“ಕ್ಷಯ ರೋಗಿಗಳಿಗೆ ಆಹಾರ ಕಿಟ್ ವಿತರಣೆ ”
ಇಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸದಸ್ಯರು ಆದ ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೇಟಿ ಕೊಟ್ಟು ಕ್ಷಯ ರೋಗಿಗಳಿಗೆ ಆಹಾರದ ಕಿಟ್ಟುಗಳನ್ನು ವಿತರಿಸಿದರು.

ಇನ್ನು ತಮ್ಮ ಜನಸಂಪರ್ಕ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮಾರ್ಗದರ್ಶನ ಮನವಿ ಪತ್ರವನ್ನ ಸ್ಪಂದಿಸಿದ ವಿಣಾ ಮಹಾಂತೇಶ್ ‘ಪ್ರಧಾನಮಂತ್ರಿ ಕ್ಷಯರೋಗ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಡಿ ತಮ್ಮ ಎಂ ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ವತಿಯಿಂದ ಹರಪನಹಳ್ಳಿ ತಾಲೂಕಿನ ಕ್ಷಯರೋಗಿಗಳ ಬೆಂಬಲವಾಗಿ ನಿಂತ ಟ್ರಸ್ಟ್ 15
ಕ್ಷಯರೋಗಿಗಳನ್ನ ದತ್ತು ಪಡೆದು ಅವರ ಚಿಕಿತ್ಸೆಗೆ ಅನುಗುಣವಾಗಿ ಪೌಷ್ಟಿಕಾಂಶ ಆಹಾರದ ಕಿಟ್ಟನ್ನ ಅವರ ಕುಟುಂಬಕ್ಕೆ ತಲುಪಿಸಿದರು. ಇವರ ಜೊತೆಗೆ ಆರೋಗ್ಯ ಅಧಿಕಾರಿಗಳು ತಮ್ಮ ಬೆಂಬಲಿಗರು ಕಾರ್ಯಕರ್ತರು ಸಾತ್ ನೀಡಿದರು …

ವರದಿ. ಆಶೀಪುಲ್ಲ ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
