ಗಣಿನಾಡಿನ ತಂಪಿನಲ್ಲಿ ಹೊರ ಸೂಸಿದ ಕನ್ನಡದ ಕಂಪು ಜನರ ಮನಸ್ಸಿಗೆ ಮುದ ನೀಡಿದ ಮಕ್ಕಳ ಕಲರವ… ವರದಿ.. ಕಾಶಪ್ಪ ಸಂಡೂರು…
ತಾಲೂಕು ವರದಿಗಾರ. ಗಣಿ ನಾಡಿನ ಸಂಡೂರಿನಲ್ಲಿ ಅಚ್ಚು ಹಸಿರಿನ ವನ ಎಂಬಂತೆ ಯಾವ ಮಲೆನಾಡಿಗೂ ಮತ್ತು ಕೊಡಗು ಹಸಿರಿನ ಸಾಲುಗಳನ್ನು ಮೀರಿಸುವ ನಮ್ಮ ಸಂಡೂರು ಹಸಿರಿನಿಂದ ಕೂಡಿದ ಮನಸ್ಸಿಗೆ ಮುದ ನೀಡುವ ವಾತಾವರಣದಲ್ಲಿ. ನವಂಬರ್ 1 ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಸಂಡೂರು ತಾಲೂಕಿನಾದ್ಯಂತ ಪ್ರತಿಯೊಂದು ಶಾಲೆಯಿಂದ ತಮ್ಮದೇ ಆದ ಮೆರವಣಿಗೆಯ ಮೂಲಕ ಭುವನೇಶ್ವರಿಯ ಫೋಟೋವನ್ನು ಅಲಂಕಾರ ಮಾಡಿಕೊಂಡು ಸಂಡೂರು ತಾಲೂಕ ಕಚೇರಿಯಿಂದ ವಿಜಯ ಸರ್ಕಲ್ ವರೆಗೆ ಮತ್ತು ಸಂಡೂರಿನ ಪೊಲೀಸ್ ಠಾಣೆಯವರೆಗೂ ಮೆರವಣಿಗೆ ಮಾಡುತ್ತಾ ವಜ್ರಮಣೆಯಿಂದ ಮಕ್ಕಳ ಡ್ಯಾನ್ಸು ಗತವೈಭವ ಮಕ್ಕಳ ವೇಷಭೂಷಣ ನೋಡಿದರೆ ಕಣ್ಣು ತಂಪಾಗಿಸಿತ್ತು. ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಒಗ್ಗಟ್ಟಾಗಿ ಒಂದಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ಒಂದು ವಿಶೇಷ ಪ್ರೀತಿ ವಿಶ್ವಾಸವನ್ನು ಸಂಡೂರು ಜನತೆ ಗಳಿಸಿದೆ. ಅದರಲ್ಲಿ ಮಕ್ಕಳ ಸಂಸ್ಕೃತಿ ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರು ನಡೆಯುವುದನ್ನು ನಿಲ್ಲಿಸಿ ನೋಡುವಂತೆ ಮಾಡುತ್ತಿದ್ದವು. ಮಕ್ಕಳ ವಿಶೇಷ ತೊಡೆಗೆಯಲ್ಲಿ ವೇಷಭೂಷಣ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ವೇಶಭೂಷಣ ಎದ್ದು ಕಾಣುತ್ತಿದ್ದವು. ಒಟ್ಟಾರೆಯಾಗಿ ಕನ್ನಡ ಉಳಿಸುವ, ರಾಜ್ಯೋತ್ಸವಕ್ಕೆ ಸಂಡೂರು ಸಾಕ್ಷಿಯಾಗಿತ್ತು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
