;

ದೊಡ್ಡ ಉಳ್ಳರ್ತಿ ಓಂ ಕ್ರಿಕೆಟರ್ಸ್ ವತಿಯಿಂದ ದಿವಂಗತ ಶ್ರೀಮತಿ ರಾಮಸುಬ್ಬಮ್ಮ ರವರ ಸ್ಮರಣಾರ್ಥವಾಗಿ 25ನೇ ಬಾರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನೆಂಟ್…!!!

ಇಂದು ದೊಡ್ಡ ಉಳ್ಳರ್ತಿ ಓಂ ಕ್ರಿಕೆಟರ್ಸ್ ವತಿಯಿಂದ ದಿವಂಗತ ಶ್ರೀಮತಿ ರಾಮಸುಬ್ಬಮ್ಮ ರವರ ಸ್ಮರಣಾರ್ಥವಾಗಿ 25ನೇ ಬಾರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನೆಂಟ್ ಆಯೋಜಿಸಲಾಗಿತ್ತು. ಪಂದ್ಯದ ಉದ್ಘಾಟನೆಯಾನ್ನು ಎಂ ಎಸ್ ಎಂ ಪ್ರಸನ್ನ ರವರು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆ ಮನುಷ್ಯನ ಮನಸ್ಸು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹವನ್ನು ಉತ್ಸಾಹದಿಂದ ಇಡಲು ಸಹಕರಿಸುತ್ತದೆ ಎಂದರು.

ಏಷ್ಟೋ ಯುವಕರು ಕ್ರೀಡೆಗಳಿಂದ ಉತ್ತಮವಾದ ರಾಷ್ಟ್ರ ಮಟ್ಟದ ಹೆಸರನ್ನು ಸಂಪಾದಿಸಿದ್ದಾರೆ ಎಂದರು. ಗ್ರಾಮ ಓನ್ ಕಂಪ್ಯೂಟರ್ ಆಪರೇಟರ್ ಮಂಜುನಾಥ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗಿಳಿಗೆ ಬಿದ್ದು ಕ್ರೀಡೆಯಾನ್ನು ಮರೆತು ಹೋಗುತ್ತಿದ್ದಾರೆ. ಮೊಬೈಲ್ ಇದ್ದರೆ ಸಾಕು ಊಟ ನಿದ್ದೆ ತಂದೆ ತಾಯಿಗಳು ಯಾರು ಸಹ ನೆನಪಿಗೆ ಬರುವುದಿಲ್ಲ. ಈಗಾಗಿ ಹಲವಾರು ಕಾಯಿಲೆಗಳು ಬಂದುಹೋಗುತ್ತಿವೆ. ಹಿಂದಿನ ಕಾಲದಲ್ಲಿನ ಅದೆಷ್ಟೋ ಆಟಗಳು ಮರೆತು ಬಿಟ್ಟಿದ್ದಾರೆ ಗೋಲಿ, ಚಿನ್ನಿ ದಂಡ, ಲಗೋರಿ ಈ ತರಹದ ಆಟಗಳನ್ನೂ ಮರೆತೆ ಬಿಟ್ಟಿದ್ದಾರೆ ಯುವಕರು ಹೆಚ್ಚು ಕ್ರೀಡೆಯಲ್ಲಿ ಆಸಕ್ತಿ ತೋರಿ ಬಾಗವಹಿಸಿ ಉತ್ಸಹ ದಿಂದ ಆಟವಾಡಿ ಎಂದರು. ಈ ಕಾರ್ಯಕ್ರಮಕ್ಕೆ ಎಂ. ಎಸ್ ರಮೇಶ್ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಅದ ಕರಿಯಮ್ಮ ಗೋವಿಂದಪ್ಪ ಮತ್ತು ಪಿ ಡಿ ಓ ಪಾಲಯ್ಯ .ತಳಕು ಮತ್ತು ನಾಯಕನಹಟ್ಟಿ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಅವರು ಭಾಗವಹಿಸಿದ್ದರು..

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend