- ವರದಿ, ಮಂಜುನಾಥ್, ಎಚ್
- ಚಿತ್ರದುರ್ಗ: ಮೊಳಕಾಲ್ಮೂರು/ ಪಟ್ಟಣದಲ್ಲಿ ಪರವಾನಗಿಯಿಲ್ಲದೆ ಬಂದ ಆಂಧ್ರದ ವಾಹನಗಳನ್ನು ತಡೆದು ದಂಡ ವಿಧಿಸಲಾಯಿತು. ಆಂಧ್ರದ ಕುಡುಕರ ಹಾವಳಿ ನಿಯಂತ್ರಿಸಲು ಹಾಗೂ ವಾಹನ ಪರವಾನಗಿ ಇಲ್ಲದೆ ತಾಲೂಕು ಕೇಂದ್ರವಾದ ಪಟ್ಟಣಕ್ಕೆ ಅಕ್ರಮವಾಗಿ ಬರುವ ಆಂಧ್ರದ ವಾಹನಗಳಿಗೆ ರಾಜ್ಯದ ಗಡಿ ಭಾಗದ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ರಾಜ್ಯದ ಭಾಗದಲ್ಲಿರುವ ಆಂಧ್ರಪ್ರದೇಶದ ರಾಯದುರ್ಗ ತಾಲೂಕಿನಿಂದ ನಿತ್ಯ ನೂರಾರು ವಾಹನಗಳು ಚಾಲನಾ ಪರವಾನಗಿ, ವಾಹನ ಪರವಾನಗಿ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳಿಲ್ಲದೆ ಪಟ್ಟಣಕ್ಕೆ ಅಕ್ರಮವಾಗಿ ಸಂಚರಿಸುತ್ತಿದ್ದವು. ಪಟ್ಟಣಕ್ಕೆ ನಿತ್ಯವೂ ರಾಜ್ಯಕ್ಕೆ ಸಂಚರಿಸಲು ಪರವಾನಗಿ ಪಡೆಯದೆ ಪ್ರಯಾಣಿಕರ ಆಟೋಗಳು ಸಂಚರಿಸುವುದು ಸಾಮಾನ್ಯವಾಗಿತ್ತು. ಈ ಆಟೋಗಳಲ್ಲಿ ನಿತ್ಯವೂ ಮೊಳಕಾಲ್ಲೂರು ಪಟ್ಟಣದಲ್ಲಿ ಮದ್ಯ ಸೇವನೆಗಾಗಿ ನೂರಾರು ಜನರು ಲಗ್ಗೆ ಇಡುತ್ತಿರುವುದು ಪಟ್ಟಣದ ಜನರ ಆತಂಕಕ್ಕೆ ಕಾರಣವಾಗಿತ್ತು.ಅಕ್ರಮವಾಗಿ ಪಟ್ಟಣಕ್ಕೆ ಆಗಮಿಸುವ ಆಂಧ್ರದ ವಾಹನಗಳನ್ನು ಮೊಳಕಾಲ್ಮೂರು ಪೊಲೀಸರು ತಡೆದು ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
- ಮುಂಚೆ ಆಂಧ್ರದ ರಾಯದುರ್ಗ ಪಟ್ಟಣಕ್ಕೆ ಸಂಚರಿಸುವ ಕರ್ನಾಟಕದ ವಾಹನಗಳಿಗೆ ಆಂಧ್ರದ ಪೊಲೀಸರು ದಂಡ ಹಾಕಿ ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಕರ್ನಾಟಕದ ಭಾಗದ ಮೊಳಕಾಲ್ಮೂರು ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಆಂಧ್ರದ ರಾಯದುರ್ಗ ಹಾಗೂ ಇನ್ನಿತರ ಪ್ ದೇಶಗಳೊಂದಿಗೆ ಮೊಳಕಾಲ್ಮೂರು ಪಟ್ಟಣ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಯಾವುದೇ ಅಡ್ಡಿ ಆತಂಕವಿಲ್ಲದಂತೆ ಭಾವೈಕ್ಯತೆಯ ಬಾಂಧವ್ಯದೊಂದಿಗೆ ಇರಲಾಗುತ್ತಿತ್ತು. ಆದರೆ ಆಂಧ್ರ ಪೊಲೀಸರ ಸಹಕಾರದ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸರು ವಾಹನಗಳಿಗೆ ದಂಡ ವಿಧಿಸುತ್ತಿದ್ದಾರೆ. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪಿಎಸ್ಐ ಎಂ.ಕೆ. ಬಸವರಾಜ್ ಹಾಗೂ ಪೋಲೀಸ್ ಸಿಬ್ಬಂದಿಗಳು ಸೂಕ್ತ ತಂಡ ರಚಿಸಿ ಅಂಧ್ರದ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030


