ಡಾ.ಶ್ರೀನಿವಾಸರಿಗೆ ವೈದ್ಯಕೀಯ ಶಿಕ್ಷಣ ಸಚಿವಸ್ಥಾನ ನೀಡಲಿ: ಖಾಜಾಹುಸೇನ್ ಒತ್ತಾಯ
ಗುಡೇಕೋಟೆ: ಸರ್ವ ಜನಾಂಗದ ನೆಚ್ಚಿನ ನಾಯಕ ಕಲ್ಯಾಣ ಕರ್ನಾಟಕದಲ್ಲೇ ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ ಡಾ. ಎನ್.ಟಿ.ಶ್ರೀನಿವಾಸ್.ರವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಖಾತೆಸಚಿವ ಸ್ಥಾನ ನೀಡುವ ಜೊತೆಗೆ ಆರೋಗ್ಯಸಚಿವ ಸ್ಥಾನವನ್ನು ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ಡಾ.ಎನ್.ಟಿ.ಶ್ರೀನಿವಾಸ್ ರವರ ಕಾರ್ ಚಾಲಕ ರಾಮದುರ್ಗ ಖಾಜಾಹುಸೇನ್, ರಾಜ್ಯ ನಾಯಕರಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಕೋರಿರುವ ಅವರು ನಾನು ಸರಿ ಸುಮಾರು 13 ವರ್ಷಗಳಿಂದ ಡಾಕ್ಟರ ಎನ್.ಟಿ. ಶ್ರೀನಿವಾಸ್ ರವರ ಕಾರ್ ಚಾಲಕನಾಗಿ ಕೆಲಸ ಮಾಡುತ್ತಾ ಅವರ ಸ್ವಭಾವವನ್ನು ಬಹಳ ಹತ್ತಿರದಿಂದ ಗಮನಿಸಿದ್ದೇನೆ, ಬಡವರಿಗೆ ಕೈಲಾದಷ್ಟು ಸಹಾಯ ಮಾಡುವ ಹಿರಿಯರಿಗೂ ಕಿರಿಯರಿಗೂ ಗೌರವ ಭಾವದಿಂದ ಕಾಣುವ ಇವರು ಯಾವುದೇ ಒತ್ತಡ ಪರಿಸ್ಥಿತಿಯಲ್ಲಿ ಸಹ ನಗುತ್ತಲೆ ಎದುರಿಸಿರುವ ಅವರ ಚಾಣಾಕ್ಷತೆ ಕಣ್ಣಾರೆ ಕಂಡಿರುವಂತ ನಾನೇ ಅದೃಷ್ಟವಂತ ,ಇಂತಹ ಏಳೂರು ಗುಡ್ಡದ ದೊರೆ ಕಣ್ಣಪ್ಪನವರಿಗೆ ಈಗಿನ ನೂತನ ಸರ್ಕಾರ ಸಚಿವ ಸ್ಥಾನಮಾನವನ್ನು ಕೊಟ್ಟು ಕಾಂಗ್ರೆಸ್ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕು.
ದೇಶ ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ವಿದ್ಯಾಭ್ಯಾಸ ಮುಗಿಸಿದ ಇವರು ಕ್ಷೇತ್ರದಲ್ಲಿ ಈಗಾಗಲೇ ತಾಲೂಕಿನಲ್ಲಿ 25000ಕ್ಕೂ ಹೆಚ್ಚು ಜನತೆಗೆ ಕಣ್ಣಿನ ಶಿಬಿರಗಳ ಮೂಲಕ ಕಣ್ಣು ತೆರೆಸಿ ಜನಪ್ರಿಯತೆ ಗಳಿಸಿರುವಾ ಇವರಿಗೆ ಇನ್ನೂ ಸಚಿವ ಸ್ಥಾನ ಸಿಕ್ಕರೇ ರಾಜ್ಯದಾದ್ಯಂತ ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಗೆ ಕಡು ಬಡವರ ಅನುಕೂಲಕ್ಕಾಗಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸುಧಾರಣೆ ತಂದು ಕೂಡ್ಲಿಗಿ ಕ್ಷೇತ್ರವನ್ನು ಆರೋಗ್ಯ ಮುಕ್ತ ತಾಲೂಕಾಗಿ ಸಂಕಲ್ಪ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಆದರಿಂದ ಈ ಬಾರಿಯೂ ನೂತನ ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ಡಾ.ಎನ್.ಟಿ.ಶ್ರೀನಿವಾಸ್ ರವರಿಗೆ ವೈದ್ಯಕೀಯ ಶಿಕ್ಷಣ ಖಾತೆಸಚಿವ ಜೊತೆಗೆ ಆರೋಗ್ಯ ಸಚಿವ ಸ್ಥಾನವನ್ನು ನೀಡಬೇಕೆಂದು ಖಾಜಾ ಹುಸೇನ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಿಗೆ ಪತ್ರಿಕೆ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ…

ವರದಿ. ಕೆ, ಎಸ್, ವಿರೇಶ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
