ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಇವರಿಂದ ಮದ್ಯ ವರ್ಜನ ಶಿಬಿರ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಬಿಸಿ ಟ್ರಸ್ಟ್ ಬಸವಾಪಟ್ಟಣ ಯೋಜನಾಕಚೇರಿ ವ್ಯಾಪ್ತಿಯಲ್ಲಿ *ದುಶ್ಚಟ ಮುಕ್ತ ಸಮಾಜವನ್ನು ಕಟ್ಟುವ ಉದ್ದೇಶದಿಂದ ಕುಂದೂರು ಶ್ರೀ ಆಂಜನೇಯ ಸ್ವಾಮಿ ಸಭಾಭವನದಲ್ಲಿ 2075ನೇ ಎಂಟು ದಿನಗಳ ಕಾಲ ನಡೆಯುವ ಮಧ್ಯವರ್ಜನ ಶಿಬಿರಕ್ಕೆ ಚಾಲನೆ
ಕುಂದೂರು: ಮಾನವನ ಜನ್ಮ ಅತ್ಯಂತ ಶ್ರೇಷ್ಠ ಜನ್ಮವಾಗಿದ್ದು ಇಂತಹ ಶ್ರೇಷ್ಠ ಜನ್ಮಕ್ಕೆ ಮಧ್ಯ ಎನ್ನುವ ದುಶ್ಚಟವು ಒಡನಾಟದಿಂದ ಬಂದು ಇಡೀ ತನ್ನ ಬದುಕಿನ ಉದ್ದಕ್ಕೂ ಅವರ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುವ ಈ ಒಂದು ದುಶ್ಚಟಕ್ಕೆ ಮುಕ್ತಿ ನೀಡುವ ಕಾಯಕವೇ ಮಧ್ಯವರ್ಜನ ಶಿಬಿರ ಇಂತಹ ಶಿಬಿರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಮ್ಮಿಕೊಳ್ಳುತ್ತಿರುವುದು ಇನ್ನೊಂದು ಕುಟುಂಬಗಳಿಗೆ ಆಸರೆಯಾಗಿದೆ ಎಂದು ದೇವಸ್ಥಾನದ ಧರ್ಮದರ್ಶಕರು ಆಗಿರುವ ಶಿವಕುಮಾರವರು ಅಭಿಮತ ವ್ಯಕ್ತಪಡಿಸಿದರು
ಅವರು ಕುಂದೂರು ಶ್ರೀ ಆಂಜನೇಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ 2075ನೇ ಮಧ್ಯವರ್ಜನ ಶಿಬಿರಕ್ಕೆ ಚಾಲನೆ ನೀಡುತ್ತಾ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆಯವರು ಸಮಾಜಕ್ಕೆ ಅಗತ್ಯವಿರುವ ಅತಿ ಮುಖ್ಯ ಕಾರ್ಯಕ್ರಮಗಳಲ್ಲಿ ಇಂತಹ ಕುಟುಂಬ ಕಟ್ಟುವ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತ್ತಿರುವುದು ಅತ್ಯಂತ ಸಂತಸದ ವಿಚಾರ ಎಂದು ತಿಳಿಸುತ್ತಾ ಶಿಬಿರಾರ್ಥಿಗಳಿಗೆ ತಮ್ಮ ಮುಂದಿನ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಕಿವಿ ಮಾತು ಹೇಳಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದಾವಣಗೆರೆ ಜಿಲ್ಲೆಯ ಹಿರಿಯ ನಿರ್ದೇಶಕರಾದ ಲಕ್ಷ್ಮಣ್ ರವರು ಮಾತನಾಡುತ್ತಾ ಗ್ರಾಮ ಪೃಥ್ವಿ ಯೋಜನೆ ಮೂಲಕ ಒಬ್ಬ ವ್ಯಕ್ತಿಯಿಂದ ಹಿಡಿದು ಒಂದು ಕುಟುಂಬದ ಅಭಿವೃದ್ಧಿ ಹಾಗೂ ಬದಲಾವಣೆಗೆ ಆಗುತ್ತಿರುವ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಪೂಜ್ಯರು ಸಮಾಜಕ್ಕೆ ಅರ್ಪಿಸುತ್ತಾ ಬಂದಿದ್ದು ಅವುಗಳಲ್ಲಿ ಅತ್ಯಂತ ಮಹತ್ವದ ಕಾರ್ಯಕ್ರಮಗಳಾದ ಜಾಗೃತಿ ಕಾರ್ಯಕ್ರಮ ಈ ಮಧ್ಯವರ್ಜನ ಶಿಬಿರ ಸುಮಾರು ಎಂಟು ದಿನಗಳ ಕಾಲ ನಡೆಯುವ ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕಾದಲ್ಲಿ ಶಿಬಿರಾರ್ಥಿಗಳ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿದ್ದು ಕಾರ್ಯಕ್ರಮಕ್ಕೆ ಈ ಭಾಗದ ಎಲ್ಲ ಹಿರಿಯರು ಸಹಕಾರ ನೀಡಿರುವುದು ಹೆಮ್ಮೆಯ ವಿಚಾರ ಎಂದು ಅಭಿಮತ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಕೂಲಂಬಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆದ ರವಿ ಕುಮಾರ್ ಅವರು ಮಾತನಾಡುತ್ತಾ ಇಂತಹ ಸಮಾಜ ಪರಿವರ್ತನೆ ಕಾರ್ಯಕ್ರಮ ಶ್ರೀ ಕ್ಷೇತ್ರದಿಂದ ಮಾತ್ರ ನೋಡಲು ಸಾಧ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸುತ್ತದೆ ಆದರೆ ಸಾರಾಯಿ ನಿಷೇಧ ಕಾರ್ಯಕ್ರಮವನ್ನು ಇಲ್ಲಿಯವರೆಗೂ ಯಾವ ಸರ್ಕಾರವು ಕೈಗೊಂಡಿಲ್ಲ ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಸಮಾಜಮುಖಿಯಾಗಿ ಕೆಲವರನ್ನು ದುಶ್ಚಟ ಮುಕ್ತದಿಂದ ಮಾಡಿ ಅವರ ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ತಿಪ್ಪೇಶ್ ಎಚ್ ರವರು ನಡೆಸಿಕೊಟ್ಟರು
ಕಾರ್ಯಕ್ರಮದಲ್ಲಿ ಊರಿನ ಗಣ್ಯರು
ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಚಂದ್ರಣ್ಣ ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ್ ಹೊಸ್ಕೇರಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ವಿವಿಧ ಸಂಘಟನೆ ಮುಖ್ಯಸ್ಥರು ಗ್ರಾಮದ ಪ್ರಮುಖರು ಕಾರ್ಯಕರ್ತರು ಹಾಜರಿದ್ದರು ಇಂದಿನ ಶಿಬಿರದಲ್ಲಿ 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ನೊಂದಾವಣೆ ಆಗಿರುತ್ತರೆ
ಈ ಕಾರ್ಯಕ್ರಮವನ್ನು ರೂಪಾ ನಿರ್ವಹಿಸಿದರು ಸ್ವಾಗತವನ್ನು ಕ್ಷೇತ್ರ ಯೋಜನಾಧಿಕಾರಿ ಬಾಲಕೃಷ್ಣ ನಿರ್ವಹಿಸಿದರು ವಲಯದ ಮೇಲ್ವಿಚಾರಕರಾದ ವಿಠೋಬರವರು ನಿರ್ವಹಿಸಿದರು ಉಳಿದಂತೆ ಎಲ್ಲ ಕಾರ್ಯಕರ್ತರು ಹಾಜರಿದ್ದರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
