ಹೊನ್ನಾಳಿಯಲ್ಲಿ ಶ್ರದ್ಧಾ-ಭಕ್ತಿಗಳಿಂದ ಜರುಗಿದ ದುರ್ಗಾಷ್ಟಮಿ ಮಹಾಪೂಜೆ
ಹೊನ್ನಾಳಿ: ಪಟ್ಟಣದ ಕೋಟೆಯ ‘ರಾಶಿ ನಿಲಯ’ದಲ್ಲಿ ದುರ್ಗಾಷ್ಟಮಿ ಪ್ರಯುಕ್ತ ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ದುರ್ಗಾಷ್ಟಮಿ ಮಹಾಪೂಜೆಯು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ-ಭಕ್ತಿಗಳಿಂದ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆಯಿಂದಲೇ ಶ್ರೀ ದೇವಿಗೆ ವಿಶೇಷ ಪೂಜೆಗಳು ಆರಂಭಗೊಂಡು, ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮ ಹಾಗೂ ದೀಪ ನಮಸ್ಕಾರಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಮಧ್ಯಾಹ್ನ ವಿಧ್ಯುಕ್ತವಾಗಿ ಮಹಾಪೂರ್ಣಾಹುತಿ ನೆರವೇರಿಸಿ, ನೆರೆದಿದ್ದ ನೂರಾರು ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ (ಚಿತ್ರಾನ್ನ, ಮೊಸರನ್ನ) ವ್ಯವಸ್ಥೆ ಮಾಡಲಾಗಿತ್ತು.
ಪೂಜಾ ವಿಧಿವಿಧಾನಗಳನ್ನು ಪ್ರಧಾನ ಅರ್ಚಕರಾದ ಶ್ರೀ ಕೆ. ಕೃಷ್ಣಾಚಾರ್, ಪುರೋಹಿತರಾದ ಅಜಿತ್ ಕುಮಾರ್, ಪ್ರಶಾಂತ್ ಶಾಸ್ತ್ರಿ ಹಾಗೂ ಮಂಜುನಾಥ್ ಅವರು ಸಾಂಗವಾಗಿ ನೆರವೇರಿಸಿಕೊಟ್ಟರು. ಕಾರ್ಯಕ್ರಮದ ವ್ಯವಸ್ಥಾಪನೆಯನ್ನು ಸಂಚಾಲಕರಾದ ಶಶಿಧರ್, ಅಜ್ಜಯ್ಯ ಟಿ. ಆರ್. ಹಾಗೂ ಸಮಿತಿಯ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸ್ಥಳೀಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತಾಯಿಯ ಕೃಪೆಗೆ ಪಾತ್ರರಾದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
