ನೂತನ ಸಸ್ಯೋದ್ಯಾನ ಉದ್ಘಾಟನೆ.
ಕೂಡ್ಲಿಗಿ: ಜೀವ ಸಂಕುಲಗಳು ಉಳಿದು ಅರಳಬೇಕಾದರೆ ಹಸಿರುಮಯವಾತವರಣ ತುಂಬಾ ಮುಖ್ಯವಾದದು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪಟ್ಟಣದ ಹೊರವಲಯದ ಚೋರುನೂರು ರಸ್ತೆಯಲ್ಲಿರುವ ವಿಶ್ವ ಪರಿಸರ ದಿನಾಚರಣೆಯಂದು ನೂತನ ಸಸ್ಯೋದ್ಯಾನ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿಯೇ ಅತ್ಯಂತ ಎರಡನೇ ದೊಡ್ಡ ಆಲದಮರವೆಂದು ಖ್ಯಾತಿ ಪಡೆದಿರುವುದು ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದರು. ವಿಶ್ವಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು. ಅರಣ್ಯ ಇಲಾಖೆ ಸುಮಾರು ೨೬ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು. ಸತತ ೧೫ವರ್ಷಗಳಿಂದ ರಕ್ಷಣೆ ಇಲ್ಲದೇ ಆಲದಮರ ಅಕ್ಷರಶಃ ಅನಾಥವಾಗಿತ್ತು. ಈಗ ಸಸ್ಯೋದ್ಯಾನ ನಿರ್ಮಾಣದಿಂದಾಗಿ ಹಸಿರುಮಯವಾಗಿ ಎಲ್ಲೆಡೆ ಕಂಗೊಳಿಸುತ್ತಿರುವುದು ಕಣ್ಣಿಗೆ ಹಬ್ಬವೆನಿಸಿದೆ ಎಂದರು. ಇಲ್ಲಿನ ವಿಶೇಷತೆಯ ಪಿರಾಮಿಡ್, ಯೋಗ, ಧ್ಯಾನಕೇಂದ್ರವನ್ನು ಸ್ಥಾಪಿಸಿರುವುದರಿಂದ ಪಟ್ಟಣದ ಹಿರಿಯರಿಗೆ ಚೈತನ್ಯದಾಯಕ ವಾತವರಣ ಕಲ್ಪಿಸಲಾಗಿದೆ. ಕಿರಿಯರಿಗೆ ದೈಹಿಕ ಚಟುವಟಿಕೆಯ ಪೂರಕವಾಗಿರುವ ಜಾರು ನಿರ್ಮಾಣ, ಉಯ್ಯಾಲೆ ಇತ್ಯಾದಿಗಳನ್ನು ನಿರ್ಮಿಸಿರುವುದರಿಂದ ಮಕ್ಕಳಿಗೆ ಆನಂದವನ್ನು ತರುವುದಲ್ಲದೆ, ನವ ಉಲ್ಲಾಸವನ್ನು ತರುತ್ತದೆ ಎಂದರು. ಡಾ. ಎನ್.ಟಿ. ಪುಷ್ಪಾ ಶ್ರೀನಿವಾಸ ಮಾತನಾಡಿ, ಮನೆಯ ಸುತ್ತಮುತ್ತ ಗಿಡಗಳನ್ನು ಬೆಳೆಸುವುದರ ಮೂಲಕ ಸುಂದರ ಪರಿಸರವನ್ನು ನಿರ್ಮಾಣಮಾಡಿಕೊಳ್ಳಲು ಸಲಹೆ ನೀಡಿದರು. ಬ್ಲಾಕ್ ಕಾಂಗ್ರೇಸ್ ಎಂ. ಗುರುಸಿದ್ಧನಗೌಡ, ಕೋಗಳಿ ಮಂಜುನಾಥ, ಉದಯಜನ್ನು, ಜಯರಾಮ್ ನಾಯಕ, ಮರುಳಸಿದ್ಧಪ್ಪ, ಅಶ್ವಮೇಧ ಗ್ರೂಪ್ಸ್‌ನ ಟಿ.ಜಿ. ಮಲ್ಲಿಕಾರ್ಜುನಗೌಡ, ಜಿಲಾನ್ ಸೇರಿದಂತೆ ಅರಣ್ಯಾಧಿಕಾರಿಗಳು, ಆದರ್ಶ ಶಾಲೆಯ ಮುಖ್ಯಗುರುಗಳು ಹಾಗು ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
