಕಾಗಿದೆ. ಸಮ್ಮೇಳನದಲ್ಲಿ ಸಕಾಲಕ್ಕೆ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜಿಸಿ ಸಮಿತಿಯವರಿಂದ ಧ್ವಜಾರೋಹಣ ನೆರವೇರಿಸಿ ಸಮಾರೋಪ ನೆರವೇರಿಸಲಾಗುವುದು. ಕ್ಷೇತ್ರದ ಶಾಸಕರು ಸ್ವಾಗತ ಸಮಿತಿಯ ಅಧ್ಯಕ್ಷರಾಗಲಿದ್ದು ಪರ್ಯಾಯವಾಗಿ ಬೇರೆಯವರೂ ನಿರ್ವಹಿಸಬಹುದಾಗಿದೆ. ಈ ಸಮ್ಮೇಳನದಲ್ಲಿ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳ ವರ್ಗಗಳು, ಸಾಮಾನ್ಯ ಸದಸ್ಯರು ಮತ್ತು ಕನ್ನಡಾಭಿಮಾನಿಗಳು ಸಮ್ಮೇಳನದ ಪ್ರಮುಖರಾಗಿರುತ್ತಾರೆ. ಈ ತಾಲೂಕು ಸಮ್ಮೇಳನಕ್ಕೆ ಯಾರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕೆಂಬುದನ್ನು ನಿರ್ಧರಿಸಲಾಗುವುದು. ತಾಲೂಕು ಸಮ್ಮೇಳನಕ್ಕೆ ಹೆಚ್ಚಿನ ಹಣ ಅಗತ್ಯವಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಒಂದು ಲಕ್ಷ ರೂ. ಅನುದಾನ ಕಲ್ಪಿಸಲಾಗುವುದು. ಈ ಸಮ್ಮೇಳನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ತಾಲೂಕಿನ ಪ್ರತಿಯೊಬ್ಬ ಕನ್ನಡಿಗರೂ ಸಹ ಹೆಚ್ಚಿನ ಸಹಕಾರ ನೀಡಿ ಕನ್ನಡಾಭಿಮಾನ ಮರೆಯಬೇಕಾಗಿದೆ ಎಂದರು. ಕರವೇ ಅಧ್ಯಕ್ಷ ಸೂರಮ್ಮನಹಳ್ಳಿ ನಾಗರಾಜ್ ಮಾತನಾಡಿ, ತಾಲೂಕಿನಲ್ಲಿ ಹೆಚ್ಚಿನ ಕಲಾವಿದರು, ಸಾಹಿತಿಗಳು ಇರುವುದರಿಂದ 28 ವರ್ಷಗಳ ನಂತರ ನಡೆಯುವ ತಾಲೂಕು ಸಮ್ಮೇಳನವನ್ನು ಕೇವಲ ಒಂದು ದಿನಕ್ಕೆ ಸಾಕಾಗದ ಕಾರಣ ಎರಡು ದಿನಗಳವರೆಗೂ ನಡೆಸಬೇಕಾಗಿದೆ ಎಂದರು. ಕಸಾಪದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಂ.ಡಿ.ಲತೀಫ್ ಸಾಬ್ ಮಾತನಾಡಿ, ತಾಲೂಕಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವರೂ ಒಗ್ಗೂಡಿ ಪಾರದರ್ಶಕವಾಗಿ ನಡೆಯಲು ಸಹಕಾರ ನೀಡಬೇಕಾಗಿದೆ ಎಂದು ತಿಳಿಸಿದರು. ಕಸಾಪದ ತಾಲೂಕು ಅಧ್ಯಕ್ಷ ಡಿ.ಒ.ಮುರಾರ್ಜಿ ಮಾತನಾಡಿ, ತಾಲೂಕಿನಲ್ಲಿ ನಡೆಯುವ ತಾಲೂಕು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಧ್ಯಕ್ಷರು, ಇನ್ನಿತರ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಸರ್ವರ ಸಲಹೆ ಸಹಕಾರಗಳೊಂದಿಗೆ ಯಶಸ್ವಿಗೊಳಿಸಲು ಶ್ರಮಿಸಲಾಗುವುದು ಎಂದರು. ಭರತನಾಟ್ಯ ಶಿಕ್ಷಕಿ ಜ್ಯೋತಿ ನಾಗೇಶ್ ಮಾತನಾಡಿದರು. ಪ.ಪಂ ಅಧ್ಯಕ್ಷ ಪಿ.ಲಕ್ಷ್ಮಣ, ಉಪಾಧ್ಯಕ್ಷೆ ಶುಭ ಡಿಶ್ ರಾಜ್, ಗೋವಿಂದಪ್ಪ ಕೆ.ಒಶಿವಣ್ಣ ನೀಲರಾಜ್, ಕೆ.ಶಾಂತವೀರಣ್ಣ ಜಿಂಕಾ ಶ್ರೀನಿವಾಸ್, ಎಂ.ಡಿ.ಲತೀಫ್ ಸಾಬ್, ರಾಜಶೇಖರ ನಾಯಕ, ಎಂ.ಓ ಮಂಜುನಾಥ,
ಬಿ.ವಿಜಯ್ ಇತರರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;