ಉಪ್ಪಾರ ಗಟ್ಟಿ ಗ್ರಾಮದಲ್ಲಿ ಶ್ರೀ ಆಂಜಿನೇಯ ಸ್ವಾಮಿ ನೂತನ ಶಿಲಾ ಮಂಟಪ ಲೋಕಾರ್ಪಣೆ…!!!

ಉಪ್ಪಾರ ಗಟ್ಟಿ ಗ್ರಾಮದಲ್ಲಿ ಶ್ರೀ ಆಂಜಿನೇಯ ಸ್ವಾಮಿ ನೂತನ ಶಿಲಾ ಮಂಟಪ ಲೋಕಾರ್ಪಣೆ. ಹಗರಿಬೊಮ್ಮನಹಳ್ಳಿ. ತಾಲೂಕಿನ ಉಪ್ಪಾರ ಗಟ್ಟಿ ಗ್ರಾಮ ದಲ್ಲಿ ನೂತನವಾಗಿ ಶ್ರೀ ಆಂಜಿನೇಯಸ್ವಾಮಿ ನೂತನ ಶಿಲಾ ಮಂಟಪ ಲೋಕಾರ್ಪಣೆ ಹಾಗೂ ಕಳಸಾ ರೋಹಣ ಹಾಗೂ ಧಾರ್ಮಿಕ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ದಿನಾಂಕ. 24-25.26.3 ದಿನಗಳ ಕಾರ್ಯ ಅದ್ದೂರಿಯಾಗಿ ಜರುಗಲಿದೆ, ಈ ಕಾರ್ಯ ಕ್ರಮಗಳಲ್ಲಿ 24-04-2026 ಶುಕ್ರವಾರ ಬೆಳಿಗ್ಗೆ 09-30 ಕ್ಕೆ ಶ್ರೀ ಜಗದ್ಗುರು ಶ್ರೀ ಶಿವ ಶಾಂತವೀರ ಮಹಾ ಸ್ವಾಮಿಗಳ ಭಾವ ಚಿತ್ರ ಮೆರವಣಿಗೆ , ಸಂಜೆ. 06-30 ಕ್ಕೆ ಧರ್ಮ ಸಭೆ ಮತ್ತು ಸಾಂಸ್ಕೃತಿಕ ಕಾರ್ಯ ಕ್ರಮಗಳು. ದಿನಾಂಕ. 25-04-2026 ಶನಿವಾರ ಬೆಳಿಗ್ಗೆ 11-00 ಕ್ಕೆ ಪ್ರಮುಖ ಬೀದಿ ಗಳಲ್ಲಿ ಎತ್ತಿನ ಮೆರವಣಿಗೆ ,ಸಂಜೆ 06-30 ಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ದಿನಾಂಕ. 26-04-2026 ಭಾನುವಾರ ಬ್ರಾಹ್ಮೀ ಮುಹೂರ್ತ ದಲ್ಲಿ ಕೊಪ್ಪಳ ಗವಿ ಮಠ ದ ಜಗದ್ಗುರು ಅಭಿನವ ಗವಿ ಸಿದ್ದೇಶ್ವರ ಸ್ವಾಮಿಗಳ ದಿವ್ಯಾ ಸಾನಿಧ್ಯ ದಲ್ಲಿ” ನೂತನ ಶಿಲಾ ಮಂಟಪ ಕಳಸಾ ರೋಹಣ ಮತ್ತು ಲೋಕಾರ್ಪಣೆ ಗೊಳ್ಳಲಿದೆ. ಕಾರ್ಯ ಕ್ರಮದಲ್ಲಿ ಪರಮ ಪೂಜ್ಯರು, ಗಣ್ಯರು, ಸಕಲ ಕಲಾ ವಾದ್ಯ ತಂಡಗಳು ಆಗಮಿಸಲಿದ್ದಾರೆ
ಎಂದು ಗ್ರಾಮದ ಹಿರಿಯ ಮುಖಂಡರು, ಯುವಕರು ಪತ್ರಿಕೆ ಯೊಂದಿಗೆ ತಿಳಿಸಿದ್ದಾರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend