;

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿರುವ ಡಾ.ಎನ್.ಟಿ.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನಕ್ಕೆ ಒತ್ತಾಯ!!!!!

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿರುವ ಡಾ.ಎನ್.ಟಿ.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನಕ್ಕೆ ಒತ್ತಾಯ!!!!!! 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಭರ್ಜರಿ ಜಯಭೇರಿ ಬಾರಿಸಿರುವ ಸ್ಥಳೀಯರಾದ ಡಾ. ಎನ್‌.ಟಿ ಶ್ರೀನಿವಾಸ್ ಅವರಿಗೆ ನೂತನ ಮಂತ್ರಿಮಂಡಲದಲ್ಲಿ ಆರೋಗ್ಯ ಖಾತೆ ನೀಡಬೇಕೆಂದು ಕೂಡ್ಲಿಗಿ ತಾಲೂಕಿನ ಹಿರಿಯ ಜಾನಪದ ಕಲಾವಿದ ಹಾಗೂ ಸುಗಮ ಸಂಗೀತ ಕಲಾವಿದರಾಗಿರುವಂತಹ ನುಂಕೇಶ್ ಎಂ ಆರ್ ಓಬಳಶೆಟ್ಟಿಹಳ್ಳಿ ಇವರು ಒತ್ತಾಯಿಸಿದ್ದಾರೆ.
ಡಾಕ್ಟರ್ ಏನ್ ಟಿ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವುದಕ್ಕಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ನುಂಕೇಶ್ ಅವರು ತಾಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವಂತಹ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಅವರು ಸ್ಥಳೀಯ ರಾಗಿರುವುದರಿಂದ ಮತ್ತು ಅವರ ವೃತ್ತಿಯಲ್ಲಿ ಡಾಕ್ಟರ್ ಇರುವುದರಿಂದ ಅವರಿಗೆ ಈ ತಾಲೂಕಿನ ಬಗ್ಗೆ ಗೊತ್ತಿದೆ. ಕಾರಣ ನಮ್ಮದು ಹಿಂದುಳಿದ ತಾಲೂಕಾಗಿ ರುವುದರಿಂದ ಇಲ್ಲಿ ಹೆಚ್ಚಿನದಾಗಿ ಕೂಲಿ ಕಾರ್ಮಿಕರನ್ನು ಹೊಂದಿರುವಂತಹ ತಾಲೂಕಾಗಿದೆ ಅದಕ್ಕಾಗಿ ಸತತವಾಗಿ 20 ವರ್ಷಗಳಿಂದ ನಮ್ಮ ತಾಲೂಕಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದೆಲ್ಲ, ಕಾರಣ ಇಷ್ಟೇ 2003 ರಿಂದ ಇಲ್ಲಿಯವರೆಗೂ ಹೊರಗಿನವರೆ ನಮ್ಮ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಇಲ್ಲಿ ಶಾಸಕರಾಗಿ ಆಯ್ಕೆಯಾದವರು ಈ ಕ್ಷೇತ್ರವನ್ನು ಕಡೆಗಣಿಸಿರುತ್ತಾರೆ, ಹಾಗಾಗಿ ಈ ಬಾರಿ ನಮ್ಮ ಕೂಡ್ಲಿಗಿ ಕ್ಷೇತ್ರದವರೇ ಆದ ಡಾ. ಏನ್. ಟಿ ಶ್ರೀನಿವಾಸ್ ಅವರು ಶಾಸಕರಾಗಿ ಆಯ್ಕೆಯಾಗಿರುವುದಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಾರೆಂದು ಈ ಕ್ಷೇತ್ರದ ಜನಗಳ ಅಭಿಪ್ರಾಯವಾಗಿದೆ.
ಈ ಕ್ಷೇತ್ರದಲ್ಲಿ ಹೆಚ್ಚಿನದಾಗಿ ಮೂಲಭೂತ ಸೌಲಭ್ಯಗಳಾದ ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರಿನ ಘಟಕಗಳು, ಹಳ್ಳಿಗಳಲ್ಲಿ ಒಳಚರಂಡಿ ವ್ಯವಸ್ಥೆ, ಮತ್ತು ಇಲ್ಲಿನ ಯುವಕರ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸ್ಥಳೀಯವಾಗಿ ಕೈಗಾರಿಕಾ ಕಾರ್ಖಾನೆಗಳನ್ನು ಆರಂಭಿಸುವುದಕ್ಕೆ ಹೆಚ್ಚು ಹೊತ್ತು ನೀಡುತ್ತಾರೆಂದು ನಮ್ಮೆಲ್ಲರ ಆಸೆಯಾಗಿದೆ, ಅದಕ್ಕಾಗಿ ನಾಳೆ ನಡೆಯುವ ನೂತನ ಸರ್ಕಾರದ ಮುಖ್ಯಮಂತ್ರಿ ಆಗಲಿರುವ ಶ್ರೀ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಡಾ. ಏನ್ ಟಿ ಶ್ರೀನಿವಾಸ್ ಅವರು ವೃತ್ತಿಯಲ್ಲಿ ವೈದ್ಯರಾಗಿರುವುದರಿಂದ ಅವರಿಗೆ ಆರೋಗ್ಯ ಖಾತೆಯನ್ನೇ ನೀಡಬೇಕೆಂದು ಒತ್ತಾಯಿಸಿದ್ದಾರೆ…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;