;

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ದೃತಿ ಮತ್ತು ಕಾಳಿದಾಸ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಮುರಳಿಧರ ಗಜೇಂದ್ರಗಡ್…!!!

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ದೃತಿ ಮತ್ತು ಕಾಳಿದಾಸ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಮುರಳಿಧರ ಗಜೇಂದ್ರಗಡ್


ಕೂಡ್ಲಿಗಿ: ಹೊಸಹಳ್ಳಿಯ ವೈಭವ ಪ್ರೌಢಶಾಲೆ ಆವರಣದಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು.
ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿ. ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಗಿಡಮರ ಬೆಳೆಸುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಅಲ್ಲದೆ ತಮ್ಮ ಹುಟ್ಟುಹಬ್ಬ ಆಚರಣೆಯಲ್ಲಿ ಕೇಕ್ ಕತ್ತರಿಸುವುದರ ಮೂಲಕ ಆಚರಣೆ ಮಾಡುವ ಬದಲಾಗಿ ಗಿಡ ಮರಗಳನ್ನು ಬೆಳೆಸುವ ಹವ್ಯಾಸ ರೂಡಿಸಿಕೊಳ್ಳಬೇಕು. ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪರಿಸರ ನಾಶದಿಂದ ಜಾಗತಿಕ ವಾಗಿ ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಅಂತರ್ಜಾಲ ತೀವ್ರ ಕುಸಿತ ಮತ್ತು ತಾಪಮಾನದಲ್ಲಿ ಬದಲಾವಣೆ ಹಾಗೂ ಶುದ್ಧ ಗಾಳಿ ಸಿಗದೆ ಅನುಕೂಲ ನರಳುತ್ತಿದೆ. ಹೀಗಾಗಿ ಗಿಡಮರ ಬಳಸಲು ಸಾರ್ವಜನಿಕರು ತಮ್ಮ ಜವಾಬ್ದಾರಿ ಹಾರಿತು ಮುಂದಾಗಬೇಕು ಎಂದು ಹೇಳಿದರು.
ಸಾಮಾಜಿಕ ವಲಯ ಅರಣ್ಯ ಅಧಿಕಾರಿ ವಿವೇಕಾನಂದ ಮಾತನಾಡಿ
ವಿಶ್ವ ಪರಿಸರ ದಿನಾಚರಣೆ ಜೂನ್ 5ನೇ ಸೀಮಿತವಾಗದೆ ಬದಲಾಗಿ ಪ್ರತಿದಿನವೂ ದಿನಾಚರಣೆಯಾಗಿ ಪರಿಸರ ಸಂರಕ್ಷಣೆ ಮತ್ತು ಗಿಡ-ಮರ ಬೆಳೆಸಲು ಕಂಕಣಭದ್ಧರಾಗಬೇಕು. ಅಲ್ಲದೆ ಸರ್ಕಾರದ 5 ಕೋಟಿ ಸಸಿ ನೆಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವೈಭವ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸುನಿತಾ ಮುರಳಿಧರ್. ಉಪ ಅರಣ್ಯಾಧಿಕಾರಿ ಜಡೆಯಪ್ಪ. ವೈಭವ ಪ್ರೌಢಶಾಲೆಯ ಮುಖ್ಯ ಗುರುಗಳಾದ ಪ್ರಕಾಶ್ ಗೌಡ. ಇಂದು ಪಿಯು ಕಾಲೇಜಿನ ಪ್ರಾಚಾರ್ಯರಾದ ಧ್ರುವನ್ ಕುಮಾರ್. ಶಾಲೆಯ ಸಿಬ್ಬಂದಿ ವರ್ಗದವರಾದ ಕಂಪ ಳೇಶ್. ಧನಂಜಯ್. ಕಾಳಿದಾಸ ದೃತಿ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಮಲ್ಲೇಶ್. ರಮೇಶ್ ಸೇರಿದಂತೆ ಇತರರು ಸಾರ್ವಜನಿಕರು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;