ಗುರುಗುಂಟಾ ಹಟ್ಟಿ ರಸ್ತೆಯು ದುರಸ್ತಿ ದುರ್ಗಾ ಪ್ರಸಾದ್ ಆಕ್ರೋಶ
ಲಿಂಗಸೂಗೂರ ತಾಲೂಕ ಗುರುಗುಂಟಾ ಗ್ರಾಮದಿಂದ ಕೋಠ ಕೃಷ್ಣಾಪುರ ಹಾಗೂ ಹಟ್ಟಿ ಪಟ್ಟಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹದಗೆಟ್ಟು, ತೆಗ್ಗುಗುಂಡಿಗಳಲ್ಲಿ ಆಳವಾಗಿ ಹೋದ ಪರಿಣಾಮ, ಪ್ರತಿನಿತ್ಯ ಜನಜೀವನವೇ ಸಂಕಷ್ಟದಲ್ಲಿದೆ.
ಜನರಿಗೆ ತುಂಬಾ ಅವರ ತೊಂದರೆ ಉಂಟಾಗುತ್ತಿದ್ದು. ಕಂಪನಿ ಕಾರ್ಮಿಕರು, ಶಾಲಾಕಾಲೇಜು ಮಕ್ಕಳು, ಸಾಮಾನ್ಯ ಪ್ರಯಾಣಿಕರು ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ.
ಈ ಕುರಿತು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ದುರ್ಗಾ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿ, “ವಿಕಾಸದ ಮಾತು ಹೇಳುವ ಶಾಸಕರು ನಿದ್ದೆಯಲ್ಲಿದ್ದಾರೆ.
ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಚುನಾವಣೆಯ ಸಮಯದಲ್ಲಿ ಮನೆಮನಗೆ ಬಂದು ಭರವಸೆ ನೀಡುವವರು, ಗೆದ್ದ ಬಳಿಕ ಕಣ್ಮರೆ ಆಗುತ್ತಾರೆ” ಎಂದು ಗರಂ ಆದರು.
ಮುಂದೆ ಮಾತನಾಡಿದ ಅವರು, ಗ್ರಾಮೀಣ ರಸ್ತೆ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು,
ಸಾರ್ವಜನಿಕರ ಜ್ವರಾಟವನ್ನು ಯಾರೂ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಗ್ರಾಮಗಳತ್ತ ನಿರ್ಲಕ್ಷ್ಯ ತೋರಿಸಲಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿ ಜನರಿಗೆ ಸಂಚಾರ ಸುಗಮವಾಗುವಂತೆ ಕ್ರಮ ಕೈಗೊಂಡು, ಇಲ್ಲವಾದರೆ ಶಾಸಕರ ಮನೆ ಮುಂದೆ ಭಾರೀ ಪ್ರತಿಭಟನೆಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
