;

ಮಹಾ ಗೌರಿ ಗಣೇಶ ಸೇವಾ ಸಮಿತಿಯ ವಿವಾದಕ್ಕೆ ತೆರೆ ಎಳೆದ ಇನ್ಸ್ಪೆಕ್ಟರ್ ಸುನಿಲ್ ಕುಮಾರ್…!!!

ಮಹಾ ಗೌರಿ ಗಣೇಶ ಸೇವಾ ಸಮಿತಿಯ ವಿವಾದಕ್ಕೆ ತೆರೆ ಎಳೆದ ಇನ್ಸ್ಪೆಕ್ಟರ್ ಸುನಿಲ್ ಕುಮಾರ್

ಹೊನ್ನಾಳಿ : ಮಹಾ ಗೌರಿ ಗಣೇಶ ಸಮಿತಿ ಪೇಟೆ ,: ವಿಷಯವಾಗಿ ದಿನಪತ್ರಿಕೆ ಯಲ್ಲಿ ಬುಧವಾರ ಪ್ರಕಟಗೊಂಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಬುಧವಾರ ದಿನಾಂಕ 10-9-25 ರಂದು ರಾತ್ರಿ ಸರ್ಕಲ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಹುಲ್ಮನಿ ಠಾಣೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಬಿಸಾಟಿ ನಾಗರಾಜ್ ಅಧ್ಯಕ್ಷರು ಎಂದು ಸಿಪಿಐ ಸುನಿಲ್‌ ಕುಮಾ‌ರ್ ಸ್ಪಷ್ಟನೆ ನೀಡಿದರು.
ಹಿಂದೂ ಮಹಾ ಗೌರಿ ಗಣೇಶ ಸಮಿತಿಯ ಸಭೆ ಕರೆದು ಬಿಸಾಟಿ ನಾಗರಾಜ್ ಮತ್ತು ಎಂ.ಆರ್ ಮಹೇಶ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಸಮಿತಿ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯ ನಂತರ ಅವರು ಈ ವಿಷಯ ತಿಳಿಸಿದರು.
ಪೊಲೀಸ್ ಇಲಾಖೆಗೆ ಆರಂಭದಲ್ಲಿ ಸಮಿತಿ ನೀಡಿದ ಪರವಾನಿಗೆ ಮಾಹಿತಿ ವಿವರಣೆ ಗಮನಿಸಿದ ಪ್ರಕಾರ ಗಣಪತಿ ವಿಸರ್ಜನೆ ವಿಷಯವಾಗಿ ರಸ್ತೆ ಮಾರ್ಗದ
ಮಾಹಿತಿ ನೀಡಿದ್ದನ್ನು ಗಮನಿಸಿ ಇಬ್ಬರು , ಅಧ್ಯಕ್ಷರು ಎಂಬುದಕ್ಕೆ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಸಮ್ಮುಖದಲ್ಲಿ ತೆರೆ ಎಳೆದರು.
ಎಂ ,ಆರ್,ಮಹೇಶ್ ಸಭೆಯಲ್ಲಿ ಪ್ರತಿಕ್ರಿಯೆ ನೀಡಿ, ಬ್ಯಾನರ್‌ಗಳಲ್ಲಿ ಗೌರವ ಅನ್ನುವ ಪದ ಬಿಟ್ಟು ಹೋಗಿರುವುದರಿಂದ ಕ್ಷಮೆಯಾಚನೆ ಇರಲಿ ಎಂದು ಇದರಲ್ಲಿ ಯಾವುದೇ ಗೊಂದಲವಿಲ್ಲವೆಂದರು. ಸಮರ್ಥನೆ ಮಾಡಿಕೊಂಡರು
ಬಿಸಾಟಿ ನಾಗರಾಜ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಅಧ್ಯಕ್ಷರಾಗಿದ್ದು ಸಮಿತಿಯ ಎಲ್ಲಾ ಸದಸ್ಯರ ಬೆಂಬಲ ಮತ್ತು ಪ್ರೋತ್ಸಾಹ ಸಹಕಾರ ದಿಂದ ಕೆಲಸ ಮಾಡಿಕೊಂಡು ಬರುತ್ತಿರುವೆ. ವಿಸರ್ಜನೆಯ ಸಂದರ್ಭದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿಯಾಗಲಿ ಸಾರ್ವಜನಿಕರಲ್ಲಿ ಶಾಂತಿಗೆ ಭಂಗ ಬಂದರೆ ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಮಿತಿ ಪದಾಧಿಕಾರಿಗಳಾದ ನರಸಿಂಹಪ್ಪ ರಾಜು, ಕಡಗಣ್ಣಾರ, ಗುರುಪಾದಯ್ಯ, ವಿನಯ್, ವಗ್ಗರ್ ಮಲ್ಲಿಕಾರ್ಜುನ್, ಮಂಜು, ದೇವು, ಹರೀಶ್, ದಿವಾಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು..

ವರದಿ..ರೇಖಾ ಆರ್ ಲಿಂಗಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;