;

ಬೆಳೆ ಪರಿಸ್ಥಿತಿ ಖುದ್ದು ಅವಲೋಕಿಸಿದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್…!!!

ಬರ ನಿರ್ವಹಣೆ ಹಿನ್ನೆಲೆ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ

ಬೆಳೆ ಪರಿಸ್ಥಿತಿ ಖುದ್ದು
ಅವಲೋಕಿಸಿದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್

ಕಂದಾಯ ಇಲಾಖೆ ಸೂಚನೆಯಂತೆ ಕೊಪ್ಪಳ ಜಿಲ್ಲೆಯಲ್ಲಿ ಸಹ ಆಗಸ್ಟ್ 28 ರಿಂದ ಆರಂಭಗೊಂಡು ಆಗಸ್ಟ್ 30ರವರೆಗೆ ನಡೆಯಲಿರುವ ಬರ ನಿರ್ವಹಣೆ ಹಿನ್ನೆಲೆಯ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಆಗಸ್ಟ್ 29ರಂದು ಖುದ್ದಾಗಿ ಪರಿಶೀಲಿಸಿದರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ರಾಹುಲ್ ಪಾಂಡೆ ತಹಶೀಲ್ದಾರ್ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಕುಕುನೂರು ತಾಲೂಕಿನ ತಳಕಲ್ ಬನ್ನಿಕೊಪ್ಪ ಇಟಗಿ ಗ್ರಾಮ ಗಳಿಗೆ ಯಲ್ಬುರ್ಗಾ ತಾಲೂಕಿನ ತುಂಬರಗುದ್ದಿ ಮತ್ತು ಬಂಡಿ ಗ್ರಾಮಗಳಿಗೆ ಕುಷ್ಟಗಿ ತಾಲೂಕಿನ ಹನುಮಸಾಗರ ಮತ್ತು ಚಳಗೇರಿ ಸೇರಿದಂತೆ ಇನ್ನಿತರ ಗ್ರಾಮಗಳ ರೈತರ ಜಮೀನುಗಳಿಗೆ ತೆರಳಿ ಬೆಳೆ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿದರು ತಿಮ್ಮಾರೆಡ್ಡಿ ಹುನಗುಂದ ಅವರು ಈರುಳ್ಳಿ ಬೆಳೆ ಮುದಿಯಪ್ಪ ಅವರು ಮುಸುಕಿನ ಜೋಳದ ಬೆಳೆ ಇಟಗಿ ಗ್ರಾಮದ ರೈತರದ ಮಂಜಯ್ಯ ಸಸಿ ಮಠ ಅವರ ಈರುಳ್ಳಿ ಬೆಳೆ ಕಮಲಾಕ್ಷಿ ಅವರ ಮುಸುಕಿನ ಜೋಳದ ಬೆಳೆಗಳು ತೇವಾಂಶ ಕೊರತೆಯಿಂದ ಹಾನಿಯಾದ ಪ್ರಮಾಣವನ್ನು ಜಿಲ್ಲಾಧಿಕಾರಿಗಳು ಅವಲೋಕಿಸಿದರು ಯಲಬುರ್ಗಾ ಕುಷ್ಟಗಿ ತಾಲೂಕುಗಳಲ್ಲಿ ರೈತರ ಜಮೀನಿನ ಸಹ ತೆರಳಿ ಮೆಕ್ಕೆಜೋಳ ಸಜ್ಜೆ ತೊಗರಿ ಹತ್ತಿ ಶೇಂಗಾ ಬೆಳೆಗಳು ಸಹ ತೇವಾಂಶ ಕೊರತೆಯಿಂದಾಗಿ ಹಾನಿಯಾದ ಬಗ್ಗೆ ವೀಕ್ಷಣೆ ನಡೆಸಿದರು ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸರ್ಕಾರದ ಪರೀಕ್ಷಿತ ಬರ ಕೈಪಿಡಿ 2020 ರ ಅನ್ವಯ ಹಂತ ಒಂದು ಮತ್ತು ಹಂತ ಎರಡರಲ್ಲಿ ಸೂಚಿಸುವ ಮಾನದಂಡಗಳ ಅನ್ವಯ ಪರಿಶೀಲಿಸಿ ಪ್ರಸಕ್ತ ಮುಂಗಾರು ಜೂನ್ ಒಂದರಿಂದ ಆಗಸ್ಟ್ 19ರ ಅವಧಿಯಲ್ಲಿ ರಾಜ್ಯದಲ್ಲಿ ತೀವ್ರ ಪರ ಮತ್ತು ಸಾಧಾರಣ ಬರ ಪರಿಸ್ಥಿತಿ ಕಂಡು ಬಂದಿರುವ ವಿವಿಧ ತಾಲೂಕುಗಳನ್ನು ಬರ ಪರಿಸ್ಥಿತಿ ಉದ್ಭವಿಸಿರುವ ತಾಲೂಕುಗಳೆಂದು ಗುರುತಿಸಲಾಗಿದೆ ಮೂರನೇ ಹಂತದಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿರುವ ತಾಲೂಕುಗಳಲ್ಲಿ ಶೇಕಡ ಹತ್ತರಷ್ಟು ಗ್ರಾಮಗಳನ್ನು ಆಯ್ಕೆ ಮಾಡಿ ಪ್ರಮುಖ ಬೆಳೆಗಳನ್ನು ಗುರುತಿಸಿ ಪ್ರತಿ ಬೆಳೆಗಳ ಸುಮಾರು 5 ಸೆಟ್ಸ್ ಗಳನ್ನ ಈ ಆಡಳಿತ ಇಲಾಖೆಯ ಅಭಿವೃದ್ಧಿಪಡಿಸಿರುವ ಆಪ್ ಮೂಲಕ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಮಾಡಲು ತಿಳಿಸಿದ ಪ್ರಕ್ರಿಯೆಯು ಈ ಹಿಂದೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿರ್ದೇಶನ ನೀಡಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಸಹ ಆಗಸ್ಟ್ 31ರ ಒಳಗೆ ಪೂರ್ಣವಾಗಬೇಕು ಎಂದು ಅವರು ಗಡುವು ವಿಧಿಸಿದರು ಬರ ನಿರ್ವಹಣೆ ಕ್ಷೇತ್ರ ಪರಿಶೀಲನೆ ಮತ್ತು ದೃಡೀಕರಣ ಪ್ರಕ್ರಿಯೆ ಹಿನ್ನೆಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ರಚಿಸಲಾಗಿರುವ ಜಂಟಿ ಸಮೀಕ್ಷೆ ತಂಡಗಳು ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ ಮಾರ್ಗಸೂಚಿ ಅನ್ವಯ ಕಾರ್ಯನಿರ್ವಹಿಸಬೇಕು ಮತ್ತು ಸುತ್ತೋಲೆಯಲ್ಲಿ ತಿಳಿಸಿದ ವೇಳಾಪಟ್ಟಿ ಅನುಸಾರ ನಿಗದಿತ ಅವಧಿ ಒಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು 2023 24ನೆಯ ಸಾಲಿನಲ್ಲಿ ಬರ ನಿರ್ವಹಣೆ ಕೊರತೆಯಂತೆ ಕೊಪ್ಪಳ ಜಿಲ್ಲೆಯಲ್ಲಿ ನಿಗದಿತ ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ ನಡೆಯುತ್ತಿದೆ ಕಂದಾಯ ಕೃಷಿ ತೋಟಗಾರಿಕೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ರಚನೆಯಾಗಿರುವ ತಂಡಗಳು ವಿವಿಧಡೆ ಕಾರ್ಯ ಪ್ರವೃತ್ತವಾಗಿವೆ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣ ಪ್ರಕ್ರಿಯೆ ನಡೆಸಲು ಯಲಬುರ್ಗಾ ತಾಲೂಕಿನಲ್ಲಿ 9 ಗಂಗಾವತಿ ತಾಲೂಕಿನಲ್ಲಿ ಹೇಳು ಕುಷ್ಟಗಿ ತಾಲೂಕಿನಲ್ಲಿ 18 ಕುಕನೂರು ತಾಲೂಕಿನಲ್ಲಿ ಆರು ಕನಕಗಿರಿ ತಾಲೂಕಿನಲ್ಲಿ 8 ಸೇರಿ ಒಟ್ಟು 48 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ ತಲಾ ಒಂದು ಹಳ್ಳಿಗೆ ಒಬ್ಬರಂತೆ ಅಧಿಕಾರಿಯನ್ನು ನೇಮಿಸಿ ಮೇಲುಸ್ತುವಾರಿ ನಡೆಸಲಾಗುತ್ತದೆ ಎಂದು ಇದೇ ವೇಳೆ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಒಪ್ಪಂದ ಕುಕುನೂರು ಯಲಬುರ್ಗಾ ಮತ್ತು ಕುಷ್ಟಗಿ ತಶಿಲ್ದಾರರು ಕೃಷಿ ಉಪನಿರ್ದೇಶಕರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಸಹಾಯಕ ಕೃಷಿ ನಿರ್ದೇಶಕರು ಕಂದಾಯ ವೀಕ್ಷಕರು ಮತ್ತು ಇನ್ನಿತರರು ಇದ್ದರು…

ವರದಿ. ಸಂಗೀತ ಪಾಟೀಲ್ ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;