ಚಿಕ್ಕಬಳ್ಳಾಪುರದಲ್ಲಿ ಪಾಕಿಸ್ತಾನದ ತಾಯಿ ಮಗ, ಬಾಗೇಪಲ್ಲಿಯ ದಾಸೇಗಾರಿಪಲ್ಲಿಯಲ್ಲಿ ಅಕ್ರಮ ವಾಸ ಆರೋಪಿಗಳ ಬಳಿ ಪಾಕಿಸ್ತಾನ ಪಾಸ್ ಪೋರ್ಟ್ ಪತ್ತೆ…!!!

ಚಿಕ್ಕಬಳ್ಳಾಪುರದಲ್ಲಿ ಪಾಕಿಸ್ತಾನದ ತಾಯಿ ಮಗ,
ಬಾಗೇಪಲ್ಲಿಯ ದಾಸೇಗಾರಿಪಲ್ಲಿಯಲ್ಲಿ ಅಕ್ರಮ ವಾಸ
ಆರೋಪಿಗಳ ಬಳಿ ಪಾಕಿಸ್ತಾನ ಪಾಸ್ ಪೋರ್ಟ್ ಪತ್ತೆ

ಚಿಕ್ಕಬಳ್ಳಾಪುರ : ಭಾರತೀಯ ಪೌರತ್ವ ಇಲ್ಲದೆ, ಅಕ್ರಮವಾಗಿ ವಾಸಿಸುತ್ತಿದ್ದ ಪಾಕಿಸ್ತಾನ ಮೂಲದ ತಾಯಿ ಹಾಗೂ ಮಗನನ್ನು ನಕಲಿ ದಾಖಲೆಗಳ ಮೂಲಕ ಭಾರತದ ಪೌರತ್ವ ಪಡೆಯಲು ಯತ್ನಿಸಿದಾಗ ಪೊಲೀಸರ ಅತಿಥಿಗಳಾಗಿದ್ದಾರೆ.

ಕಳೆದ 22 ವರ್ಷಗಳಿಂದ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಪಾಕಿಸ್ತಾನಿ ಮೂಲದ ತಾಯಿ-ಮಗ ಕೊನೆಗೂ ಕಾನೂನಿನ ಬಲೆಗೆ ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದಾಸೇಗಾರಿಪಲ್ಲಿ ಗ್ರಾಮದಲ್ಲಿ ವಾಸಿಸುತ್ತಿದ್ದ ಫರ್ಹಾನಾಜ್ (52) ಮತ್ತು ಆಕೆಯ ಮಗ ಮೊಹಮ್ಮದ್ ಫರ್ದಿನ್ (21) ಬಂಧಿತ ಆರೋಪಿಗಳು. ಇವರ ಬಳಿ ಪಾಕಿಸ್ತಾನಿ ಪಾಸ್‌ಪೋರ್ಟ್ ಪತ್ತೆಯಾಗಿರುವುದು ಇಲಾಖೆ ದಂಗಾಗಿಸಿದೆ.

ಪ್ರಕರಣ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಮನೀಷಾ ಎನ್ ಪತ್ರಿ, ಮೂಲತಃ ದಾಸೇಗಾರಿಪಲ್ಲಿಯ ಮೊಹಮ್ಮದ್ ಅಯೂಬ್ ಖಾನ್ ಎಂಬಾತ 1993ರಲ್ಲಿ ದುಬೈನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ 2003ರಲ್ಲಿ ಪಾಕಿಸ್ತಾನಿ ಮೂಲದ ಫರ್ಹಾನಾಜ್‌ನನ್ನು ಮದುವೆಯಾಗಿದ್ದ. ಇವರಿಗೆ 2004ರಲ್ಲಿ ಪಾಕಿಸ್ತಾನದಲ್ಲಿ ಮೊದಲ ಮಗ ಮೊಹಮ್ಮದ್ ಫರ್ದಿನ್ ಜನಿಸಿದ್ದನು. ನಂತರ ಉಳಿದ ಇಬ್ಬರು ಮಕ್ಕಳು ದುಬೈನಲ್ಲಿ ಜನಿಸಿದ್ದರು. ಬಳಿಕ ಇಡೀ ಕುಟುಂಬ ಭಾರತಕ್ಕೆ ಬಂದಿತ್ತು. ಭಾರತಕ್ಕೆ ಬಂದರೂ ಇವರು ಇಲ್ಲಿನ ಅಧಿಕೃತ ಪೌರತ್ವ ಪಡೆದಿರಲಿಲ್ಲ. ಆದರೂ ಬೆಂಗಳೂರಿನಲ್ಲಿ ಅಕ್ರಮವಾಗಿ ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದರು. ಆ ನಂತರ ಇತ್ತೀಚೆಗೆ ಬಾಗೇಪಲ್ಲಿಗೆ ಶಿಫ್ಟ್ ಆಗಿದ್ದ ಈ ಕುಟುಂಬ, ತಹಶೀಲ್ದಾರ್ ಕಚೇರಿಯಲ್ಲಿ ರೇಷನ್ ಕಾರ್ಡ್ ಹಾಗೂ ವೋಟರ್ ಐಡಿಗೆ ಹೆಸರು ನಮೂದಿಸಲು ಅರ್ಜಿ ಸಲ್ಲಿಸಿದ್ದರು.

ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇವರು ಪಾಕಿಸ್ತಾನಿ ಪ್ರಜೆಗಳು ಎಂಬ ಶಾಕಿಂಗ್ ಸತ್ಯ ಹೊರಬಿದ್ದಿದೆ.
ಆಪರೇಷನ್ ಸಿಂದೂರ್ ನಂತರ ಇವರ ವೀಸಾ ನವೀಕರಣವೂ ಆಗಿರಲಿಲ್ಲ. ವೀಸಾ ಅವಧಿ ಮುಗಿದಿದ್ದರೂ ಪಾಕಿಸ್ತಾನಕ್ಕೆ ಮರಳದೆ ಬೆಂಗಳೂರಿನ ವಿಳಾಸ ಬಳಸಿ ಅಕ್ರಮವಾಗಿ ಬ್ಯಾಂಕ್ ಖಾತೆ, ರೇಷನ್ ಕಾರ್ಡ್ ಸೃಷ್ಟಿಸಿಕೊಂಡಿದ್ದರು ಎಂದರು.

ಒಟ್ಟಾರೇ ದಾಖಲೆಗಳ ಅಕ್ರಮ ಬಯಲಾಗುತ್ತಿದ್ದಂತೆ ಬಾಗೇಪಲ್ಲಿ ತಹಶೀಲ್ದಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಿದ್ದು ಮತ್ತಷ್ಟು ಸತ್ಯಸತ್ಯತೇ ಹೊರಬರಬೇಕಿದೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend