ಹೊಳಲ್ಕೆರೆ. ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನ ಕಚೇರಿಯ ಬಸಾಪುರ ವಲಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ *ಧಾರ್ಮಿಕ ಸಭೆ ಶ್ರೀಮತಿ ವೀಣಾ ರಾಜಶೇಖರ್ ಅಧ್ಯಕ್ಷರು ಗ್ರಾಮ ಪಂಚಾಯಿತಿ ಆರ್ ನುಲೆನೂರ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ಬಡ ಜನರಿಗೆ ಅನುಕೂಲ ಆಗಿದೆ ಎಂದು ತಿಳಿಸಿದರು. ಉದ್ಘಾಟಕರು ಕುಮಾರಿ ಬಿ, ಕೆ, ಸುಮಿತ್ರಕ್ಕನವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಹಿಳೆಯರ ಅಬಲೆ ಅಲ್ಲ ಸಬಲೆ ಪ್ರತೀ ಒಬ್ಬ ವ್ಯಕ್ತಿಯ ಬೆಳವಣಿಗೆ ಹಿಂದೆ ಸ್ತ್ರೀ ಇರುತ್ತಾರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಂದ ಜನರ ಸಂಘಟನೆ ಹೆಚ್ಚು ಆಗುತ್ತಿದೆ ವಾರಕ್ಕೆ 10 ರಂತೆ ಕುಡಿಇಟ್ಟು ಬೆಳವಣಿಗೆ ಆಗುತ್ತಿದ್ದಾರೆ ಪೂಜ್ಯರು ಸಾಕಷ್ಟು ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಎಂದರು,
ನಂತರದಲ್ಲಿ ಶ್ರೀ ಮುರುಗೇಂದ್ರಪ್ಪ ನಿವೃತ್ತ ಶಿಕ್ಷಕರು ಹಾಗೂ ಅಧ್ಯಕ್ಷರು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಮಿತಿ ಆರ್ ನುಲೆನೂರ್ ಮಾತನಾಡಿ ಇಂತಹ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಗುತ್ತಿದೆ ಎಲ್ಲಾ ಸಂಘದ ಸದಸ್ಯರು ಭಾಗವಹಿಸುವುದು ನಮ್ಮ ಪುಣ್ಯಎಂದರು.ಶ್ರೀಮತಿ ಶಾರಿಕಾ ಯೋಜನಾಧಿಕಾರಿಗಳು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಳಲ್ಕೆರೆ ಯೋಜನೆ ಬೆಳೆದು ಬಂದ ದಾರಿ ಸ್ವಸಹಾಯ ಸಂಘಗಳ ಮಹತ್ವ, ಆರ್ಥಿಕ ನೆರವು ಪಡೆಯವ ಮೂಲಕ ಸ್ವಾವಲಂಬನೇ ಆಗಿರುವುದು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರಿಂದ ಊರಿನ ಜನರಿಗೆ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶ್ರೀಅಜ್ಜಯ್ಯ ಶಿವಪುರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳು ಬಡ ಜನರಿಗೆ ಮದ್ಯಮ ಜನರಿಗೇ ನಿರ್ಗತಿಕರಿಗೆ ಮಾಶಾಸನ ಅನುದಾನ ಸಂಘದ ಸದಸ್ಯರಿಗೇ ಲಾಭಾಂಶ ಮನೇ ಬಾಗಿಲಿಗೆ ಬಂದು ಮುಟ್ಟಿಸುತ್ತಿದಾರೆ ಇದು ನಮ್ಮ ಪುಣ್ಯ ಎಂದರು ಪೂಜ್ಯರಿಗೆ ಭಕ್ತಿ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಜೆ, ಸಿ, ಕವಿತಾ ಒಕ್ಕೂಟ ಅಧ್ಯಕ್ಷರು ಶ್ರೀ ಮಾರುತೇಶ ನಿಕಟಪೂರ್ವ ಅಧ್ಯಕ್ಷರು ಜಿಲ್ಲಾ ಜನ ಜಾಗೃತಿ ವೇದಿಕೆ ಚಿತ್ರದುರ್ಗ, ಮತ್ತು ಕುಮಾರಣ್ಣ ಊರಿನ ಗಣ್ಯರು,GN ಬಸವರಾಜ, ಧನಂಜಯ, ಚಂದ್ರ ಶೇಖರ್,ಧ್ರುವನ್ನ ಶಿವಪುರ ಶ್ರೀಮತಿ ಪೂರ್ಣಿಮಾ ಉಜ್ವಲ ಜಿಲ್ಲಾ ಜನಜಾಗೃತಿ ವೇದಿಕೆ ಊರಿನ ಗಣ್ಯರು ಶುಭ ಹಾರೈಸಿದರು. ಮತ್ತು ವಲಯ ಮೇಲ್ವಿಚಾರಕರು ತೋಟಯ್ಯ & ರಮೇಶ್ ಮಂಜುನಾಥ ಮತ್ತು ಸೇವಾಪ್ರತಿನಿಧಿಗಳು ಹಾಗೂ csc ಸೇವಾದಾರರು ಸ್ವ ಸಹಾಯ ಸಂಘದ ಸದಸ್ಯರು ಊರಿನ ಜನರು ಭಾಗವಹಿಸಿದರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
