ಹಿರಿಯ ನಾಗರೀಕರು ಸಮಾಜದ ಬೇರುಗಳು : ಜಿಲ್ಲಾಧಿಕಾರಿ ಲತಾ ಕುಮಾರಿ…!!!

ಹಿರಿಯ ನಾಗರೀಕರು ಸಮಾಜದ ಬೇರುಗಳು : ಜಿಲ್ಲಾಧಿಕಾರಿ ಲತಾ ಕುಮಾರಿ
ಹಾಸನ :- ಭಾರತೀಯ ಸಂಸ್ಕೃತಿಯಲ್ಲಿ ಹಿರಿಯ ನಾಗರೀಕರ ಸ್ಥಾನ ತುಂಬ ಪ್ರಾಧ್ಯಾನತೆ ಪಡೆದಿದೆ, ಅವರು ತಮ್ಮ ಸಂಪೂರ್ಣ ಜೀವನವನ್ನು ಕುಟುಂಬ, ಸಮಾಜ ಹಾಗೂ ದೇಶಕ್ಕಾಗಿ ಕಳೆದಿರುತ್ತಾರೆ. ಇವರುಗಳು ದೊಡ್ಡ ಆಲದ ಮರದ ಬೇರುಗಳಿದ್ದಂತೆ ಈ ಬೇರುಗಳಿಲ್ಲದೆ ಕಲ್ಪನೆ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿoದು ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಕಾಲಘಟ್ಟದಲ್ಲಿ ಮೂರು ಹಂತಗಳು ಬರುತ್ತವೆ. ಬಾಲ್ಯ, ಯೌವ್ವನ, ವೃದ್ಧಾಪ್ಯ ಇವುಗಳಲ್ಲಿ ವೃದ್ಧಾಪ್ಯ ಕಠಿಣ ಎಂದು ಭಾವಿಸಬಾರದು. ಜೀವನದ ಒಂದು ಭಾಗ ಅದನ್ನು ತುಂಬಾ ಸಂತೋಷವಾಗಿ ಗೌರವಯುತವಾಗಿ ಘನತೆಯಿಂದ ಸ್ವೀಕರಿಸಿ ಜೀವನ ಮಾಡುವುದು ಜೀವನದ ಕಲೆಯಾಗಿದೆ ಎಂದರು.

ಹಿಂದಿನ ದಿನಮಾನಗಳಿಗೆ ಹೋಲಿಕೆ ಮಾಡಿದರೆ ಇಂದಿನ ದಿನಗಳಲ್ಲಿ ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ ಇದಕ್ಕೆ ಕಾರಣ ಆರೋಗ್ಯದಲ್ಲಿ ಸುಧಾರಣೆಯಾಗಿರುವುದು, ಆರೋಗ್ಯವೆ ಆಸ್ತಿ, ಹಣಕಾಸಿನ ವಿಚಾರದಲ್ಲಿ ಸ್ವತಂತ್ರವಾಗಿರಬೇಕು ಎಂದು ತಿಳಿಸಿದರು.

ವೃದ್ದಾಪ್ಯ ಜೀವನದ ಅವಿಭಾಜ್ಯ ಅಂಗ ನಾವು. ಯಾರಿಗೂ ಭಾರವಾಗಂತೆ ಕೊನೆಯ ಉಸಿರು ಇರುವವರೆಗೂ ಆರೋಗ್ಯ ಕಾಪಾಡಿಕೊಂಡು, ಕೆಲಸ ಮಾಡಿಕೊಂಡು ಶಿಸ್ತು ಬದ್ಧವಾಗಿ ಜೀವನ ನಡೆಸಬೇಕು. ಕಿರಿಯರಿಂದ ನಿರೀಕ್ಷೆ ಕಡಿಮೆ ಮಾಡಬೇಕು ಎಂದು ತಿಳಿಸಿದರು.

ವಯಸ್ಸು ಕೇವಲ ಒಂದು ಸಂಖ್ಯೆ, ಮನಸ್ಸಿಗೆ ಜಡ್ಡು ಹಿಡಿಯದಂತೆ ಕ್ರೀಯಾಶೀಲರಾಗಿ ಯಾರ ಮೇಲು ಅವಲಂಬಿತರಾಗದೆ ಆತ್ಮ ವಿಶ್ವಾಸದಿಂದ ಜೀವನ ನಡೆಸಲು ತಿಳಿಸಿದರಲ್ಲದೆ, ಹಿರಿಯರಿಲ್ಲದ ಮನೆ ಕಳಸವಿಲ್ಲದ ಮಂದಿರವಿದ್ದoತೆ ಹಳೇಯ ಬೇರಿನೊಂದಿಗೆ ಹೊಸ ಚಿಗುರು ಎಂಬoತೆ ಕಿರಿಯರು ಹಿರಿಯರ ಜೊತೆಯಲ್ಲಿ ಜೀವನ ನಡೆಸಬೇಕು ಎಂದು ತಿಳಿಸಿದರು.

ಹಿರಿಯರು ಅನಿವಾರ್ಯ ಸಂದರ್ಭಗಳಲ್ಲಿ ವೃದ್ಧಾಶ್ರಮಗಳಲ್ಲಿ ಜೀವನ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದರು.

ಹಿರಿಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದರಲ್ಲದೆ, ಹಿರಿಯರಿಗೆ ಯಾವುದೇ ತೊಂದರೆಯಾದಲ್ಲಿ ಸಹಾಯವಾಣಿ ಸಂಖ್ಯೆ 14567 ಕರೆ ಮಾಡಿ ನಾವೆಲ್ಲರೂ ನಿಮ್ಮ ರಕ್ಷಣೆಗೆ ಇದ್ದೇವೆ ಗೌರವಯುತವಾಗಿ ನಡೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಹಿರಿಯ ನಾಗರೀಕರನ್ನು ಕಿರಿಯರು ಜೊತೆ ಜೊತೆಯಲ್ಲಿ ಜೀವನ ನಡೆಸುವುದರ ಮೂಲಕ ಗೌರವಯುತವಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ, ಮನೆಯಲ್ಲಿ ಮಕ್ಕಳು ಪ್ರತಿನಿತ್ಯ ತಂದೆ ತಾಯಿ ನಡವಳಿಕೆಯನ್ನು ನೋಡುತ್ತಾ ಬೆಳೆಯುತ್ತಾರೆ ಈ ನಿಟ್ಟಿನಲ್ಲಿ ಮನೆಗಳಲ್ಲಿ ಹಿರಿಯರನ್ನು ಪ್ರೀತಿಯಿಂದ ನೋಡಿಕೊಂಡಲ್ಲಿ ತಮ್ಮ ಮಕ್ಕಳು ಮುಂದೆ ಅದನ್ನೇ ಅನುಸರಿಸುತ್ತಾರೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಜಿ.ಕೆ. ಅವರು ಮಾತನಾಡಿ ಪರಸ್ಪರ ಸಂಬoಧ ಪ್ರೀತಿಯಿಂದ ಅರ್ಥ ಮಾಡಿಕೊಂಡಾಗ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಾನಸಿಕವಾಗಿ ಬದಲಾವಣೆ ಮಾಡಿಕೊಂಡು ಹೊಂದಾಣಿಕೆಯಿoದ ಇದ್ದರೆ ಲವಲವಿಕೆಯಿಂದ ಸಂಧ್ಯಾ ಕಾಲದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹಿರಿಯರು ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡಾಗ ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರಲ್ಲದೆ, ಮನುಷ್ಯ ಸಂಘ ಜೀವಿ ಒಂಟಿತನ ಅವರಿಗೆ ದೊಡ್ಡ ಶತ್ರು. ಇಳಿವಯಸ್ಸಿನಲ್ಲಿ ಪತಿ-ಪತ್ನಿ ಇಬ್ಬರಲ್ಲಿ ವಯೋಸಹಜವಾಗಿ ಒಬ್ಬರು ಮೃತಪಟ್ಟ ಸಂದರ್ಭದಲ್ಲಿ ಒಂಟಿತನ ಕಾಡುವುದು ಸಹಜ, ನೋವು ಕಷ್ಟ ಎಲ್ಲರಿಗೂ ಇರುತ್ತದೆ. ಅದನ್ನು ನಗು ನಗುತ್ತಾ ಸ್ವೀಕರಿಸಿ ಜೀವನೋತ್ಸಾಹದಲ್ಲಿ ಜೀವನ ನಡೆಸಬೇಕು ಎಂದರು.

ಸರ್ಕಾರ ಹಿರಿಯ ನಾಗರಿಕರ ಪಾಲನೆ ಪೋಷಣೆ ಹಾಗೂ ಸಂರಕ್ಷಣೆಗಾಗಿ ಜಾರಿಗೆ ತಂದಿರುವ ಕಾಯ್ದೆ ಬಗ್ಗೆ ವಿವರಿಸಿ ಯಾವುದೇ ತೊಂದರೆಗೆ ಸಿಲುಕಿದಾಗ ಕಾನೂನಾತ್ಮಕವಾಗಿ ಉಚಿತ ಸೇವೆಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೀಡಲಾಗುವುದು. ಯಾವುದೇ ಹಿಂಜರಿಕೆ ಮಾಡದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಹಿರಿಯರು ದೇವಸ್ಥಾನದ ಕಳಸವಿದ್ದಂತೆ, ಕುಟುಂಬ ಮತ್ತು ಸಮಾಜದ ನೊಗವನ್ನೊತ್ತವರು. ಬದಲಾದ ಜೀವನ ಶೈಲಿಯಿಂದ ಹಿರಿಯರನ್ನು ಕಡೆಗಣಿಸಿ ಯುವ ಜನತೆ ಸಂಪಾದನೆಗಾಗಿ ಬೇರೆ ಕಡೆಗೆ ಹೋಗುತ್ತಿರುವುದು ಕಂಡು ಬರುತ್ತಿದೆ ಇದರಿಂದ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವುದರಿಂದ ವಂಚಿತರಾಗುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು ಅವರು ಮಾತನಾಡಿ ಹಿರಿಯರು ಛಲ, ಸಹನೆ, ಅಭಿಮಾನ, ಸತ್ಯನಿಷ್ಠೆಯಿಂದ ಇರುತ್ತಾರೆ ಇವರ ಸ್ವತಂತ್ರ‍್ಯವನ್ನು ಮಕ್ಕಳು ಕಿತ್ತುಕೊಳ್ಳದೆ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಮನೆಯಲ್ಲಿಯೇ ಕೂಡಿ ಹಾಕದೆ ಹೊರಗೆ ಓಡಾಡಿಕೊಂಡು ಕೊನೆಯ ದಿನಗಳನ್ನು ಸಂತೋಷವಾಗಿ ಕಳೆಯಲು ಅವಕಾಶ ಕಲ್ಪಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಧರಣಿ, ಹಿರಿಯ ನಾಗರಿಕರ ಮತ್ತು ವಿಕಲಚೇತನರ ಇಲಾಖೆ ಅಧಿಕಾರಿ ಅನುಪಮ ಕೆ.ಆರ್.ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಅನಂತರಾಮು ಮತ್ತು ರಂಗಯ್ಯ ಅವರನ್ನು ಸನ್ಮಾನಿಸಲಾಯಿತು. ದಿನಾಚರಣೆ ಅಂಗವಾಗಿ ನಡೆಸಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend