;

ವಿರುಪಾಪುರ:ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕ ನೇಮಕದಲ್ಲಿ ಹೊರಗಿನವರಿಗೆ ಮಣೆ, ಸ್ಥಳೀಯ ಪ್ರತಿಭಾನ್ವಿತೆಗೆ ಅನ್ಯಾಯ.!?

ವಿರುಪಾಪುರ:ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕ ನೇಮಕದಲ್ಲಿ ಹೊರಗಿನವರಿಗೆ ಮಣೆ, ಸ್ಥಳೀಯ ಪ್ರತಿಭಾನ್ವಿತೆಗೆ ಅನ್ಯಾಯ.!?- ಆರೋಪ-ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ವಿರುಪಾಪುರ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ, ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ತನಗೆ ಅನ್ಯಾಯ ಆಗಿದೆ ಎಂದು. ಗ್ರಾಮದ ನೊಂದ ಪರಿಶಿಷ್ಟ ಪಂಗಡದ(ST) ಪ್ರತಿಭಾನ್ವಿತ ಮಹಿಳೆಯೋರ್ವರು, ಪತ್ರಿಕೆಗೆ ಶಿಕ್ಷಣ ಇಲಾಖೆಯಿಂದ ತಮಗಾಗಿರುವ ಅನ್ಯಾಯದ ವಿರುದ್ಧ ರಾಧರವರು ಆರೋಪ ಮಾಡಿದ್ದಾರೆ. ಅತಿಥಿ ಶಿಕ್ಷಕರ ಆಯ್ಕೆ ಮಾಡೋ ಸಂದರ್ಭದಲ್ಲಿ ಸ್ಥಳೀಯ ಪ್ರತಿಭೆಯಾದ ತಮಗೆ ಮಾನ್ಯತೆ ನೀಡಿಲ್ಲ, ಬೇರೆ ಗ್ರಾಮ ಪಂಚಾಯ್ತಿಯ ಗ್ರಾಮದಲ್ಲಿನ ಮೊರಬ ಗ್ರಾಮದ ಪುರುಷರನ್ನು ಆಯ್ಕೆ ಮಾಡಲಾಗಿದೆ. ವಿಚಾರಿಸಿದರೆ ಶಿಕ್ಷಣ ಇಲಾಖೆಯಿಂದ ಸರಿಯಾದ ಕಾರಣ ನೀಡುತ್ತಿಲ್ಲ, ತಮಗಾದ ಅನ್ಯಾದ ಬಗ್ಗೆ ಸೂಕ್ತ ವಿವರಣೆ ಕೊಡದೆ ಸ್ಪಂಧಿಸುತ್ತಿಲ್ಲ. ಶಿಕ್ಷಣಾಧಿಕಾರಿಗಳು ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದ್ದಾರೆ, ಆಯ್ಕೆಯಾಗಿರುವುದರಲ್ಲಿ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಅನ್ಯಾಯ ಎಸಗಲಾಗಿದೆ ಎಂದು ನೊಂದ ಮಹಿಳೆ ರಾಧರವರು ದೂರಿದ್ದಾರೆ. ಸಂಬಂಧಿಸಿದಂತೆ ತಾವು ಇಲಾಖೆಯ ಜಿಲ್ಲಾ ನಿರ್ಧೇಶಕರಿಗೆ, ಹಾಗೂ ಜಿಲ್ಲಾಧಿಕಾರಿಗಳಿಗೆ ದೂರನೀಡಲಾಗುವುದು. ಮಾಧ್ಯಮಗಳ ವರದಿಗಾರರಲ್ಲಿ ನ್ಯಾಯಕ್ಕಾಗಿ ನೆರವು ಕೇಳಲಾಗುವುದು, ಪರಿಶಿಷ್ಟ ಪಂಗಡ ದ ಪ್ರತಿಭಾನ್ವಿತೆ ಮಹಿಳೆಯಾದ ತನಗೆ. ಶಿಸ್ಥಿನ ಇಲಾಖೆಯಾದ ಶಿಕ್ಷಣ ಇಲಾಖೆಯಿಂದ ಅನ್ಯಾಯವಾಗಿದೆ ಎಂದು ಆರೋಪಿದ್ದಾರೆ. ಸಂಬಂಧಿಸಿದಂತೆ ಕಾನೂನು ಮೊರೆ ಹೋಗಿ ಅಂತಿಮವಾಗಿ ನ್ಯಾಯಾಂಗದ ಮೊರೆಹೊಗಲಾಗುವುದು ಎಂದು ನೊಂದ ಪ್ರತಿಭಾನ್ವಿತ ಮಹಿಳೆ ರಾಧರವರು ತಿಳಿಸಿದ್ದಾರೆ. *15-20ಸಾವಿರಕ್ಕೆ ಅತಿಥಿ ಶಿಕ್ಷಕರ ನೇಮಕ.!? ಶಂಕೆ ವ್ಯಕ್ತ*-ತಾಲೂಕಿನ ಕೆಲವು ಕಡೆಗಳಲ್ಲಿ ಇದೇ ರೀತಿ ಸ್ಥಳೀಯ ಪ್ರತಿಭಾನ್ವಿತರಿಗೆ ಅನ್ಯಾಯಗಳಾಗಿದ್ದು, ಆಯ್ಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ನೊಂದ ರಾಧರವರು ಶಂಕೆ ವ್ಯಕ್ತಪಡಿಸೊದ್ದಾರೆ. ಸುಮಾರು 15-20 ಸಾವಿರ ₹ಗಳಿಗೆ ಅತಿಥಿ ಶಿಕ್ಷಕರ ಪೋಸ್ಟ್ ಗಳನ್ನು ಶಿಕ್ಷಣ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳು, ಮಾರಿಕೊಂಡಿದ್ದಾರೆಂಬ ಗುಮಾನಿ ಇದೆ. ಸಂಬಂಧಿಸಿಂದಂತೆ ಜಿಲ್ಲಾ ಶಿಕ್ಷಣ ಇಲಾಖಾಧಿಕಾರಿಗಳು ಕೇಳಿಬಂದೆಡೆಗಳಲ್ಲಿ, ಪ್ರಾಮಾಣಿಕತೆಯಿಂದ ಸೂಕ್ತ ರೀತಿಯ ತನಿಖೆ ಕೈಗೊಂಡಲ್ಲಿ ಸತ್ಯ ಅನಾವರಣಗೊಳ್ಳಲಿದೆ. ಅದಕ್ಕೆ ಪುಷ್ಠಿನೀಡುವಂತಹ ಸನ್ನಿವೇಷಕ್ಕೆ ತಮಗಾದ ಅನ್ಯಾಯವೇ ಸಾಕ್ಷಿಯಾಗಿರುವುದಾಗಿ ವಿರಪಾಪುರದ ರಾಧಮ್ಮ ಆಭ ಪ್ರಾಯ ವ್ಯಕ್ತಪಡಿಸಿದ್ದಾರೆ. ತಾವು ಈ ಹಿಂದೆಯೇ ನಾಲ್ಕು ವರ್ಷಗಳ ಕಾಲ ಅತಿಥಿ ಶಿಕ್ಷಕರಾಗಿ ಸೆೇವೆಗೈದಿದ್ದು, ತಾವು ಪರಿಶಿಷ್ಟ ಪಾಂಗಡದ ಬಡ ರೈತ ಕುಟುಂಬದ ಹಿನ್ನಲೆಯ. ಸ್ಥಳೀಯ ಪ್ರತಿಭಾವಂತ ಮಹಿಳೆಯಾಗಿದ್ದು. ಶಿಕ್ಷಣ ಇಲಾಖೆಯಿಂದ ತಮಗೆ ಈ ಮೂಲಕ ಅನ್ಯಾಯವಾಗಿದೆ, ಅತಿಥಿ ಶಿಕ್ಷಕರ ನೇಮಕಾತಿಯ ಸಂದರ್ಭದಲ್ಲಿ ನಮಗೆ ವಂಚನೆ ಆಗಿದೆ ಎಂದು ರಾಧ ದೂರಿದ್ದಾರೆ. ಇದನ್ನು ಕೂಡಲೇ ಸರಿಪಡಿಸಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ಆದ ಅನ್ಯಾಯದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಶಿಕ್ಷಣ ಇಲಾಖೆಯಲ್ಲಾಗಿರುವ ಕೆಲ ಭಾರೀಭ್ರಷ್ಟಾಚಾರಕ್ಕೆ, ಸೂಕ್ತ ಸಾಕ್ಷ್ಯಧಾರ ಸಹಿತವಾಗಿ ಉನ್ನತಾಧಿಕಾರಿಗಳಿಗೆ ದೂರು ನೀಡಲ‍ಾಗುವುದು ಎಂದು ವಿರುಪಾಪುರದ ವಿವಿದ ಸಂಘಟನೆಗಳು ದೂರಿದ್ದಾರೆ. ಈ ಸಂಬಂಧಿಸಿದಂತೆ ಶಿಕ್ಷಣಾಧಿಕಾರಿಗಳು ದಿನಕ್ಕೊಂದು ನೆಪ ಒಡ್ಡಿ ನೆಪ ಹೇಳಿ ದಿನಗಳನ್ನ ದೂಡುತ್ತಿದ್ದು, ನೊಂದ ಮಹಿಳೆಗೆ ಅನ್ಯಾಯದ ವಿರುದ್ಧ ತಾವು ಶೀಘ್ರವೇ ಸಂಬಂಧಿಸಿದ ಇಲಾಖೆಯ ಉನ್ನತಾಧಿಕಾರಿಗಳಲ್ಲಿ ದೂರುವುದಾಗಿ ಪ್ರಜ್ಞಾವಂತ ಮಹಿಳಾ ಹೋರಾಟಗಾರರು ಹೇಳಿಕೆ ನೀಡಿದ್ದಾರೆ. ಸಂಬಂಧಿಸಿದಂತೆ ಪತ್ರಕರ್ತರಿಗೆ ಶಿಕ್ಷಣಾಧಿಕಾರಿ ಬಸವರಾಜರವರು, ಸಮರ್ಪಕವಾಗಿ ಉತ್ತರ ನೀಡದೇ ಕಾಲಹರಣ ಮಾಡುತ್ತಿದ್ದಾರೆ. ಉತ್ತರ ನೀಡಲು ಸಾಕಷ್ಟುಖಾಲಾವಕಾಶ ತೆಗೆದು ಕೊಂಡರೂ ವಿಫಲವಾಗಿದ್ದು, ಆಗಸ್ಟ್ 3ರಂದು ಬೆಳಿಗ್ಗೆ ಮೊ ಮೂಲಕ ಸ್ಪಷ್ಟನೆ ಕೇಳಿದಾಗ. ವಿರುಪಾಪುರ ಶಾಲೆಗೆ ಖಾಯಂ ಶಿಕ್ಷಕರು ಬಂದಿದ್ದು, ಅತಿಥಿ ಶಿಕ್ಷಕರ ನೇಮಕ ರದ್ದು ಪಡಿಸಿ ತಾವು ಆ1ರಂದೇ ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ. ಸಂಬಂಧಿಸಿದಂತೆ ತಾವು ಹೊರಡಿಸಿರುವ ಆದೇಶ ಪ್ರತಿಯನ್ನು ವಾಟ್ಸಾಪ್ , ವರದಿಗಾರರು ಕೇಳಿದರೆ ಅದಕ್ಕೆ ಸ್ಪಂಧಿಸುತ್ತಿಲ್ಲ ಉತ್ತರ ಇಲ್ಲ. ವಿರುಪಾಪುರ ಶಾಲೆಯಲ್ಲಿ ಎಂದಿನಂತೆ ಈಗಾಗಲೇ ನೇಮಕ ವಾಗಿರುವ , ಸರ್ಕಾರಿ ನೌಕರಿಯ ಖಾಯಂ ಶಿಕ್ಷಕರು ಕರ್ಥವ್ಯಕ್ಕೆ ಹಾಜರಾಗಿದ್ದಾರೆ. ಆದರೂ ಕೂಡ ಬೇರೆ ಗ್ರಾಮ ಪಂಚಾಯ್ತಿಗೆ ಸೇರಿದ ವ್ಯಕ್ತಿಗೆ , ಇನ್ನೂ ಕೂಡ ಕರ್ಥವ್ಯಕ್ಕೆ ಅವಕಾಶ ನೀಡಲಾಗಿದ್ದು, ನೇಮಗೊಂಡಾಗಿನಿಂದ ನಿರಂತರವಾಗಿ ಆ4ರಂದೂ ಕೂಡ ಕರ್ಥವ್ಯದಲ್ಲಿದ್ದಾರೆಂದು ನೊಂದ ಮಹಿಳೆ ರಾಧರವರು ಖಚಿತ ಪಡಿಸಿದ್ದಾರೆ. ಕಾರಣ ತನಗೆ ನ್ಯಾಯ ಕೊಡಿಸಿ ತನ್ನ ಹೋರಾಟಕ್ಕೆ ಧ್ಬನಿಯಾಗಿ ನೆರವು ನೀಡುವಂತೆ, ನೊಂದ ಸ್ಥಳೀಯ ಪರಿಶಿಷ್ಟ ಪಂಗಡ ಪ್ರತಿಭಾನ್ವಿತೆ ರಾಧರವರು ಈ ಮೂಲಕ ಪತ್ರಕರ್ತರಲ್ಲಿ ಮನವಿ ಮಾಡಿದ್ದಾರೆ.

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend