;

ಕೂಡ್ಲಿಗಿ:ಅಲ್ಪ ಸಂಖ್ಯಾತ ಹಾಸ್ಟೆಲ್ ಗೆ ಸಚಿವರ ಭೇಟಿ- ವಾರ್ಡನ್ಸಸ್ಪೆಂಡ್,ಅಧಿಕಾರಿಗೆ ನೋಟಿಸ್ ಜಾರಿ..!!!

ಕೂಡ್ಲಿಗಿ:ಅಲ್ಪ ಸಂಖ್ಯಾತ ಹಾಸ್ಟೆಲ್ ಗೆ ಸಚಿವರ ಭೇಟಿ- ವಾರ್ಡನ್ಸಸ್ಪೆಂಡ್,ಅಧಿಕಾರಿಗೆ ನೋಟಿಸ್ ಜಾರಿ..

ಕೂಡ್ಲಿಗಿ ಪಟ್ಟಣದ ಅಂಚಿನಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ, ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್ ಶಾಸಕ ಡ‍ಾ॥ಎನ್.ಟಿ.ಶ್ರೀನಿವಾಸರೊಂದಿಗೆ ದಿಢೀರ್ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಹಾಸಿಗೆ ನೀಡದೇ ಇರೋ ಕಾರಣ, ಅವರು ಬೆಡ್ ಶೀಟ್ ಮೇಲೆ ಮಲಗಿರುವುದು ಕಂಡು ಸಚಿವರು ಕೆಂಡಾ ಮಂಡಲವಾದರು. ಹಾಸ್ಟೆಲ್ ನಲ್ಲಿರುವ ಅವ್ಯವಸ್ಥೆ ಯನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು, ಅಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡ ಅವರು ಶಿಸ್ಥು ಕ್ರಮಕ್ಕೆ ಸೂಚಿಸಿದರು. ವಾರ್ಡನ್ ಗುರಪ್ಪ ಗುರುರಾಜರನ್ನು ಸ್ಥಳದಲ್ಲಿಯೇ ಅಮಾನತ್ತು ಗೊಳಿಸಿ ಕ್ರಮ ಜರುಗಿಸುವಂತೆ ಆದೇಶಿಸಿದರು, ಹಾಗೂ ಅಧಿಕಾರಿಯ ನಿರ್ಲಕ್ಷ್ಯ ಧೋರಣೆಯ ಗೆ ಅಧಿಕಾರಿಗೆ ನೋಟೀಸು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅಂತೆಯೇ ಜೊತೆಯಲ್ಲಿದ್ದ ಜಿಲ್ಲಾಧಿಕಾರಿ ದಿವಾಕರವರು, ಸಚಿವರ ಸೂಚನೆಯಂತೆ ವಾರ್ಡನ್ ಗುರುರಾಜರನ್ನು ಕೂಡಲೇ ಅಮಾನತ್ತು ಆದೇಶ ನೀಡಿದರು. ಮತ್ತು ಇಲಾಖೆಯ ತಾಲೂಕು ಅಧಿಕಾರಿ ಸಂದೀಪ್ ಈ ಸಂದರ್ಭದಲ್ಲಿ ಗೈರು ಇದ್ದ ಹಿನ್ನಲೆಯಲ್ಲಿ, ಅಧಿಕಾರಿ ವಿರುದ್ಧ ಶಿಸ್ಥು ಕ್ರಮ ಜರುಗಿಸಿ ನೋಟೀಸ್ ನೀಡುವಂತೆ, ಕ್ರಮಕ್ಕೆ ಸಂಬಂಧಿಸಿದ ಇಲಾಖೆಯ ಜಿಲ್ಲಾಧಿಕಾರಿಗೆ ಆದೇಶಿಸಿದರು. ಸಚಿವರು ಹಾಸ್ಟೆಲ್ ನಲ್ಲಿರುವ ಆಹಾರ ದಾಸ್ತಾನು ಕೊಠಡಿಗೆ ತೆರಳಿ ಖುದ್ದು ಪರಿಶೀಲಿಸಿದರು, ಮತ್ತು ವಿದ್ಯಾರ್ಥಿಗಳನ್ನು ಪ್ರೆಶ್ನಿಸಿ ಆಹಾರ ಕ್ರಮ ಹಾಗೂ ಪ್ರಮಾಣ ಗುಣ ಮಟ್ಟದ ಬಗ್ಗೆ ತಿಳಿದುಕೊಂಡರು. ಅಡುಗೆ ಕೋಣೆಗೆ ತೆರಳಿದ ಅವರು, ಅಡುಗೆ ಪದಾರ್ಥಗಳು ಹಾಗೂ ತರಕಾರಿಗಳ ಗುಣ ಮಟ್ಟ ಪ್ರಮಾಣ ಪರಿಶೀಲಿಸಿದರು. ಸ್ವಚ್ಚತೆ ಗೆ ಹೆಚ್ಚು ಆಧ್ಯತೆ ನೀಡಬೇಕು ಮತ್ತು ಆಹಾರ ತಯಾರಿಕೆ ಸಂದರ್ಭದಲ್ಲಿ, ವೈಯಕ್ತಿಕ ಸ್ವಚ್ಚತೆ ಶುಭ್ರತೆ ಹಾಗೂ ಕಾಳಜಿ ವಹಿಸುವಂತೆ ಸಚಿವರು ಸಿಬ್ಬಂದಿಗೆ ಸೂಚಿಸಿದರು. ತಾವು ಶಿಕ್ಷಣಕ್ಕೆ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಲಿದ್ದು, ಹಾಸ್ಟೆಲ್ ಹಾಗೂ ಶಾಲೆ ಕಾಲೇಜುಗಳಿಗೆ ಮುಂದಿನ ದಿನಗಳಲ್ಲಿ. ನಿರಂತರ ಸರಣಿ ದೀಢೀರ್ ಭೇಟಿ ಕೊಡಲಾಗುವುದು, ಹಾಸ್ಟೆಲ್ ಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿಗೆ ವಿದ್ಯಾಶ್ರಮಗಳಾಗಿವೆ. ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು, ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಒದಗಿಸಬೇಕು ದೂರುಗಳು ಬಂದಲ್ಲಿ. ಕೂಡಲೇ ಸ್ಪಂಧಿಸಲಾಗುವುದು ಹಾಸ್ಟೆಲ್ ಗಳಲ್ಲಿ ಅವ್ಯವಸ್ಥೆ ಗಂಭೀರ ದೂರುಗಳು ಬಂದಲ್ಲಿ, ಪರಿಶೀಲಿಸಲಾಗುವುದು ದಿಢೀರ್ ಭೇಟಿ ನೀಡಿದಾಗ ಲೋಪ ಕಂಡು ಬಂದಲ್ಲಿ ಸ್ಥಳದಲ್ಲಿಯೇ ಶಿಸ್ಥು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಚಿವರೊಂದಿಗೆ, ಶಾಸಕರಾದ ಡಾ॥ ಎನ್.ಟಿ.ಶ್ರೀನಿವಾಸ ರವರು ಕೂಡ ಧ್ವನಿಗೂಡಿಸಿದರು. ಜಿಲ್ಲಾಧಿಕಾರಿ ದಿವಾಕರ, ಇಲಾಖೆಯ ಜಿಲ್ಲಾಧಿಕಾರಿ ಹಾಗೂ ವಿವಿದ ಇಲಾಖಾಧಿಕಾರಿಗಳು ಇದ್ದರು….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;