24 ಸಾವಿರ ಕೆಜಿ , ಪಡಿತರ ಅಕ್ಕಿಅಕ್ರಮ ಸಾಗಾಟ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಖಾಕಿ ಪಡೆ
ಕಾಳಸಂತೆಯಲ್ಲಿ ಪಡಿತರ ಸಾಗಾಟ, FIR ಜಡಿದ ಖಾಕಿ
ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಘಟನೆ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಮತ್ತು ಹೊಸಪೇಟೆ ತಾಲೂಕಿನ ರೂರಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಕುಬಾಳ ಗ್ರಾಮ ಸೇರಿ ಎರಡು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಾಕುಬಾಳ ಗ್ರಾಮದಲ್ಲಿ 2,10,388 ರೂಪಾಯಿ ಮೌಲ್ಯದ 6,080 ಕೆಜಿ ಪಡಿತರ, ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದ ಬಳಿ ಲಾರಿಯಲ್ಲಿ ಸಾಗಿಸ್ತಿದ್ದ 4,10,400/- ಬೆಲೆ ಬಾಳುವ 18,240ಕೆಜಿ ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ತಾಲೂಕಿನ ಕಾಕುಬಾಳ ಗ್ರಾಮದಲ್ಲಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ರೆ, ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದಲ್ಲಿ ಲಾರಿಯಲ್ಲಿ ಸಂಗ್ರಹಿಸಡಲಾಗಿತ್ತು.
ಎರಡೂ ಪ್ರಕರಣಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
