;

ಬೆಳ್ಳಿಗಟ್ಟ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಶಾಸಕ ಡಾ. ಎನ್ ಟಿ ಶ್ರೀನಿವಾಸ್…!!!

ಬೆಳ್ಳಿಗಟ್ಟ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಶಾಸಕ ಡಾ. ಎನ್ ಟಿ ಶ್ರೀನಿವಾಸ್.

ಗುಡೇಕೋಟೆ: ಪ್ಲಾಸ್ಟಿಕ್ ಬಳಕೆ ಮಿತಿ ಮೀರಿ ಬಳಕೆಯಾಗುತ್ತಿರುವುದು ಅತ್ಯಂತ್ಯ ಕಳವಳಕಾರಿ ವಿಷಯವಾಗಿದೆ ಎಂದು ಶಾಸಕ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಹೇಳಿದರು.

ಅವರು ಗುಡೇಕೋಟೆ ಹೋಬಳಿ ವಲಯ ಅರಣ್ಯ ಇಲಾಖೆ ಗುಡೇಕೋಟೆ, ಬೆಳ್ಳಿಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಇಂದು ಪ್ಲಾಸ್ಟಿಕ್ ಮಾನವ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಸಮುದ್ರದಲ್ಲಿ ಮೀನು ಸಿಗುವ ಬದಲು ಪ್ಲಾಸ್ಟಿಕ್ ಸಿಗುವಂತಾಗಿದೆ ಅಲ್ಲದೇ ಹಿಮಾಲಯದಲ್ಲೂ ಪ್ಲಾಸ್ಟಿಕ್ ತುಂಬಿ ತುಳುಕುತ್ತಿದೆ,ಇದಕ್ಕೆ ಮಾನವನೊಂದಿಗೆ ಧನಕರುಗಳು, ಜಲಚರಗಳು ಬಲಿಯಾಗುತ್ತಿವೆ. ಪ್ಲಾಸ್ಟಿಕ್ ವಿರೋದಿಸಿ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು.

ಗುಡೇಕೋಟೆ ವಲಯ ಅರಣ್ಯಾಧಿಕಾರಿ ರೇಣುಕಮ್ಮ ಮಾತನಾಡಿ, ಇಂದು ಅಡುಗೆ ಮನೆ ಪರಿಕರಗಳು ಪ್ಲಾಸ್ಟಿಕ್‍ಮಯವಾಗಿ ಆನಾರೋಗ್ಯಕ್ಕೆ ಆಹ್ವಾನ ನೀಡುತ್ತಿವೆ. ಇದರ ಬಳಕೆ ಕಡಿಮೆಯಾಗದಿದ್ದರೆ ನಮ್ಮ ಮುಂದಿನ ಪಿಳಿಗೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಮಾನವನು ವಿಜ್ಞಾನ ತಂತ್ರಜ್ಞಾನದೊಂದಿಗೆ ಪರಿಸರ ಸಂರಕ್ಷಣೆ ಜ್ಞಾನ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ ರವಿಕುಮಾರ್ ಮಾತನಾಡಿ ಎಲ್ಲರೂ ತಮ್ಮ ತಮ್ಮ ಜನ್ಮ ದಿನದಂದು ಒಂದು ಸಸಿ ನೆಡುವ ಮೂಲಕ ಆಚರಿಸಿಕೊಂಡರೆ ತಾವು ಬೆಳೆಯುವದರೊಂದಿಗೆ ಕಾಡು ನಾಡು ಬೆಳೆಸಿದಂತಾಗುತ್ತದೆ. ಪರಿಸರ ಉಳುವಿಗೆ ನಾವು ಉಡುಗೊರೆ ನೀಡಿದಂತಾಗುತ್ತದೆ. ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದರ ಮೂಲಕ ನಮ್ಮ ಪರಿಸರವನ್ನು ನಾವು ಕಾಪಾಡಿಕೊಳ್ಳೊಣ ಎಂದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ಸಹಾಯಕ ಅರಣ್ಯಾಧಿಕಾರಿ ಬಾಬುಮೇದಾ.ವೈದ್ಯಾಧಿಕಾರಿ ಪ್ರದೀಪ್.ಗುಡೇಕೋಟೆ ವಲಯ ಅರಣ್ಯಾಧಿಕಾರಿ ರೇಣುಕಮ್ಮ.ಗ್ರಾಪಂ ಅಧ್ಯಕ್ಷೆ ರಾಧಮ್ಮರಾಗಪ್ಪ.ಅರಣ್ಯಧಿಕಾರಿ ಮಹೇಶ್.ಶಾಸಕರ ಪತ್ನಿ ಡಾಕ್ಟರ್ ಪುಷ್ಪಾ ಶ್ರೀನಿವಾಸ್.ಗುಡೇಕೋಟೆ ಪಿಎಸ್ಐ ವಿರುಪಾಕ್ಷಪ್ಪ.ಪಿಡಿಓ ಮಾರುತಿ.ಸೇರಿದಂತೆ ಇತರಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;