;

ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನವಾಗಿದ್ದು, ಮಗುವಿಗೆ ಹಾಲುಣಿಸುವುದು ಪ್ರತಿಯೊಬ್ಬ ತಾಯಿಯ ಜವಾಬ್ಧಾರಿ…!!!

ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನವಾಗಿದ್ದು,
ಮಗುವಿಗೆ ಹಾಲುಣಿಸುವುದು ಪ್ರತಿಯೊಬ್ಬ ತಾಯಿಯ
ಜವಾಬ್ಧಾರಿಯಾಗಿದೆ:ಶ್ರೀಮತಿಮಾನಸಮಂಜುನಾಥ್
ಹಿರಿಯೂರು :
ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನವಾಗಿದ್ದು, ಮಗುವಿಗೆ ಹಾಲುಣಿಸುವುದು ಪ್ರತಿಯೊಬ್ಬ ತಾಯಿಯ ಜವಾಬ್ಧಾರಿಯಾಗಿರುತ್ತದೆ, ಈ ನಿಟ್ಟಿನಲ್ಲಿ ತಾಯಿಗೆ ಎದೆ ಹಾಲು ಹೆಚ್ಚಾಗಲು ಪೌಷ್ಟಿಕಾಂಶಯುಕ್ತ ಆಹಾರವನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ ಎಂಬುದಾಗಿ ಮನವಿಟ್ರಸ್ಟ್ ಅಧ್ಯಕ್ಷರಾಧ ಮಾನಸ ಮಂಜುನಾಥ್ ಅವರು ಹೇಳಿದರು.
ನಗರದ ನೆಹರು ಮೈದಾನದಲ್ಲಿರುವ ಗೋಪಾಲಪುರದ 3 ನೇ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಸ್ತನ್ಯಪಾನ ಸಪ್ತಾಹ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಗು ಹುಟ್ಟಿದ ಅರ್ಧ ಗಂಟೆ ಅಥವಾ ಒಂದು ತಾಸಿನ ಒಳಗೆ ಗಟ್ಟಿ ಗಿಣ್ಣವಾದ ಹಾಲನ್ನು ಮಗುವಿಗೆ ಕೊಡಬೇಕು ಇದರಿಂದ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, 6 ತಿಂಗಳವರೆಗೂ ಮಗುವಿಗೆ ತಾಯಿಯ ಎದೆ ಹಾಲನ್ನು ಮಾತ್ರ ಕುಡಿಸಬೇಕು ಇದರಿಂದ ತಾಯಿ ಮತ್ತು ಮಗುವಿನ ಭಾಂದವ್ಯ ಹೆಚ್ಚಾಗುತ್ತದೆ ಎಂಬುದಾಗಿ ಅವರು ಹೇಳಿದರು.
ನರ್ಸ್ ಸಣ್ಣರಂಗಮ್ಮ ಅವರು ಮಾತನಾಡಿ, ಎದೆಹಾಲಿನ ಉಪಯೋಗಗಳು, ಎದೆ ಹಾಲು ಕುಡಿಸುವ ರೀತಿ, ಮಗುವಿಗೆ ಹಾಲು ಸೇವನೆ ಮಾಡಿಲ್ಲದಿದ್ದಾಗ ಆಗುವಂತಹ ದುಷ್ಪರಿಣಾಮಗಳು ಮತ್ತು ತಾಯಿ ಮಗುವಿನ ಅರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಾರರಾದ ಶ್ರೀಮತಿ ಶ್ರೀರಂಗಮ್ಮಾ, ಮನವಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿಮಾನಸ ಮಂಜುನಾಥ್, ಪಿ.ಹೆಚ್.ಸಿ.ಓ.ಇಂದ್ರಮ್ಮ, ಉಷಾ, ಸುಂದ್ರಮ್ಮ, ಶ್ವೇತಾ, ಗುಲಾಬ್, ಗಂಗಮ್ಮ, ಗಾಯಿತ್ರಿ, ರೂಪ, ಶ್ರೀದೇವಿ, ನಹಿಮಾಬಾನು, ಯಮುನಾ, ಹಾಗೂ ನಗರಧ ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಸಹಾಯಕಿಯವರು, ಗರ್ಭಿಣಿಯರು ಬಾಣಂತಿಯರು , ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;