;

ಆನೇಕಲ್ ನ ಬ್ಯಾಗಡದೇನಹಳ್ಳಿಯಲ್ಲಿ ಅಧಿಕಾರಿಗಳ ದಿಢೀರ್ ಕಾರ್ಯಾಚರಣೆ; 18 ಅನಧಿಕೃತ ಬಹುಮಹಡಿ ಕಟ್ಟಡಗಳು ಸೀಜ್…!!!

ಆನೇಕಲ್ ನ ಬ್ಯಾಗಡದೇನಹಳ್ಳಿಯಲ್ಲಿ ಅಧಿಕಾರಿಗಳ ದಿಢೀರ್ ಕಾರ್ಯಾಚರಣೆ; 18 ಅನಧಿಕೃತ ಬಹುಮಹಡಿ ಕಟ್ಟಡಗಳು ಸೀಜ್.

ಆನೇಕಲ್: ನಿಯಮಗಳನ್ನು ಗಾಳಿಗೆ ತೂರಿ, ಅನುಮತಿ ಇಲ್ಲದೆ ನಿರ್ಮಿಸುತ್ತಿದ್ದ ಅಕ್ರಮ ಬಹುಮಹಡಿ ಕಟ್ಟಡಗಳ ವಿರುದ್ಧ ಸುದ್ದಿ ಸ್ಪರ್ಶ ವಾಹಿನಿಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು ಸುದ್ದಿ ವೀಕ್ಷಿಸಿ ಕಾರ್ಯ ಪ್ರವೃತ್ತರಾದ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬ್ಯಾಗಡದೇನಹಳ್ಳಿ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಇಡನ್ ಗಾರ್ಡನ್, ನಕ್ಷತ್ರ ಹಾಗೂ ಸಾಯಿ ಗಾರ್ಡನ್ ಬಡಾವಣೆಗಳಲ್ಲಿ ನಿರ್ಮಾಣ ಹಂತದಲ್ಲಿದ್ದ ಒಟ್ಟು 18 ಅನಧಿಕೃತ ಕಟ್ಟಡಗಳನ್ನು ಅಧಿಕಾರಿಗಳು ಇಂದು ಯಶಸ್ವಿಯಾಗಿ ಸೀಜ್ ಮಾಡಿದ್ದಾರೆ.

ಸಕ್ಷಮ ಪ್ರಾಧಿಕಾರದಿಂದ ಕೇವಲ ‘ಜಿ+2’ (ನೆಲ ಮಹಡಿ ಜೊತೆಗೆ ಎರಡು ಅಂತಸ್ತು) ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ಪಡೆಯಲಾಗಿತ್ತು. ಆದರೆ, ನಿಯಮ ಉಲ್ಲಂಘಿಸಿ ಅನಧಿಕೃತವಾಗಿ 7 ರಿಂದ 8 ಅಂತಸ್ತಿನ ಬೃಹತ್ ಕಟ್ಟಡಗಳನ್ನು ನಿರ್ಮಿಸಲಾಗುತ್ತಿತ್ತು. ಈ ಕಾನೂನು ಉಲ್ಲಂಘನೆ ಬಗ್ಗೆ ಗ್ರಾಮ ಪಂಚಾಯತಿಯಿಂದ ಮಾಲೀಕರಿಗೆ ಹತ್ತಾರು ಬಾರಿ ನೋಟೀಸ್ ನೀಡಲಾಗಿದ್ದರೂ, ಅವರು ಯಾವುದೇಪರಿವಾಣವಿಲ್ಲದೆ ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿದ್ದರು.

ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಬೆಸ್ಕಾಂ ಅಧಿಕಾರಿಗಳಿಗೆ ಪಂಚಾಯತಿಯಿಂದ ಸ್ಪಷ್ಟ ಪತ್ರ ಬರೆಯಲಾಗಿದ್ದರೂ, ಬೆಸ್ಕಾಂ ಅಧಿಕಾರಿಗಳು ನಿಯಮ ಮೀರಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಷ್ಟೇ ಅಲ್ಲದೆ, ಅಕ್ರಮ ನಿರ್ಮಾಣದ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಎಫ್‌ಐಆರ್ (FIR) ದಾಖಲಿಸಿಲ್ಲ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಇದೇ ವೇಳೆ ಮಾತನಾಡಿದ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ನಾಗರಾಜ್, “ಅನುಮತಿ ಪಡೆಯದೆ ನಿರ್ಮಿಸಿರುವ ಮತ್ತು ಕಾರ್ಯಾಚರಣೆ ನಡೆಸುತ್ತಿರುವ ಅಕ್ರಮ ಪಿಜಿಗಳಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಒಂದು ವಾರದ ಗಡುವು ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಅಕ್ರಮ ಪಿಜಿಗಳನ್ನು ತೆರವುಗೊಳಿಸದಿದ್ದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;