ಗಂಗಾವತಿಯ ಮೆಹಬೂಬ್ ನಗರದಲ್ಲಿ ಕಳೆದ ವಾರ ದುರ್ಗಮ್ಮ ಹಳ್ಳದಲ್ಲಿ ಬಾಲಕನೊಬ್ಬ ಬಿದ್ದು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಇಂದು ನಗರಸಭೆ ಆಯುಕ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆನು. ದುರ್ಗಮ್ಮ ಹಳ್ಳಕ್ಕೆ ಸೂಕ್ತ ತಡೆಗೋಡೆ ನಿರ್ಮಾಣ ಮಾಡಿ, ಕಬ್ಬಿಣದ ಬೇಲಿ ಅಳವಡಿಸಿ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ನಂತರ, ಮೃತ ಬಾಲಕನ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ಒದಗಿಸುವುದರ ಜೊತೆಗೆ, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲು ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಹೊರಗುತ್ತಿಗೆ ಆದರದಲ್ಲಿ ಒಂದು ವಾರದೊಳಗೆ ಕೆಲಸ ನೀಡಲು ನಗರಸಭಾ ಆಯುಕ್ತರಿಗೆ ಸೂಚನೆ ನೀಡಿದೆನು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಹೀರಾಬಾಯಿ, ನಗರಸಭಾ ಆಯುಕ್ತರಾದ ವಿರುಪಾಕ್ಷಮೂರ್ತಿ, ನಗರಸಭಾ ಸದಸ್ಯರಾದ ಮೌಲಸಾಬ್, ಪರಶುರಾಮ ಮಡ್ಡರ್, ಅಜಯ್ ಬಿಚಾಲಿ, ರಮೇಶ್ ಚೌಡ್ಕಿ, ಜಬ್ಬಾರ್, ನೀಲಕಂಠ ಕಟ್ಟಿಮನಿ, ಫಾರೂಕ್, ಉಸ್ಮಾನ್, ಜುಬೇರ್, ಮುಸ್ತಾಕ್ ಆಲಿ, ನಗರ ಮಂಡಲ ಅಧ್ಯಕ್ಷರಾದ ಚಂದ್ರು ಹಿರೂರು, ಮುಖಂಡರಾದ ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ಆನಂದ್ ಗೌಡ, ರಮೇಶ್ ಹೊಸಮಲಿ, ಅರ್ಜುನ್ ನಾಯಕ್, ನಾಗರಾಜ್ ಚಳ್ಳಗೇರಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
