;

ಪಾಲೆ ಹಟ್ಟಿ ಗ್ರಾಮಕ್ಕೆ ನ್ಯಾ. ನೂರುನ್ನೀಸರವರ ಭೇಟಿ, ಕಾನೂನು ಅರಿವು ಕಾರ್ಯಕ್ರಮ ಅಯೋಜನೆ…!!!

ಪಾಲೆ ಹಟ್ಟಿ ಗ್ರಾಮಕ್ಕೆ ನ್ಯಾ. ನೂರುನ್ನೀಸರವರ ಭೇಟಿ, ಕಾನೂನು ಅರಿವು ಕಾರ್ಯಕ್ರಮ ಅಯೋಜನೆ

ತುಮಕೂರು,: ಜಿಲ್ಲೆಯ ಪಾಲೆ ಹಟ್ಟಿಗೆ ಆಗಸ್ಟ್ ೦೨ ರಂದು ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ನೂರುನ್ನೀಸ್ ರವರು ಕಾನೂನು ಅರಿವು ಮೂಲಕ ನಾಗರೀಕರಣ ಅಭಿಯಾನವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಪೋಕ್ಸೋ ಕಾಯ್ದೆ ಹಾಗೂ ಕರ್ನಾಟಕ ಅಮಾನವೀಯ ಕೆಟ್ಟ ಪದ್ಧತಿ ಪ್ರತಿಬಂಧ ಮತು ನಿರ್ಮೂಲನೆ ಅಧಿನಿಯಮ -೨೦೧೭ ಮೊದಲಾದ ಕಾನೂನುಗಳ ಬಗ್ಗೆ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ಮಾನವೀಯತೆಯ ಹಾಗೂ ಮೌಢ್ಯಚಾರಣೆ ವಿರುದ್ಧದ ಅರಿವು ನಾಗರಿಕರಲ್ಲಿ ಮೂಡಬೇಕು, ಸಾರ್ವಜನಿಕರ ಸಂಪೂರ್ಣ ಸಹಕಾರದಿಂದ ಸಮಾಜದಲ್ಲಿರುವ ಮೌಢ್ಯಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು, ಪಂಚಾಯತ್ ಸದಸ್ಯರು ಹಾಗೂ ಊರಿನ ಮುಖಂಡರು , ಮತ್ತಿತರರು ಹಾಜರಿದ್ದರು…

ವರದಿ. ಸುರೇಶ್ ತುಮಕೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;