ಕಂಚೋಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಳು ಕೇಳುವರು ಯಾರು ? ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಯಾದ ಕಂಚೋಬನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು ಈ ಶಾಲೆಯಲ್ಲಿ ಸರಿಸುಮಾರು ಒಂದರಿಂದ ಎಂಟನೇ ತರಗತಿವರೆಗೆ ಶಾಲೆ ಇದ್ದು ಸುಮಾರು 130 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ,
ಆದರೆ ಈ ಶಾಲೆಯ ಆವರಣವು ಮಳೆಗಾಲ ಬಂತೆಂದರೆ ಸಾಕು ಶಾಲಾ ಆವರಣದಲ್ಲಿ ಮಳೆ ನೀರು ನಿಂತು ಮಕ್ಕಳ ಶಾಲೆಗೆ ಬರುವುದಕ್ಕೆ ತುಂಬಾ ಅನಾನುಕೂಲವಾಗುತ್ತಿದೆ, ಇಲ್ಲಿನ ಶಾಲೆಯ ವಿದ್ಯಾರ್ಥಿಗಳ ಹೇಳೋದು ಒಂದೇ ಮಾತು, ನಮ್ಮ ಶಾಲೆಯ ಆವರಣವು ತೆಗ್ಗು ಗುಂಡಿಗಳಿಂದ ಕೂಡಿದೆ ಮತ್ತು ನಮಗೆ ಶೌಚಕ್ಕೆ ಹೋಗುವುದಕ್ಕೆ ನಮ್ಮ ಶಾಲೆಯಲ್ಲಿ ಶೌಚಾಲಯ ಇದ್ದು ಇಲ್ಲದಂತಾಗಿದೆ ಕಾರಣ ಈ ಶೌಚಾಲಯವನ್ನು ಕಳಪೆ ಗುಣಮಟ್ಟದಿಂದ ನಿರ್ಮಾಣ ಮಾಡಿದ್ದು ಇದರ ಡೋರ್ ಕೂಡ ಕಳಪೆಯಾಗಿದ್ದು ಶೌಚಕ್ಕೆ ಹೋಗುವುದಕ್ಕೆ ತುಂಬಾ ತೊಂದರೆಯಾಗಿದೆ,
ಅದಕ್ಕಾಗಿ ಸಂಬಂಧಪಟ್ಟ ಬಣವಿಕಲ್ಲು ಗ್ರಾಮ ಪಂಚಾಯಿತಿಯವರು ಈ ಶಾಲೆಯ ಆವರಣ ಮತ್ತು ಶೌಚಾಲಯವನ್ನು ಸರಿಪಡಿಸಿ ಕೊಡಬೇಕೆಂದು ವಿದ್ಯಾರ್ಥಿಗಳಾದ ಮತ್ತು ಸಂಬಂಧ ಪಟ್ಟ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಕೂಡಲಿ ಈ ಒಂದು ಅನಾನುಕೂಲದ ಶಾಲಾ ಆವರಣ ಮತ್ತು ಶೌಚಾಲಯದ ಬಾಗಿಲುಗಳನ್ನು ಸರಿಪಡಿಸಿ ಬಯಲು ಮುಕ್ತ ಯೋಜನೆಗೆ ಮರು ಜನ್ಮ ನೀಡಲಿ ಹಾಗೂ ನಮ್ಮ ಶಾಲೆಯು ಸುಮಾರು ಸುತ್ತಲಿನ ಹಳ್ಳಿಯ ಮಕ್ಕಳಿಗೆ ವಿದ್ಯಾದೇಗುಲ ಅದಕ್ಕಾಗಿ ಸಂಬಂಧ ಗ್ರಾಮ ಪಂಚಾಯತಿಯ ಅಧಿಕಾರಿಗಳು ಬರೀ ಬಿಲ್ ಗೋಸ್ಕರ ಕೆಲಸವನ್ನು ಮಾಡುವುದು ಬಿಟ್ಟು ಸೂಕ್ತವಾದ ಶಾಲಾ ಆವರಣವನ್ನು ನಿರ್ಮಿಸಿಕೊಡಲು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ವರದಿ, ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
