ಸಂಚಾರ ನಿಯಮ ಅರಿಯಿರಿ – ಗೀತಾಂಜಲಿ ಶಿಂಧೆ…!!!

ಸಂಚಾರ ನಿಯಮ ಅರಿಯಿರಿ – ಗೀತಾಂಜಲಿ ಶಿಂಧೆ.

ಕೊಟ್ಟೂರು: ಚಾಲಕರು ರಸ್ತೆ ನಿಯಮಗಳು ಹಾಗೂ ಸಂಚಾರ ಚಿಹ್ನೆಗಳನ್ನು ಅರಿತಾಗ ಮಾತ್ರ ಅಪಘಾತಗಳನ್ನು ತಡೆಗಟ್ಟಲು ಸಾಧ್ಯ ಎಂದು ಪಿಎಸ್ಐ ಗೀತಾಂಜಲಿ ಶಿಂಧೆ ಹೇಳಿದರು.

ಪಟ್ಟಣದ ಮುಖ್ಯರಸ್ತೆಯಲ್ಲಿ ಶನಿವಾರ ನಡೆದ ಸಂಚಾರ ಜಾಗೃತಿ ಕಾರ್ಯಕ್ರಮದಲ್ಲಿ ಹೆಲ್ಮಟ್ ಧರಿಸಿ ನಿಯಮ ಪಾಲಿಸಿದ ದ್ವಿಚಕ್ರ ವಾಹನ ಸವಾರರಿಗೆ ಹೂಗುಚ್ಚ ನೀಡುವ ಮೂಲಕ ವಿನೂತನವಾಗಿ ಜಾಗೃತಿ ಮೂಢಿಸಿದರು.

ಮುಖ್ಯ ರಸ್ತೆ ಪಕ್ಕದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಅಡ್ಡ ದಿಡ್ಡಿಯಾಗಿ ಗಾಡಿ ನಿಲ್ಲಿಸಿದ ಬೀದಿ ಬದಿಯ ವ್ಯಾಪಾರಿಗಳಿಗೆ ರಸ್ತೆಯನ್ನು ಅತಿಕ್ರಮಿಸದಂತೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಎಎಸ್ಐ ನೀಲ ನಾಯಕ, ಸಿಬ್ಬಂದಿಗಳಾದ ರಾಂಪುರ ಗುರುರಾಜ್, ಅನಿಲ್ ಕುಮಾರ್, ಕಾಶಿ ಮಠ ಮುಂತಾದವರಿದ್ದರು.

ಚಿತ್ರ : ಕೊಟ್ಟೂರಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ನಡೆದ ಸಂಚಾರ ಜಾಗೃತಿ ಕಾರ್ಯಕ್ರಮದಲ್ಲಿ ನಿಯಮ ಪಾಲಿಸದ ತಳ್ಳು ಗಾಡಿ ವ್ಯಾಪಾರಿಗೆ ಹೂವಿನ ಹಾರ ಹಾಕುವ ಮೂಲಕ ವಿನೂತನವಾಗಿ ಜಾಗೃತಿ ಮೂಢಿಸಿದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend