ಹಿಂದೂ ಗೌರಿ ಗಣೇಶ ಸಮಿತಿಯವರಿಂದ ಸ್ಥಾಪಿಸಿದ 50ನೇ ವರ್ಷದ ಗೌರಿ ಗಣೇಶ ಮೂರ್ತಿಯ ವಿಸರ್ಜನಾ ಶೋಭಾಯಾತ್ರೆ
ಹೊನ್ನಾಳಿ ಹಿಂದೂ ಮಹಾ ಸಭಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ 50ನೇ ವರ್ಷದ ಗೌರಿ ಗಣೇಶ ಮೂರ್ತಿಯನ್ನು ಭಾನುವಾರ ಶೋಭಾ ಯಾತ್ರೆ ಮುಖಾಂತರ ರಾಜಭೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು ಬೆಳಗ್ಗೆ 10 ಗಂಟೆಗೆ ಸೂರ್ಯ ತನ್ನ ಪ್ರಕರತೆ ಪ್ರದರ್ಶನ ಆರಂಭಿಸಿದರು ಬಿಸಿಲನ್ನು ಲೆಕ್ಕಿಸದೆ ನೆತ್ತಿ ಸುಡುತ್ತಿದ್ದರು ಜನಸಾಗರ ಕ್ಷಿಣಿಸಲಿಲ್ಲ ಬದಲಿಗೆ ಹೆಚ್ಚು ತಲೆಯಿತ್ತು ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಮುಖಾಂತರ ಅಂತಿಮವಾಗಿ ಗೌರಿ ಗಣೇಶಗೆ ಆರತಿ ಬೆಳಗುವ ಮೂಲಕ ಶೋಭಾ ಯಾತ್ರೆಯನ್ನು ಆರಂಭಿಸಿದರು
ಹೊನ್ನಾಳಿಯ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮತ್ತೆ ಆದಿಶಕ್ತಿಯ ಪ್ರತಿಮೆ
ಟಿಬಿ ವೃತ್ತದಲ್ಲಿ ಭಜರಂಗಿ ಬಲಿಯ ಪ್ರತಿಮೆಯನ್ನು ಸ್ಥಾಪಿಸಿ ಹೊನ್ನಾಳಿಯು ಕೇಸರಿಮಯವಾಗಿ ರಾರಾಜಿಸುತ್ತಿತ್ತು ಎಲ್ಲಿ ನೋಡಿದರೂ ಕೇಸರಿಮಯ ಕೇಸರಿ ಧ್ವಜಗಳು ಮತ್ತು ಬಾವುಟಗಳು ರಾರಾಜಿಸುತ್ತಿದ್ದವು
ಕಳೆದ ಹಲವಾರು ದಿನಗಳಿಂದ ಸಡಗರದಿಂದ ಆಚರಿಸಲ್ಪಟ್ಟ ಸಾರ್ವಜನಿಕ ಗಣೇಶೋತ್ಸವದ ಪ್ರಮುಖಘಟ್ಟವಾದ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನಾ ಮಹೋತ್ಸವ ಹಾಗೂ ಬೃಹತ್ ಶೋಭಾಯಾತ್ರೆಯು ಅತ್ಯಂತ ಅದ್ದೂರಿಯಾಗಿ, ಶಿಸ್ತುಬದ್ಧವಾಗಿ ಹಾಗೂ ಧಾರ್ಮಿಕ ಪರಂಪರೆಯೊಂದಿಗೆ ಭಾನುವಾರ ಸಂಪನ್ನಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹದ ಜಯಘೋಷಗಳೊಂದಿಗೆ ಸಂಪೂರ್ಣ ನಗರವೇ ಕೇಸರಿಮಯವಾಗಿ ಮೈವೆತ್ತಿತ್ತು.
*ವೈಭಮೋಪೇತ ಶೋಭಾಯಾತ್ರೆ ಮತ್ತು ಕಲಾ ತಂಡಗಳ ಮೆರುಗು*
ಪೇಟೆ ಶ್ರೀಹಳದಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗಿದ್ದ ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಬಾನುವಾರ ಬೆಳಗ್ಗೆ ವಿಧ್ಯುಕ್ತವಾಗಿ ಆರಂಭವಾಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಂಡೆ ವಾದನ, ನಾಸಿಕ್ ಡೋಲ್ ಹಾಗೂ ಆಕರ್ಷಕ ಕಲಾ ತಂಡಗಳ ಪ್ರದರ್ಶನವು ಯುವ ಜನತೆಯನ್ನು ಮಂತ್ರಮುಗ್ಧಗೊಳಿಸಿತು. ಭಕ್ತರು ಭಕ್ತಿಭಾವದಿಂದ ಹೆಜ್ಜೆಹಾಕುತ್ತಾ,ಗಣಪತಿ ಬಪ್ಪಾ ಮೋರ್ಯಾ ಎಂದು ಜೈಕಾರ ಮೊಳಗಿಸಿದರು.
*ನಿರಂತರ ಅನ್ನಸಂತರ್ಪಣೆ*
ಸರ್ವ ಭಕ್ತಾದಿಗಳಿಗೂ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು ಭಕ್ತಾದಿಗಳು ಪ್ರಸಾದವನ್ನು ಸೇವಿಸಿ ಸಂತೃಪ್ತರಾದರು
ಶ್ರೀ ಹಳದಮ್ಮ ದೇವಸ್ಥಾನದ ಒರಟ ಮೆರವಣಿಗೆಯು ಮಾರಿಕೊಪ್ಪದ ರಸ್ತೆ ಮುಖಾಂತರ ಹಿರೇಕಲ್ ಮಠದ ವೃತ್ತಕ್ಕೆ ಬಂದು ಅಲ್ಲಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಖಾಂತರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಕೆನರಾ ಬ್ಯಾಂಕ್, ದೊಡ್ಡಪೇಟೆ , ಕುಂಬಾರ್ ಬೀದಿಯ ಮೂಲಕ ಸಾಗಿ, ಅಂತಿಮವಾಗಿ ತುಂಗಭದ್ರಾ ನದಿ ತಲುಪಿತು. ಅಲ್ಲಿ ನೂರಾರು ಭಕ್ತರ ಸಾಕ್ಷೀಭೂತವಾಗಿ ಗಣಪತಿ ಮೂರ್ತಿಯ ವಿಸರ್ಜನೆಯನ್ನು ಶಾಸ್ರೋಕ್ತವಾಗಿ ನೆರವೇರಿಸಲಾಯಿತು.
*ಬಿಗಿ ಪೊಲೀಸ್ ಬಂದೋಬಸ್ತ್*
*ಮತ್ತು ಹದ್ದಿನ ಕಣ್ಣು: ಯಾವುದೇ ‘ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಒನ್ ಡಿವೈಎಸ್ಪಿ ,ಮೂರು ಜನ ಸಿಪಿಐ ,ಎರಡು ಡಿಎಆರ್ ತೂಕಡಿ , ನೂರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ,
ಗೃಹರಕ್ಷಕ ದಳ,ವೃತ್ತ ನಿರೀಕ್ಷಕರಾದ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬಲವಾದ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ ನಿರಂತರ ಡ್ರೋಣ್ ಕಣ್ಗಾವಲು ಇರಿಸಲಾಗಿತ್ತು. ರಕ್ಷಣಾ ಸಿಬ್ಬಂದಿಯನ್ನು ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಚಾರ ಮಾರ್ಗಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗಿತ್ತು.
ಮೆರವಣಿಗೆಯಲ್ಲಿ ಮುಂದಿನ ಚುನಾವಣೆಯ ದಿಕ್ಸೂಚಿಗಳಂತೆ ನಾಯಕರು ಕಾಣಿಸಿಕೊಳ್ಳುತ್ತಿದ್ದರು..
ವರದಿ… ಪ್ರಭಾಕರ್ ಮುದ್ದಣ್ಣರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
