ಕರ್ಕಿಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕಾನೂನು
ಜಿಲ್ಲಾ ಅಧಿಕಾರ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ನ್ಯಾಯವಾದಿಗಳ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಕರ್ಕಿಹಳ್ಳಿಯವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 24ರಂದು ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯತ್ವ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಶಾಲಾ ಮಕ್ಕಳೊಂದಿಗೆ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಯಾದವನು ಖಾಲಿ ಪಾತ್ರೆಯಂತೆ ಬಂದು ಶಾಲೆಯಿಂದ ಜ್ಞಾನವೆಂಬ ಅರಿವನ್ನು ಪಡೆಯುತ್ತಾನೆ ನಾವೇ ನಟಿಸಿ ನಾವೇ ನಿರ್ದೇಶಿಸಿ ನಾವೇ ನೋಡುವ ಬಣ್ಣ ಬಣ್ಣದ ಚಿತ್ರವೇ ನಮ್ಮ ಜೀವನ ಪ್ರೌಢಾವಸ್ಥೆಯಲ್ಲಿ ವಿದ್ಯಾರ್ಥಿಗಳು ಮನಸ್ಸನ್ನು ಹರಿ ಬಿಡಬಾರದು ಅದಿ ವಯಸ್ಸಿನಲ್ಲಿ ಮನಸ್ಸು ಚಂಚಲವಾಗುವುದು ಸಹಜ ಆದರೆ ಓದು ಮತ್ತು ಅಧ್ಯಯನದತ್ತ ಗಮನಹರಿಸಿದ್ದಲ್ಲಿ ಸಾಧನೆ ಇದೆ ಎಂದು ತಿಳಿಸಿದರು ವಸತಿ ಶಾಲೆಯ ಪ್ರಭಾರ ಪ್ರಾಚಾರ್ಯರು ಹಾಗೂ ಹಿಂದಿ ಭಾಷಾ ಶಿಕ್ಷಕರಾದ ಸತ್ಯಪ್ಪ ಕಂಬಳಿ ಅವರು ಅಧ್ಯಕ್ಷತೆ ವಹಿಸಿದ್ದರು ಅಭಿಕ್ಷಕರಾದ ರವೀಂದ್ರ ವಿ ಸಿಗನಳ್ಳಿ ನಿಲಯ ಪಾಲಕರಾದ ಬಸವರಾಜ ಕಟ್ಟಿಗಿ ಸೇರಿದಂತೆ ಮತ್ತು ಇಂಗ್ಲಿಷ್ ಶಿಕ್ಷಕರಾದ ಸಂಗಪ್ಪ ನವಲಿ ನಿರೂಪಿಸಿದರು ಬೋಧಕ ಬೋಧಕೇತರ ಸಿಬ್ಬಂದಿಗಳು ವಸತಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು..

ವರದಿ,ಸಂಗೀತಾ ಪಾಟೀಲ್ ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
