ಹೊಳಲ್ಕೆರೆ ಪಟ್ಟಣದ ಪತ್ರಿಕಾ ಭವನದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ..
ಹೊಳಲ್ಕೆರೆ : ಕನ್ನಡ ಸಾಹಿತ್ಯ ಭಾಷೆ ನೆಲ ಜಲ ಕುರಿತು ಜಾಗೃತಿ ಜೊತೆ ಅಭಿವೃದ್ಧಿಗೆ ಪತ್ರಕರ್ತರ ಸಂಘ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಸಂಚಾಲಕರಾದ ಬಿ ಕೆ ಸುಮಿತ್ರ ತಿಳಿಸಿದರು.
ಅವರು ಹೊಳಲ್ಕೆರೆ ಪಟ್ಟಣದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ನಾಲ್ಕು ನೂರು ವರ್ಷಗಳ ಇತಿಹಾಸವಿದೆ.ಸಾಕಷ್ಟು ವಿದ್ವಾಂಸರು ಕನ್ನಡ ಸಾಹಿತ್ಯವನ್ನು ಬೆಳೆಸಲು ಶ್ರಮಿಸಿದ್ದಾರೆ. ಅವರ ಸ್ಮರಣೆಯನ್ನ ನಾವೆಲ್ಲರೂ ಮಾಡಬೇಕು. ಸಾಹಿತ್ಯದ ಜೊತೆ ಭಾಷೆ ಬೆಳವಣಿಗೆ ತುಂಬಾ ಅಗತ್ಯ. ಅನ್ಯ ಭಾಷಾ ವ್ಯಾಮೋಹಮಕ್ಕೆ ನಾವೆಲ್ಲರೂ ದಾಸರಾಗದೆ ತಾಯಿ ಭಾಷೆ ಕನ್ನಡವನ್ನು ನಿತ್ಯವೂ ಬಳಸಬೇಕು, ಬರೆಯಬೇಕು.ಸಾಹಿತ್ಯ ರಚನೆ ಮಾಡಬೇಕು. ಕಥೆ ಕವನ ಹೆಚ್ಚು ಹೆಚ್ಚು ಬರೆಯುವ ಕೆಲಸ ಯುವ ಪೀಳಿಗೆ ಮಾಡಬೇಕು. ಆ ಮೂಲಕ ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಪರಂಪರೆಯನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕು ಎಂದು ಕರೆ ನೀಡಿದರು.
ಪುರಸಭೆಯ ಉಪಾಧ್ಯಕ್ಷೇ ಹೆಚ್ ಆರ್ ನಾಗರತ್ನ ವೇದಮೂರ್ತಿ ಮಾತನಾಡಿ, ಕನ್ನಡ ನಾಡಿನ ಪರಂಪರೆ ಶ್ರೀಮಂತವಾದದ್ದು.ರಾಜ ಮಹಾರಾಜರ ಕಾಲದಲ್ಲಿ ಭಾಷಾ ಸಾಹಿತ್ಯಕ್ಕೆ ಸಾಕಷ್ಟು ಒತ್ತು ನೀಡಿ ಬೆಳವಣಿಗೆ ಪ್ರೋತ್ಸಾಹಿಸಿದರು. ಕನ್ನಡ ನಾಡಿನಲ್ಲಿ ಗಡಿ ಭಾಷೆ ಸಮಸ್ಯೆಗಳು ಅನಾದಿಕಾಲದಿಂದ ಇದ್ದರೂ ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ನಮ್ಮ ತಾಯಿ ಭಾಷೆ ಕನ್ನಡವನ್ನು ಇನ್ನಷ್ಟು ಪ್ರಕಾಶಮಾನಗೊಳಿಸಲು ನಿರಂತರ ಶ್ರಮಿಸಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಎ.ಚಿಕ್ಕಪ್ಪ ಮಾತನಾಡಿ, ಭಾಷೆ ಪ್ರಮುಖ ಮಾಧ್ಯಮ. ಭಾಷೆ ಇಲ್ಲದೆ ಬದುಕು ನಡೆಸಲು ಸಾಧ್ಯವಿಲ್ಲ. ತಾಯಿ ಭಾಷೆ ನಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸಹಕಾರಿಯಾಗುತ್ತದೆ. ತಾಯಿ ಭಾಷೆಯನ್ನ ನಾವು ಯಾವತ್ತು ಮರೆಯಬಾರದು. ಅದರ ಬೆಳವಣಿಗೆ ನಿರಂತರವಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ವಕೀಲರಾದ ಎಸ್. ವೇದಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಕನ್ನಡ ಭಾಷೆ ಯಾವುದೇ ಅನ್ಯ ಭಾಷೆಗಿಂತ ಕಡಿಮೆ ಇಲ್ಲ. ಅನ್ಯ ಭಾಷಾ ವ್ಯಾಮೋಹಕ್ಕೆ ಬಲಿಯಾಗಿರುವ ಕನ್ನಡಿಗರು ನಮ್ಮ ಭಾಷೆಯ ಬಗ್ಗೆ ನಿರ್ಲಕ್ಷ ಹೊಂದಿದ್ದಾರೆ. ಪ್ರತಿಯೊಬ್ಬರು ನಮ್ಮ ಭಾಷೆಯನ್ನು ಪ್ರೀತಿಸಬೇಕು. ಬಳಸಬೇಕು. ಹೆಚ್ಚು ಪ್ರಸಾರವಾಗುವಂತೆ, ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕಸಾಪ ಕಾರ್ಯದರ್ಶಿ ಬಿ.ಜಿ. ಹಳ್ಳಿ ವೆಂಕಟೇಶ್, ಪತ್ರಕರ್ತ ಸುರೇಶ ಆವಿನಹಟ್ಟಿ, ದಲಿತ ಕ್ರಾಂತಿ ನಾಗರಾಜ್, ಪತ್ರಕರ್ತರಾದ ಮಧುಚಂದ್ರವಳ್ಳಿ, ಚಿಕ್ಕಜಾಜೂರು ಶಿವಣ್ಣ, ರಾಜ್ಯ ಪ್ರಶಸ್ತಿ ವಿಜೇತ ನಾಗೇಂದ್ರಪ್ಪ,
ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಫೋಟೋ : ಹೊಳಲ್ಕೆರೆ ಪಟ್ಟಣದ ಪತ್ರಕರ್ತರ ಭವನದಲ್ಲಿ ಕನ್ನಡ ರಾಜ್ಯೋತ್ಸವ ನಡೆಸಲಾಯಿತು. ಪ್ರಜಾಪಿತ ಬ್ರಹ್ಮಕುಮಾರಿ ಬಿ.ಕೆ. ಸುಮಿತ್ರಕ್ಕ, ಪುರಸಭೆ ಉಪಾಧ್ಯಕ್ಷ ಎಚ್ಆರ್ ನಾಗರತ್ನ ವೇದಮೂರ್ತಿ, ಸಂಘದ ಉಪಾಧ್ಯಕ್ಷ ಏಚಿತ್ತಪ್ಪ ಸೇರಿ ಹಲವಾರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
