ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಮತ್ತು ಬೆಳೆಸುವ ನೆಲಗಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಮತ್ತು ಮಾಹಿತಿಯನ್ನು ವಿಸ್ತರಣೆ ಮಾಡುವ ಹಿನ್ನೆಲೆಯಲ್ಲಿ ಚಂದ್ರ ಗ್ರಹಣ ಚಿಂತನ ಮಂಥನ ವೈಜ್ಞಾನಿಕ ವಿಶ್ಲೇಷಣೆ ಕಾರ್ಯಕ್ರಮವನ್ನು ಶ್ರೀ ಡೆವಲಪರ್ಸ್ ತಮಟಕಲ್ಲು ರಸ್ತೆ ಚಿತ್ರದುರ್ಗ ಇಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ. ಎಚ್ಎಸ್ ಕೆ ಸ್ವಾಮಿಯವರು ಖಗೋಳದ ಸಾಮಾನ್ಯ ಸಂಗತಿಗಳಲ್ಲಿ ಒಂದು ಇದರಲ್ಲಿ ಆತಂಕ ಮತ್ತು ಭಯಪಟ್ಟುಕೊಳ್ಳುವ ಅನಿವಾರ್ಯತೆ ಇಲ್ಲ ಎಂದು ಹೇಳಿದರು, ಆಧ್ಯಾತ್ಮಿಕ ಚಿಂತಕರಾದ ಶ್ರೀ ಕುಮಾರ್ ದೇವದತ್ತ ಇವರು ಗ್ರಹಣದ ಆಚರಣೆಗಳು ಸಾಂಪ್ರದಾಯಿಕವಾಗ ಆಚರಣೆ ಹಿಂದಿನಿಂದ ಮಾಡಿಕೊಂಡು ಬಂದಿದ್ದು ಆ ಸಮಯದಲ್ಲಿ ಯಂತ್ರ ಮಂತ್ರ ಸಾಧನೆ ಮಾಡುವವರಿಗೆ ಹೆಚ್ಚಿನ ಶಕ್ತಿ ಲಭಿಸುತ್ತದೆ ಎಂದು ಕೆಲವರು ಗ್ರಹಣದ ಆಚರಣೆಯನ್ನು ಮಾಡುತ್ತಾರೆ ಅವರವರ ಭಾವನೆ ನಂಬಿಕೆಗೆ ಬಿಟ್ಟದ್ದಾಗಿದ್ದು ಆಚರಣೆ ಮಾಡಬಹುದು ಆಚರಣೆ ಮಾಡದೇ ಇರಬಹುದು ಯಾವುದೇ ಬಲವಂತ ವಿಲ್ಲ ಎಂಬ ಮೌಲಿಕವಾದ ಮಾತುಗಳನ್ನು ಹಂಚಿಕೊಂಡರು ಶಿಕ್ಷಕರು ಮತ್ತು ಸಾಹಿತಿಗಳು ಆದಂತಹ ಗೀತಾ ಭರಮಸಾಗರ ಅವರು ಹೀಗೆ ಗ್ರಹಣ ಸಂಭವಿಸುತ್ತದೆ ಎಂಬ ವೈಜ್ಞಾನಿಕವಾಗಿ ತಿಳಿಸುವಂತಹ ಕಾರ್ಯ ಶಿಕ್ಷಕರು ಮಾಡಬೇಕು ಅದರಲ್ಲಿರುವ ಭಯವನ್ನ ನಿವಾರಣೆ ಮಾಡಿ ಮಕ್ಕಳಲ್ಲಿ ಮೌಡ್ಯತೆಯನ್ನ ತೆಗೆಯಬೇಕೆಂಬ ಮೌಲಿಕವಾದ ಮಾತುಗಳನ್ನ ಆಡಿದರು
ಗ್ರಹಗಳು ಪ್ರಕೃತಿಯಲ್ಲಿರುವ ಸಾಮಾನ್ಯ ವಿದ್ಯಮಾನವಾಗಿದೆ ನಾಳೆ ನಡೆಯಲಿರುವಂತಹ ಚಂದ್ರ ಗ್ರಹಣವನ್ನು ಎಲ್ಲರೂ ವೀಕ್ಷಿಸಿ ಬಾಹ್ಯಾಕಾಶದಲ್ಲಿ ನಡೆಯುವಂತಹ ವಿದ್ಯಮಾನವನ್ನು ನಾವೆಲ್ಲರೂ ವೈಜ್ಞಾನಿಕವಾಗಿ ಚಿಂತಿಸಿ ವೈಜ್ಞಾನಿಕ ಮನೋಭಾವನೆ ಮೂಡಿಸಬೇಕಾಗಿದ್ದು ನಮ್ಮ ರಾಜ್ಯ ಕರ್ತವ್ಯ ಎಂದರು ಗ್ರಹಣಗಳು ಪ್ರತಿ ಬಾರಿಯೂ ಬಂದಾಗ ಮಾಧ್ಯಮಗಳಲ್ಲಿ ತುಂಬಾ ಚರ್ಚೆಗಳಾಗಿ ಆಗುತ್ತಾ ಇರುತ್ತವೆ ಆದರೆ ಗ್ರಹಣ ಪ್ರಾಕೃತಿಕ ವಿದ್ಯಮಾನಗಳಲ್ಲಿ ನಡೆಯುತ್ತಾ ಇರುತ್ತದೆ ಹಾಗೂ ಕೆಲವರು ಇದನ್ನ ಆಚರಣೆಯ ಮೂಲಕ ವೈಜ್ಞಾನಿಕವಾಗಿಯೂ ಸಾಂಪ್ರದಾಯಿಕವಾಗಿಯೂ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಈ ವಿಷಯಗಳನ್ನ ಇಂದಿನ ಮಕ್ಕಳಲ್ಲಿ ತಿಳಿಸಿ ಅರಿವು ಮೂಡಿಸುವಂತಹ ಕಾರ್ಯಕ್ರಮ ಆಗಬೇಕು ಎಂಬುದನ್ನು ಚುಟುಕು ಸಾಹಿತಿಯಾದ ವಿನಾಯಕ ಅವರು ತಿಳಿಸಿದರು ಲೇಖಕರು ವೈದ್ಯರು ಆದಂತಹ ನವೀನ್ ಡಾಕ್ಟರ್ ಸಜ್ಜನ್ ಅವರು ಗ್ರಹಣದ ಬಗ್ಗೆ ಮಾತನಾಡುತ್ತಾ ಗ್ರಹಣದ ಸಮಯದಲ್ಲಿ ಗರ್ಭಿಣಿ ಮಹಿಳೆಯರು ವೃದ್ಧರು ಮಕ್ಕಳು ಹೊರಬರದೆ ಇರುವುದು ಹಾಗೂ ಗ್ರಹಣ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ಆಹಾರವನ್ನು ತೆಗೆದುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು…

ವಿನಾಯಕ ಆರ್ ಜಿ
ವರದಿಗಾರರು ಚಿತ್ರದುರ್ಗ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
