ವಿದ್ಯುತ್ ತಂತಿ ಕಳವು : ಆರೋಪಿಗಳು ವಶಕ್ಕೆ…!!!

ವಿದ್ಯುತ್ ತಂತಿ ಕಳವು : ಆರೋಪಿಗಳು ವಶಕ್ಕೆ.

ಕೊಟ್ಟೂರು; ತಾಲ್ಲೂಕಿನ ಗಂಗಮ್ಮನಹಳ್ಳಿ ಕ್ರಾಸ್ ಬಳಿ ವಿದ್ಯುತ್ ತಂತಿ ಕಳವು ಮಾಡುತ್ತಿದ್ದ ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ.

ಎ.ಮಲ್ಲಿಕಾರ್ಜುನ, ಜೋಗಜ್ಜರ ಅಂಜಿನಪ್ಪ , ಗುಡ್ಲುಮಾರಪ್ಪರ ಬಸವರಾಜ್, ಜೋಗಜ್ಜರ ದುರುಗಪ್ಪ ಆರೋಪಿತರಾಗಿದ್ದು ವಿಂಡ್ ಫ್ಯಾನ್ ಗೆ ಅಳವಡಿಸಿದ ವಿದ್ಯುತ್ ಕಂಬಗಳ ಆಲ್ಯೂಮಿನಿಯಂ ವೈರ್ ಕಳ್ಳತನ ಮಾಡುತ್ತಿದ್ದರು .

ಇವರುಗಳಿಂದ ರೂ.4 ಲಕ್ಷ ಬೆಲೆ ಬಾಳುವ ಅಲ್ಯೂಮಿನಿಯಂ ವೈರ್, ರೂ 3 ಲಕ್ಷ ನಗದು ಹಣ ಹಾಗೂ ಅಂದಾಜು ರೂ.3,50,000 ಲಕ್ಷ ಬೆಲೆ ಬಾಳುವ ವಾಹನವನ್ನು ಜಪ್ತು ಮಾಡಿ ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಎಸ್ಐ ಗೀತಾಂಜಲಿ ಶಿಂಧೆ ಹಾಗೂ ಸಿಬ್ಬಂದಿಯಾದ ಯು.ನಾಗಪ್ಪ, ಹೆಚ್.ಬಸವರಾಜ್, ಶಶಿಧರ್, ಕುಮಾರ್ ಪತ್ರಿ, ಬಸವರಾಜ್ ಹಾಗೂ ಕುಮಾರನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಚಿತ್ರ – ಕೊಟ್ಟೂರು ತಾಲ್ಲೂಕಿನ ಗಂಗಮ್ಮನಹಳ್ಳಿ ಕ್ರಾಸ್ ಬಳಿ ವಿದ್ಯುತ್ ತಂತಿ ಕಳವು ಮಾಡುತ್ತಿದ್ದ ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend