ರಾಣೆಬೆನ್ನೂರು ತಾಲೂಕ್, ಚೌಡಯ್ಯದಾನಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ತೊಳಿಸಿದ ಆರೋಪ, ಮುಖ್ಯ ಶಿಕ್ಷಕಿಗೆ ನೋಟಿಸ್ ಜಾರಿ.
ರಾಣಿಬೆನ್ನೂರು: ಪ್ರೌಢ ಶಾಲೆಯ ಮಕ್ಕಳಿಂದ ಮುಖ್ಯ ಶಿಕ್ಷಕಿಯೋಬ್ಬರು ಶಾಲೆಯ ಶೌಚಾಲಯವನ್ನು ಸ್ವಚ್ಛಗೊ(ತೊಳೆ)ಸಿದ್ದಾರೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು, ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಸದಸ್ಯರು ಶಾಲೆಯಲ್ಲಿ ಕರೆದಿದ್ದ ತುರ್ತು ಸಭೆಯಲ್ಲಿ ನಿರ್ಣಯಿಸಿದ ಘಟನೆ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
ಮುಖ್ಯ ಶಿಕ್ಷಕಿ ಹಾಗೂ ಎಸ್‌ಡಿಎಮ್‌ಸಿ ಮಧ್ಯ ಬಾರಿ ವಾಗ್ವಾದ್ : ಮುಖ್ಯೋಪಾದ್ಯಾಯಿನಿ ಮಂಜುಳಾ ಕೆ ಕುಲ್ಕರ್ಣಿ ಅವರು, ಶಾಲೆಯ ವಿದ್ಯಾರ್ಥಿಗಳಿಂದ ಶೌಚಾಲಯವನ್ನು ಸ್ವಚ್ಛಗೋಳಿಸಿದ್ದಾರೆ. ಹಾಗೂ ಇಕೋ ಕ್ಲಬ್ ಶೈಕ್ಷಣಿಕ ಭೇಟಿಗೆ ಮುಂಚಿತವಾಗಿಯೇ ತಿಳಿಸಿದ್ದ ಮಕ್ಕಳಲ್ಲಿ, ಕೇವಲ ಕೆಲವು ಮಕ್ಕಳನ್ನು ಮಾತ್ರ, ಶೈಕ್ಷಣಿಕ ಪ್ರವಾಸಕ್ಕೆ ಕರೆದ್ಯೋಯುವುದರೊಂದಿಗೆ ಇನ್ನೂ ಉಳಿದ ಮಕ್ಕಳ ಮನಸ್ಸಿನ ಮೇಲೆ ನಿರಾಶಾದಾಯಕ ಬರೆ ಎಳೆದಿರುವ ವಿಷೆಯ, ಹಾಗೂ ಶಾಲೆಯ ಶೌಚಾಲಯವನ್ನು ಮುಖ್ಯ ಶಿಕ್ಷಕಿ ಮಕ್ಕಳಿಂದ ಸ್ವಚ್ಛಗೊಳಿಸಿರುವ ಸುದ್ದಿ, ಕಾಡ್ಗಿಚ್ಚಿನಂತೆ ಊರತುಂಬೆಲ್ಲಾ ಹಬ್ಬುತಿದ್ದಂತೆಯೇ, ಅನೇಕ ಮಕ್ಕಳ ಪಾಲಕರು, ಪ್ರೌಢ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ, ಸದಸ್ಯರು ಪ್ರೌಢ ಶಾಲೆಯಲ್ಲಿ ಜಮಾಯಿಸಿದ್ದರು.
ಪ್ರೌಢ ಶಾಲೆಯಲ್ಲಿ ಸೇರಿದ್ದ ಮಕ್ಕಳ ಪಾಲಕರು: ಶಾಲೆಯಲ್ಲಿ ಪಾಲಕರು ಎಸ್.ಡಿ.ಎಮ್.ಸಿ ಸದಸ್ಯರೆಲ್ಲಾ ಮುಖ್ಯ ಶಿಕ್ಷಕಿ ಮಂಜುಳಾ ಕೆ ಕುಲ್ಕರ್ಣಿ ಅವರನ್ನು ತೀರ್ವ ತರಾಟೆಗೆ ತೆಗೆದುಕೊಂಡು, ಮಕ್ಕಳಿಂದ ಶೌಚಾಲಯ ತೊಳೆಸಿದ್ದರ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಆಗ ಒಮ್ಮೆಲೆ ಅನೇಕ ಮಕ್ಕಳ ಪಾಲಕರು ಕೆಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಮುಖ್ಯೋಪಾದ್ಯಾಯಿನಿ ಮಂಜುಳಾ ಕೆ ಕುಲ್ಕರ್ಣಿ ತಡವರಿಸುತ್ತಾ ಕ್ಷಮೇಯಾಚಿಸಲು ಮುಂದಾಗಿದ್ದರು. ಅದಕ್ಕೆ ಸೊಪ್ಪುಹಾಕದ ಪಾಲಕರು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ್ ಅಡಿಗ ಅವರುಗೆ ದೂರವಾಣಿಯಲ್ಲಿ ಒತ್ತಾಯಿಸಿದ್ದರಿಂದ, ಕ್ಷೇತ್ರ ಶಿಕ್ಷಣಾಧಿಕಾರಿ ಅಡಿಗ ಅವರು, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಯ್ಕ್ ಅವರನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಸಂಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ: ಶಾಲೆಗೆ ಮಂಜುನಾಯ್ಕ್ ಅವರು ಆಗಮಿಸಿ ವಿದ್ಯಾರ್ಥಿಗಳನ್ನು ಮೌಕಿಕವಾಗಿ ವಿಚಾರಿಸಿದಾಗ, ಮುಖ್ಯೋಪಾದ್ಯಾಯಿನಿ ಮಂಜುಳಾ ಕೆ ಕುಲ್ಕರ್ಣಿ ಅವರು ನಮ್ಮಿಂದ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಹಾಗೂ ಶೈಕ್ಷಣಿಕ ಪ್ರವಾಸಕ್ಕೆ ಕರೆದೋಯುವುದಾಗಿ ನಂಬಿಸಿ, ನಮ್ಮನ್ನು ಬಿಟ್ಟು ಹೋಗಿರುವುದರಿಂದ ನಮಗೆ ಬಹಳ ನೋವಾಗಿದೆ ಎಂದು ಮಕ್ಕಳು, ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮಕ್ಕಳಿಂದ ಪಡೆದ ಮಾಹಿತಿಯನ್ನು ಎಥಾವತ್ತಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ಯಾಮಸುಂದರ್ ಅಡಿಗರಿಗೆ ಒಪ್ಪಿಸಿದ್ದಾರೆ.
ಸೇವೆಯಿಂದ ಅಮಾನತ್ತುಗೊಳಿಸಲು ಪಾಲಕರ ಆಗ್ರಹ: ಈ ವಿಷೆಯದ ಕುರಿತು ಅನೇಕ ಪಾಲಕರು ಕ್ಷೇತ್ರ ಶಿಕ್ಷಣಾದಿಕಾರಿಗಳ ಕಛೇರಿಗೆ ಭೇಟಿ ನೀಡಿ, ಮಕ್ಕಳಿಂದ ಶೌಚಾಲಯವನ್ನು ಸ್ವಚ್ಛಗೊಳಿಸಿರುವ ಹಾಗೂ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಮಕ್ಕಳಿಗೆ ಮೋಸವೆಸಗಿರುವ ನಮ್ಮೂರಿನ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ, ಮಂಜುಳಾ ಕೆ ಕುಲ್ಕರ್ಣಿ ಅವರು ಸೇವೆಯಿಂದ ಅಮಾನತ್ತುಗೊಳಿಸಬೇಕು. ಇಲ್ಲವೆ ನಮ್ಮೂರಿನ ಹೈಸ್ಕೂಲ್‌ನಿಂದ ಬೆರೆಡೆಗೆ ತಕ್ಷಣವೆ ವರ್ಗಾವಣೆ ಮಾಡಬೇಕೆಂದು ಚೌಡಯ್ಯದಾನಪುರ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತವಾಗಿ ಮನವಿ ನೀಡಿದ್ದಾರೆಂದು ಪತ್ರಿಕೆಗೆ ತಿಳಿದುಬಂದಿದೆ.
ಕೋಟ್
ತಾಲೂಕಿನ ಚೌಡದ್ಯಾನಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿ ವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯವನ್ನು ತೊಳಿಸಿದ್ದಾರೆ ಎಂದು ಪಾಲಕರು ನಮ್ಮ ಬಳಿ ಬಂದು ಮನವಿಯನ್ನು ಸಲ್ಲಿಸಿದ್ದರು. ಮುಖ್ಯ ಶಿಕ್ಷಕಿ ಅವರಿಗೆ ನೋಟಿಸ್ ನೀಡಲಾಗಿದ್ದು ನೋಟಿಸ್ ಗೆ ಉತ್ತರವನ್ನು ನೀಡಿದ್ದಾರೆ ಅವರ ಮುಂದಿನ ಕರ್ಮಕ್ಕಾಗಿ ಜಿಲ್ಲಾ ಹಿರಿಯ ಶಿಕ್ಷಣ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದೇನೆ.
-ಶ್ಯಾಮಸುಂದರ್ ಅಡಿಗ
ಕ್ಷೇತ್ರ ಶಿಕ್ಷಣ ಅಧಿಕಾರಿ ರಾಣೆಬೆನ್ನೂರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
