;

ಗುಡೇಕೋಟೆ:ಜಿನಿ ಜಿನಿ ಮಳೆಯಲ್ಲಿ ಜಾಂಬವಂತನ ಚಿನ್ನಾಟ- ವಿಡಿಯೋ ವೈರಲ್

ಗುಡೇಕೋಟೆ:ಜಿನಿ ಜಿನಿ ಮಳೆಯಲ್ಲಿ ಜಾಂಬವಂತನ ಚಿನ್ನಾಟ- ವಿಡಿಯೋ ವೈರಲ್

ಗುಡೇಕೋಟೆ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಅಚ್ಚರಿಯ ವಿಡಿಯೋಗಳು ಕಂಡು ಬರುತ್ತವೆ. ಅದರಲ್ಲಿ ಕೆಲವು ಕಾಡು ಪ್ರಾಣಿಗಳ ವಿಡಿಯೋಗಳನ್ನೂ ಸಹ ಕಾಣಬಹುದು. ಇದೀಗ ಅಂತಹದ್ದೇ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು ಇದರಲ್ಲಿ ಗುಡೇಕೋಟೆ ಕರಡಿದಾಮ ಜಿನಿ ಜಿನಿ ಮಳೆಯಲ್ಲಿ ಜಾಂಬವಂತ (ಕರಡಿ) ತನ್ನ ಮಕ್ಕಳೊಂದಿಗೆ ಡ್ಯಾನ್ಸ್ ಮಾಡುವ ದೃಶ್ಯ ಕಾಣಬಹುದಾಗಿದೆ.

ಹೌದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿದಾಮ ಏಷ್ಯಾ ಖಂಡದಲ್ಲೇ ಅತೀ ದೊಡ್ಡ ಎರಡನೇ ಕರಡಿದಾಮ ಇದಾಗಿದೆ, ಕಣ್ಣು ಹಾಯಿಸಿದಷ್ಟು ದೂರ ಅಚ್ಚ ಹಸಿರು. ಸುತ್ತಲು ಕಲ್ಲು ಬಂಡೆಗಳಿಂದ ಆವೃತವಾದ ಬೆಟ್ಟಗಳು, ಕುರುಚಲು ಗಿಡಗಳ ಪೊದೆಗಳಲ್ಲಿ ಹಕ್ಕಿಗಳ ಕಲರವ, ಪ್ರಶಾಂತ ವಾತಾವರಣ, ಅಲ್ಲಲ್ಲಿ ಭರ್ತಿ ಅದ ಚಿಕ್ಕ ಚಿಕ್ಕ ಗೋಕಟ್ಟೆಗಳು, ದಾಹ ನೀಗಿಸಿಕೊಳ್ಳಲು ಬರುವ ನಾಟ್ಯಮಯೂರಿಗಳ ಸಾಲು ನರ್ತನ,ಮರಿ ಕರಡಿಗಳ ಚಿನ್ನಾಟ, ಕಾಡು ಹಂದಿಗಳು, ತೋಳ, ನರಿ, ಮುಂಗುಸಿ, ಕಾಡು ಕೋಳಿ…ಅಬ್ಬಾ,ಒಂದೇ ಎರಡೇ! ಅಕ್ಷರಶಃ ಅದು ಪ್ರಾಣಿ ಪಕ್ಷಿ ಸಂಕುಲಗಳ ಬಿಡು. ಇಂಥ ವೈವಿಧ್ಯಮಯ ಜೀವ ಸಂಕಲದ ತಾಣವನ್ನು ಕಣ್ತುಂಬಿಸಿಕೊಳ್ಳಬೇಕೆಂದರೆ ನೀವು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡ್ಡಗಾಡಿನ ಐತಿಹಾಸಿಕ ಗುಡೇಕೋಟೆ ಪ್ರಕೃತಿ ಮಡಿಲಿನ ಕರಡಿ ಧಾಮಕ್ಕೆ ಭೇಟಿ ನೀಡಬೇಕು.

ಕರಡಿಯೊಂದು ಜಿನಿ ಜಿನಿ ಮಳೆಯಲ್ಲಿ ತನ್ನ ಮರಿಗಳೊಂದಿಗೆ ರಿಲ್ಯಾಕ್ಸ್ ಮೂಡಲ್ಲಿ ಚಿನ್ನಾಟ ಆಡುವುದನ್ನು ಅಧಿಕಾರಿಗಳ ಕ್ಯಾಮೆರಾದಲ್ಲಿ ಮತ್ತು ಕರಡಿಧಾಮದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಕರಡಿ ಚಿನ್ನಾಟ ಕಣ್ತುಂಬಿಕೊಂಡಿದ್ದಾರೆ. ಇವರಲ್ಲಿ ಯಾರೋ ಜಾಂಬವಂತನ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.
ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಜಾಂಬವಂತನ ನರ್ತನದ ಚಿನ್ನಾಟದ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;