ಬಾಗಲಕೋಟೆ ಜಿಲ್ಲೆಯ ಬಿಳಗಿ ಕ್ರಾಸಿನಲ್ಲಿರುವ ಶ್ರೀ ಧ್ಯಾನಸಿದ್ಧಾಶ್ರಮ
ಪ್ರತಿಷ್ಠಿತ ಬಿಳಗಿ ಕ್ರಾಸಿನಲ್ಲಿರುವ ಜ್ಞಾನ ಸಿದ್ದಾಶ್ರಮದಲ್ಲಿ ಪರಮ ಪೂಜ್ಯ ಶ್ರೀ ಜ್ಞಾನಾನಂದ ಮಹಾಸ್ವಾಮಿಗಳು ಹಾಗೂ ಮಾತೃಶ್ರೀ ಸರಸ್ವತಿ ತಾಯಿಯವರು ಪೂಜ್ಯತ್ವಯರು ಆಶ್ರಮವನ್ನು ಸ್ಥಾಪಿಸಿದ್ದು ಈಗ ಶ್ರಾವಣ ಮಾಸದ ಪ್ರಯುಕ್ತ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು ಶ್ರೀ ನವಲಗುಂದ ನಾಗಲಿಂಗಪ್ಪನವರ ಚರಿತ್ರೆಯನ್ನು ಹೇಳುತ್ತಿದ್ದಾರೆ, ಶ್ರೀ ಜ್ಞಾನಾನಂದ ಮಹಾಸ್ವಾಮಿಗಳು ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು ಅಧ್ಯಾತ್ಮದಲ್ಲಿ ಪರಮಪೂಜ್ಯ ಶ್ರೀ ಸೋಮಲಿಂಗೇಶ್ವರ ಮಹಾಸ್ವಾಮಿಗಳು ಮುಂಡಗನೂರ ಅವರ ಕೃಪಾಶೀರ್ವಾದದೊಂದಿಗೆ ಅಧ್ಯಾತ್ಮವನ್ನು ಪ್ರವೇಶಿಸಿದ ಪೂಜ್ಯರು ಶ್ರಾವಣ ಮಾಸದ 9 ನೇ ದಿನದಂದು ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಪಪ್ಪು ಜ್ಞಾನಾನಂದ ಮಹಾಸ್ವಾಮಿಗಳು ವಹಿಸಿದ್ದರು.ನೇತೃತ್ವವನ್ನ ಮಾತೋಶ್ರೀ ಸರಸ್ವತಿ ತಾಯಿಯವರು ವಹಿಸಿದ್ದರು,ನಾವು ಏನೇ ಕಾರ್ಯವನ್ನ ಮಾಡಿದರು ನಿಷ್ಕಾಮ ಬುದ್ಧಿಯಿಂದ ಈಶ್ವರಾರ್ಪನ ಬುದ್ಧಿಯಿಂದ ಮಾಡಬೇಕು ಪಾಪವು ನರಕದಲ್ಲಿ ಬಂಧಿಸಿದರೆ ಪುಣ್ಯವು ಸ್ವರ್ಗದಲ್ಲಿ ಬಂಧಿಸುತ್ತದೆ ಎಂದು ಮಾತುಶ್ರೀ ಇವರು ಹೇಳಿದರು .ನಂತರ ಅಧ್ಯಕ್ಷತೆಯನ್ನು ವಹಿಸಿದ ಪೂಜ್ಯರು ಮನುಷ್ಯನಿಗೆ ಮುಖ್ಯವಾಗಿ ಏಳು ಸಂಪತ್ತುಗಳು ಬೇಕು ವಿದ್ಯಾ ತಪಸ್ಸು ದಾನ ಧ್ಯಾನ ಶೀಲ ನಡತೆ ಸದ್ಗುಣ ಎಂದು ಹೇಳಿದರು. ಶಾಸ್ತ್ರಪುರಾಣ ಪ್ರವಚನಗಳಿಂದ ಕೇಳುವುದರಿಂದ ಆಗುವ ಲಾಭಗಳನ್ನು ಪೂಜ್ಯರು ಮಾರ್ಮಿಕವಾಗಿ ಒಂದು ಕಥೆಯ ರೂಪದಲ್ಲಿ ಹೇಳಿದರು ಕಾಶಿಯಲ್ಲಿ ಸಾಕಷ್ಟು ಸನ್ಯಾಸಿಗಳು ಮಹಾತ್ಮರು ಸಂತರು ಅಭ್ಯಾಸ ಮಾಡಲು ಹೋಗುತ್ತಿದ್ದರು ಆ ಮಠದ ಮುಂದೆ ಒಂದು ಹಡಪ ಹತ್ತಿದೆ ನಾಯಿ ಮಲಗಿ 12 ವರ್ಷಗಳ ಕಾಲ ಶಾಸ್ತ್ರವನ್ನ ಕೇಳಿ 12 ವರ್ಷದ ನಂತರ ಅದು ಮರಣವನ್ನ ಹೊಂದಿತು ಪ್ರವಚನ ಕೇಳಿದ ನಾಯಿ ತೀರಿದ ಮೇಲೆ ರಾಜನ ಮನೆಯಲ್ಲಿ ರಾಜನ ಮಗಳಾಗಿ ಜನ್ಮ ತಾಳಿ ಬಂದು ಮುಂದಿನ ಜನ್ಮದಲ್ಲಿ ಶಬರಿಯಾಗಿ ಹುಟ್ಟಿದಳಂತೆ ಇದು ಪ್ರವಚನ ಪಾಠ ಮುಂತಾದವುಗಳನ್ನು ಕೇಳುವುದರಿಂದ ಆಗುವ ಲಾಭ ಎಂದು ಹೇಳಿದರು .
ನಾವು ಮಾಡುವ ಕೆಲಸ ಭಗವಂತನ ಕೆಲಸವೆಂದು ಮಾಡಬೇಕು ಇದು ಭಗವಂತನ ಸೇವೆ ಎಂದು ಮಾಡಿದರೆ ಸಂಸಾರ ಹಗುರವಾಗುತ್ತದೆ ಧನ ಕನಕ ಕಾಮಿನಿಯ ರಿಂದ ಸುಖವಿಲ್ಲ ಒಂದು ವೇಳೆ ಹಾಗೆ ತಿಳಿದಿದ್ದರೆ ಅದು ಅಜ್ಞಾನ ಎಂದು ಹೇಳಿದರು .
ಮನುಷ್ಯನು ತನ್ನ ಆಯುಷ್ಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದಾನೆ ಮನುಷ್ಯನು ತನ್ನ ಹತ್ತನೇ ವಯಸ್ಸಿಗೆ ಹಕ್ಕಿಯಂತೆ ಹಾರಿ 20ನೇ ವರ್ಷಕ್ಕೆ ನಕ್ಕು ಅಂದರೆ ಮಾಯ ಮಮಕಾರಗಳಿಗೆ ಒಳಗಾಗಿ 30ನೇ ವರ್ಷಕ್ಕೆ ಮುರುಕು ಎಂದರೆ ಮದುವೆಯಾಗಿ ಅಣ್ಣ ತಮ್ಮಂದಿರು ಬೇರೆ ಬೇರೆಯಾಗಿ 40ನೇ ವಯಸ್ಸಿಗೆ ನಾಚಿಕೆ ಅಂದರೆ ಕೂದಲು ಬೆಳ್ಳಗೆಯಾಗಿ 50ನೇ ವಯಸ್ಸಿಗೆ ಅರು ಎಂದರೆ ಮಕ್ಕಳ ಮದುವೆ ಮುಂದೆ ಮಾಡಿದರು, ಯಾರು ಸೇರುವುದಿಲ್ಲ ಅವಾಗ ಅವನಿಗೆ ಅರು ಬರುತ್ತದೆ 60ನೇ ವಯಸ್ಸಿನಲ್ಲಿ ಮರು ಎಂದರೆ ಇಟ್ಟಿದ್ದು ಇಟ್ಟಲ್ಲೇ ಕೊಟ್ಟಿದ್ದು ಕೊಟ್ಟಲ್ಲೇ ಮರೆತು ಬಿಡುವುದು 70ನೇ ವಯಸ್ಸಿನಲ್ಲಿ ತ್ಯಾಗ ಎಂದರೆ ಸಕ್ಕರೆ ತಿಂದರೆ ಸಕ್ಕರೆ ಕಾಯಿಲೆ ಚಪಾತಿ ತಿನ್ನುವ ಹಂಗಿಲ್ಲ ಹೀಗೆ 80ನೇ ವಯಸ್ಸಲ್ಲಿ ಬಾಗುತ್ತಾನೆ ಎಂದರೆ ಮೈಯಲ್ಲಿ ಶಕ್ತಿ ಇಲ್ಲ ಕೈಕಾಲಲ್ಲಿ ಶಕ್ತಿ ಇಲ್ಲ ಎಂದಾಗುತ್ತದೆ 90ನೇ ವಯಸ್ಸಿನಲ್ಲಿ ರೋಗಿಯಾಗುತ್ತಾನೆ 100ನೇ ವಯಸ್ಸಿನಲ್ಲಿ ಅವನನ್ನು ಹೊತ್ತುಕೊಂಡು ಹೋಗಿ ಎಂಬಂತೆ ಮನುಷ್ಯನ ಜೀವನ ಎಂದು ಹೇಳಿದರು ಪೂಜರು 12ನೇ ಶತಮಾನದ ಎಲ್ಲಾದರ ಶರಣರನ್ನ ನೆನಪಿಸಿದರು ಕೊನೆಗೆ ಮಾತು ಶ್ರೀ ಅವರಿಂದ ಕಾರ್ಯಕ್ರಮವು ಮಂಗಳವಾಯಿತು…

ವರದಿ ,ಶ್ರೀ ಬಿ ಎಮ್ ಗಡಗಿ ಮುಂಡಗನೂರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
