ಮೊಳಕಾಲ್ಮುರು :- ಸಂಭ್ರಮ ಶನಿವಾರದಲ್ಲಿ ಮಕ್ಕಳ ಕಲರವ
ಅಲ್ಲಿ ಬಲು ಬರವಿರುವ ಬ್ಯಾಗ್ ಗಳ ದರ್ಶನ ಇಲ್ಲ, ಪುಸ್ತಕಗಳ ಭಾರವಿಲ್ಲ, ಮಕ್ಕಳ ಸಂಭ್ರಮಕ್ಕೆ ಅಡ್ಡಿ ಇಲ್ಲ. ಈ ದೃಶ್ಯಾವಳಿಗಳು ಕಂಡು ಬಂದಿದ್ದು ತಾಲೂಕಿನ ಕೊಂಡ್ಲಹಳ್ಳಿಯ ಹೊಸ ಗೊಲ್ಲರಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ.
ಇಲಾಖೆಯ ಆದೇಶದ ಅನ್ವಯ ಸರ್ಕಾರಿ ಶಾಲೆಯಲ್ಲಿ ಸಂಭ್ರಮ ಶನಿವಾರದ ಸಡಗರ ಕಂಡು ಬಂದಿತು. ಇದರ ಅಂಗವಾಗಿ ಮಕ್ಕಳು ಶಾಲಾ ಪುಸ್ತಕ, ಬ್ಯಾಗ್ ಗಳನ್ನು ತರದೆ ನಲಿಯುತ್ತಾ, ಕುಣಿಯುತ್ತಾ ಶಾಲೆಗೆ ಬಂದಿದ್ದರು.
ಶಾಲೆಯಲ್ಲಿ ಎಂದಿನಂತೆ ನಿಗದಿತ ಪಾಠಗಳಿಗೆ ಬದಲಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಶಾಲೆಯ ಶಿಕ್ಷಕರು ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆಯನ್ನು ನಿರ್ವಹಿಸಿದರು. ವಿದ್ಯಾರ್ಥಿಗಳೇ ನಿರೂಪಕರಾಗಿ ಎಲ್ಲಾ ಚಟುವಟಿಕೆಗಳಲ್ಲಿ ವಿವಿಧ ತಂಡಗಳಾಗಿ ನಾಯಕತ್ವ ವಹಿಸಿದ್ದರು.
ಸಂಭ್ರಮದ ಶನಿವಾರದ ಚಟುವಟಿಕೆಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಖಾಸಗಿ ಶಾಲಾ ಮಕ್ಕಳಿಗೆ ತಾವೇನು ಕಮ್ಮಿ ಇಲ್ಲ ಎನ್ನುವಂತೆ ತೋರಿಸುತ್ತಾರೆ ಎಂದು ಮುಖ್ಯ ಶಿಕ್ಷಕ ಕೆ ಟಿ ತಿಪ್ಪೇಶ್ ಹೇಳಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿಯ ಅಧ್ಯಕ್ಷ ದಿನೇಶ್ ಸಹ ಶಿಕ್ಷಕರಾದ ಅನಿತಾ ಯೋಗೇಶ್ ತಿಪ್ಪೇಸ್ವಾಮಿ ಪೋಷಕರಾದ ಭಾಗ್ಯಮ್ಮ ಕ್ಯಾತಮ್ಮ ಮಂಜಮ್ಮ ಲಕ್ಷ್ಮಿ ರೇಣುಕಾ ಇತರರಿದ್ದರು.

ವರದಿ :-ಕೊಂಡ್ಲಹಳ್ಳಿ ಉಮೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
