ಶ್ರೀ ಗುರು ಕನಕ ವಿದ್ಯಾ ಕೇಂದ್ರ ತಾಯಕನಹಳ್ಳಿ ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಶಾಲೆಯಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಅಕ್ಷರಭ್ಯಾಸೋತ್ಸವ ಕಾರ್ಯಕ್ರಮದ ಅಂಗವಾಗಿ ಎಲ್ ಕೆ ಜಿ, ಯುಕೆಜಿ ಹಾಗೂ ಒಂದನೇ ತರಗತಿ ಮಕ್ಕಳಿಗೆ ಸಾಮೂಹಿಕವಾಗಿ ಅಕ್ಷರಭ್ಯಾಸ ಆರಂಭೋತ್ಸವವನ್ನು ಪಾಲಕ ಪೋಷಕರು ಅದ್ದೂರಿಯಾಗಿ ಭಾಗವಹಿಸಿ ತಮ್ಮ ಮಕ್ಕಳಿಗೆ ಗುರುಗಳ ಸಮ್ಮುಖದಲ್ಲಿ ವೇದೋಕ್ತವಾಗಿ ಅಕ್ಷರಭ್ಯಾಸವನ್ನು ಮಾಡಿಸಿ ಧನ್ಯತಾಭಾವವನ್ನು ತಳಿದರು. ಶ್ರೀಮತಿ ಸುನಿತಾ ಗುರುರಾಜ್ ಮುಖ್ಯ ಗುರುಗಳು ಸ್ವಾಗತ ಮಾಡಿದರು. ಪ್ರಾಸ್ತಾವಿಕವಾಗಿ ಬಿ ಟಿ ಮಂಜಣ್ಣ ಕಾರ್ಯದರ್ಶಿಗಳು ಗುರು ಪೂರ್ಣಿಮೆಯ ಮಾಹಿತಿಯನ್ನು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸುಮಿತ್ರ ಸತೀಶ್ ನಿರೂಪಿಸಿದರು. ಪೂಜಾ ಪೌರೋಹಿತ್ಯ ಶ್ರೀ ವೀರೇಶ್ ಸ್ವಾಮಿ ಮಂಗಾಪುರ ಮಠ ಇವರು ನೆರವೇರಿಸಿದರು. ಮತ್ತು ಸಹಶಿಕ್ಷಕರಾದ ಸರೋಜ ಮಂಜುಳಾ ರುದ್ರಮ್ಮ ಮೋನಿಕಾ ಹಾಗೂ ಪ್ರಭಾಕರ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ಶಾಲಾ ಮಕ್ಕಳು ಭಾಗವಹಿಸಿದ್ದರು ಎಲ್ಲಾ ಮಕ್ಕಳಿಗೂ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
