;

ಸಂವಿಧಾನ ಹಾಗೂ ತಂದೆ ತಾಯಿ” ಹೆಸರಲ್ಲಿ ಪ್ರಮಾಣ ವಚನ, ಸ್ವೀಕರಿಸಿದ ಕೂಡ್ಲಿಗಿ ಶಾಸಕ ಡಾ”ಎನ್.ಟಿ.ಶ್ರೀನಿವಾಸ…!!!

“ಸಂವಿಧಾನ ಹಾಗೂ ತಂದೆ ತಾಯಿ” ಹೆಸರಲ್ಲಿ ಪ್ರಮಾಣ ವಚನ, ಸ್ವೀಕರಿಸಿದ ಕೂಡ್ಲಿಗಿ ಶಾಸಕ ಡಾ”ಎನ್.ಟಿ.ಶ್ರೀನಿವಾಸ

ವಿಜಯನಗರ ಜಿಲ್ಲೆ ಕೂಡ್ಲಿಗಿ: ಕ್ಷೇತ್ರದ ನೂತನ ಶಾಸಕ ಡಾ”ಎನ್.ಟಿ.ಶ್ರೀನಿವಾಸರವರು, ವಿಧಾನಸೌಧದಲ್ಲಿ ತಂದೆ ತಾಯಿ ಯರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಪ್ರಮಾಣ ವಚನ ಸ್ವೀಕರಿಸುತ್ತಾ. ಡಾ”ಎನ್.ಟಿ.ಶ್ರೀನಿವಾಸ ಆದ ನಾನು ಇಂದು ವಿಧಾನ ಸೌಧದಲ್ಲಿ, ಭಾರತ ಸಂವಿಧಾನ ಹಾಗೂ ತಂದೆ ತಾಯಿಯ ಹೆಸರಿನಲ್ಲಿ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿ.
ಈ ಮೂಲಕ ಕೂಡ್ಲಿಗಿ ಕ್ಷೇತ್ರದ ಜನರ ಪ್ರತಿನಿಧಿಯಾಗಿ, ಕ್ಷೇತ್ರದ ಸಮಸ್ತ ಜಣತೆಯ ಆಶೋತ್ತರಗಳನ್ನು ಪೂರೈಸುವಲ್ಲಿ. ಈ ಕ್ಷಣದಿಂದಲೇ ಜವಾಬ್ದಾರಿಯು ಅಧಿಕೃತವಾಗಿ ಆರಂಭವಾಗಿದೆ, ಇದು ನನ್ನ ಬದುಕಿನ ಬಹಳ ಪ್ರಮುಖವಾದ ದಿನವಾಗಿದೆ. ಇನ್ನು ಐದು ವರ್ಷಗಳ ಕಾಲ ಶಾಸಕನಾಗಿದ್ದು, ಕ್ಷೇತ್ರದ ಸಮಸ್ತ ಜವಾಬ್ದಾರಿಯನ್ನ ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತೇನೆ.
ನನಗೆ ಈ ಅವಕಾಶವನ್ನು ನೀಡಿದ ಕೂಡ್ಲಿಗಿ ಕ್ಷೇತ್ರದ ಮಹಾಜನತೆಗೆ, ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅನಂತ ಧನ್ಯವಾದಗಳನ್ನು ಈ ಮೂಲಕ ಅರ್ಪಿಸುತ್ತೇನೆ. ನನ್ನ ಮೇಲಿನ ನಿಮ್ಮ ಪ್ರೀತಿ-ವಿಶ್ವಾಸ ಸ್ವಾಭಿಮಾನದ ಧ್ವನಿ, ಸದಾ ಹೀಗೆ ಇರಲಿ. ಕ್ಷೇತ್ರದ ಅಭಿವೃದ್ಧಿ ಹಾಗೂ ಬದಲಾವಣೆಗೆ, ಎಲ್ಲರೂ ಒಗ್ಗಟ್ಟಾಗಿ ಹೆಜ್ಜೆ ಹಾಕೋಣ. ಎಂದು ನೂತನ ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸರವರು, ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಸರ್ವ ಶಾಸಕರ ಸಮಕ್ಷಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಡಾ॥ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನ, ದೇಶದ ಸಮಸ್ತ ಜನಪ್ರತಿನಿಧಿಗಳಿಗೆ ಶ್ರೇಷ್ಠ ಗ್ರಂಥವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆಲ್ಲರಿಗೆ, ಸಂವಿಧಾನ ರಾಷ್ಟ್ರದ ಮಹಾನ್ ಗ್ರಂಥವಾಗಿದೆ. ಈ ಕಾರಣಕ್ಕೆ ಅವರು ಸಂವಿಧಾನದ ಹೆಸರಲ್ಲಿ, ಪ್ರಮಾಣ ವಚನ ಸ್ವೀಕರಿಸುವ ಮೂಲಕ ದೇಶದ ಸಂವಿಧಾನಕ್ಕೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಪ್ರತಿಯೊಬ್ಬರಿಗೆ ತಂದೆ ತಾಯಿ ಪ್ರತ್ಯಕ್ಷ ದೇವರು, ಇದನ್ನು ಪ್ರತಿಪಾದಿಸುವ ಕಾರಣಕ್ಕೆ ತಮ್ಮ ತಂದೆ ತಾಯಿ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ವಿಧಾನಸೌಧ ಪ್ರವೇಶಕ್ಕೆ ಮುನ್ನ ಸೌಧದ ಮೊದಲ ಮೆಟ್ಟಿಲಿಗೆ ಭಕ್ತಿ ಗೌರವದಿಂದ ನಮಸ್ಕರಿಸಿ, ಶ್ರದ್ಧೆ ನಿಷ್ಠೆಯಿಂದ ಜನರ ಸೇವೆ ನಿರ್ವಹಿಸುವ ದಿಸೆಯಲ್ಲಿ ವಿಧಾನ ಸೌಧ ಪ್ರವೇಶಿಸಿದ್ದಾರೆ.
ಈ ಮೂಲಕ ಕ್ಷೇತ್ರದ ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸರವರು ತಮ್ಮಲ್ಲಿಯ ಆದರ್ಶ ವ್ಯಕ್ತಿತ್ವ ವನ್ನು ಹೊರ ಹೊಮ್ಮಿಸಿದ್ದಾರೆ, ಮತ್ತು ಅವರು ಇಡೀ ರಾಜ್ಯಕ್ಕೇ ಮಾದರಿ ಶಾಸಕರಾಗಿದ್ದಾರೆ ಎನ್ನುತ್ತಾರೆ ತಾಲೂಕಿನ ಸಮಸ್ತ ಪ್ರಜ್ಞಾವಂತ ನಾಗರೀಕರು.

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;