ಬೀದಿ ನಾಟಕದ ಬಿಲ್ ಮಾಡಿಕೊಡಲು ಲಂಚಕ್ಕೆ ಡಿಮ್ಯಾಂಡ್ – 30 ಸಾವಿರಕ್ಕೆ ಡೀಲ್, 13 ಸಾವಿರ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ..!!

ಬೀದಿ ನಾಟಕದ ಬಿಲ್ ಮಾಡಿಕೊಡಲು ಲಂಚಕ್ಕೆ ಡಿಮ್ಯಾಂಡ್ – 30 ಸಾವಿರಕ್ಕೆ ಡೀಲ್, 13 ಸಾವಿರ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ..!!

ತುಮಕೂರಿನ ಡಿಹೆಚ್ಓ ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಜಿಲ್ಲಾ ಲೆಕ್ಕ ವ್ಯವಸ್ಥಾಪಕ ಸಿಕ್ಕಿ ಬಿದ್ದಿದ್ದಾನೆ.

ಅರವಿಂದ್, ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಬೀದಿ ನಾಟಕ ಬಿಲ್ ಪಾಸ್ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ. 1 ಲಕ್ಷ 98 ಸಾವಿರ ಬಿಲ್ ಮಾಡಿಕೊಡಲು 30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 13 ಸಾವಿರ ಲಂಚ ಪಡೆಯುವಾಗ ಲೋಕಾ ಬಲೆಗೆ ರೇಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾನೆ. ಡಾ ಅಂಬೇಡ್ಕರ್ ಹೆಸರಿನಲ್ಲಿ NGO ನಡೆಸುತ್ತಿರುವ ರಾಜಶೇಖರ್ ಲೋಕಾಯುಕ್ತಕ್ಕೆ ದೂರು ನೀಡಿದ್ರು.. ತುಮಕೂರು ಜಿಲ್ಲೆಯ 11 ತಾಲೂಕಿನಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಪಟ್ಟಂತೆ ಬೀದಿ ನಾಟಕ ಕಾರ್ಯಕ್ರಮ ಮಾಡಲಾಗಿತ್ತು. ಬೀದಿ ನಾಟಕದ ಬಿಲ್ ಪಾಸ್ ಮಾಡಲು ಲಂಚಕ್ಕೆ ಅರವಿಂದ್ ಬೇಡಿಕೆಯಿಟ್ಟಿದ್ದ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ರಾಜಶೇಖರ್‌. ಡಿಹೆಚ್ ಓ ಕಚೇರಿಯಲ್ಲಿ ಲಂಚದ ಹಣ ಪಡೆಯುವಾಗ ಲಾಕ್ ಆಗಿದ್ದಾನೆ. 20 ವರ್ಷಗಳಿಂದ ತುಮಕೂರು ಡಿಹೆಚ್ಓ ಕಚೇರಿಯಲ್ಲೇ ಕೆಲಸ ಮಾಡ್ತಿದ್ದ ಅರವಿಂದ್.

ಸದ್ಯ ಅರವಿಂದ್ ಅನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ತನಿಖೆ, ಮುಂದುವರೆಸಿದ್ದಾರೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend