ಕೂಡ್ಲಿಗಿ : ಕ್ರೀಡೆಯಿಂದ ಮಾನಸಿಕ ಧೈಹಿಕ ಸದೃಢತೆ ಸಾಧ್ಯ – ಸ್ನೇಹಿತರ ಬಳಗ ಅಬ್ದುಲ್ ರಹೆಮಾನ್…
ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ರೀಡೆಯಿಂದ ಮಾನಸಿಕ , ಹಾಗೂ ಧೈಹಿಕ ಸದೃಢತೆ ಸಾಧ್ಯ ಎಂದು. ಸ್ನೇಹಿತರ ಬಳಗದ ಅಧ್ಯಕ್ಷರು , ಹಾಗೂ ಸಮಾಜ ಸೇವಕರಾದ ಅಬ್ದುಲ್ ರಹೆಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಟ್ಟಣದ ಪರಿಶಿಷ್ಟ ಜಾತಿ , ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡಿದರು. ಅವರು ಸ್ನೇಹಿತರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ , ಸ್ಪ್ರರ್ಧಾತ್ಮ ಪರೀಕ್ಷೆಗಳಿಗೆ ತಯಾರಿ , ಕ್ರೀಡಾಸಕ್ತಿ ಬೇಳೆಸಿಕೊಳ್ಳುವುದು. ಹಾಗೂ ಕ್ರೀಡಾ ಮನೋಭಾವ ಪರೀಕ್ಷೆಗಳನ್ನು ಎದುರಿಸುವ ಕುರಿತು , ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಗಾರದಲ್ಲಿ ಮಾತನಾಡಿದರು. ಸದೃಢ ಯುವ ಪೀಳಿಗೆಯಿಂದಲೇ , ಸದೃಢ ಸಮಾಜ ಹಾಗೂ ಸದೃಢ ದೇಶ ನಿರ್ಮಾನಣ ಸಾಧ್ಯ ಎಂದರು. ಇದಕ್ಕೂ ಮುನ್ನ ವಸತಿ ನಿಲಯದ ವಿದ್ಯಾರ್ಥಿಗಳಿಗೆ , ವಾಲೀಬಾಲ್ ಕ್ರೀಡೆ ಸೇರಿದಂತೆ , ವಿವಿದ ಕ್ರೀಡೆಗಳನ್ನು ಜರುಗಿಸಲಾಯಿತು. ಕಾರ್ಯಗಾರದ ಕೊನೆಯಲ್ಲಿ , ಕ್ರೀಡೆಗಳಲ್ಲಿ ಭಾಗವಹಿಸಿ ವಿಚೇತರಾದವರಿಗೆ , ಬಹುಮಾನಗಳನ್ನು ವೇದಿಕೆಯಲ್ಲಿ ನೀಡಲಾಯಿತು. ಸ್ನೇಹಿತರ ಬಳಗದ ಪದಾಧಿಕಾರಿಗಳಾದ , ರೈಲ್ವೇ ಇಲಾಖೆಯ ಸಿಬ್ಬಂದಿ ಅಬ್ದುಲ್ ವಾಹಿದ್ , ಅಬ್ದುಲ್ ಫಯಾಜ್ , ಬಸವರಾಜ್ , ನಿಸಾರ್ , ಫಹರುದ್ಧೀನ್ ವೇದಿಕೆಯಲ್ಲಿದ್ದರು. ವಸತಿ ನಿಲಯದ ವಿದ್ಯಾರ್ಥಿಗಳು , ವಸತಿ ನಿಲಯದ ಸಿಬ್ಬಂದಿಯವರು ಯುವ ಗಣ್ಯರು ಉಪಸ್ಥಿತರಿದ್ದರು….

ವರದಿ.. ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
