;

ಅಳಗವಾಡಿ ಗ್ರಾಮ ಪಂಚಾಯತನಲ್ಲಿ ಎಸ್ ಸಿ ಎಸ್ ಟಿ ಮೀಸಲಿಟ್ಟ ಅನುದಾನದಲ್ಲಿ ಬಾರಿ ಭ್ರಷ್ಟಾಚಾರ…!!!

ಅಳಗವಾಡಿ ಗ್ರಾಮ ಪಂಚಾಯತನಲ್ಲಿ ಎಸ್ ಸಿ ಎಸ್ ಟಿ ಮೀಸಲಿಟ್ಟ ಅನುದಾನದಲ್ಲಿ ಬಾರಿ ಭ್ರಷ್ಟಾಚಾರ ವೆಸಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಅಳಗವಾಡಿ ಗ್ರಾಮ ಪಂಚಾಯತ ಈ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಅಳಗವಾಡಿ ಮತ್ತು ಬಸ್ತವಾಡ ಗ್ರಾಮಗಳು ಹೊಂದಿಕೊಂಡಿವೆ ಈ ಎರಡು ಗ್ರಾಮಗಳು ಸೇರಿ ಒಂದು ಗ್ರಾಮ ಪಂಚಾಯಿತಿ ಈ ಪಂಚಾಯಿತಿನಲ್ಲಿ 25 ಜನ ಪ್ರತಿನಿಧಿಗಳು ಚುನಾಯಿತರಾಗಿರುತ್ತಾರೆ. ಅಳಗವಾಡಿ ಗ್ರಾಮ ಚುನಾಯಿತ ಪ್ರತಿನಿಧಿಗಳು 17 ಜನ ಬಸ್ತವಾಡ ಗ್ರಾಮಕ್ಕೆ 8 ಜನ ಪ್ರತಿನಿಧಿಗಳು ಚುನಾಯಿತರಾಗಿರುತ್ತಾರೆ. ಆದರೆ ಈ ಗ್ರಾಮದಲ್ಲಿರುವ ಪ. ಜಾತಿ ಪ. ಪಂಗಡ ಜನಗಳಿಗೆ 14ನೇ ಹಣಕಾಸಿನ 15 ನೇ ಯೋಜನೆಯಲ್ಲಿ ಮೀಸಲಾದ ಅನುದಾನದಲ್ಲಿ ಭ್ರಷ್ಟಾಚಾರವಾಗಿದ್ದು ಎಂದು ಬಸ್ತವಾಡ ಗ್ರಾಮ ಸ್ಥಳೀಯರಾದ ಮುತ್ತಪ್ಪ ಕಾಂಬಳೆ ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.
2020 ರಿಂದ ಇಲ್ಲಿಯವರೆಗೆ. 1)2020-21 ನೇ ಸಾಲಿನಲ್ಲಿ ಮೂಲ ಅನುದಾನ 63.63754/-ಈ ಅನುದಾನದಲ್ಲಿ ಬಸ್ತವಾಡ ಗ್ರಾಮಕ್ಕೆ ಯಾವುದೇ ಅನುದಾನ ನೀಡಿರುವುದಿಲ್ಲ (ಪ. ಜಾತಿ ಪ. ಪಂಗಡ 25%)ಮತ್ತು 1993 ಉಪ ಕಲಂ 213 ಪ್ರಕಾರ ಎಲ್ಲ ಮೂಲಗಳಿಂದ ಸಂಗ್ರಹಿಸಿದ ತೆರಿಗೆಯಲ್ಲಿ 25%ಬಳಿಕೆ ಮಾಡಿರುವುದಿಲ್ಲ (ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಶಿವಪ್ಪ ಠಕ್ಕಣ್ಣವರ )ಮತ್ತು ನರೇಗಾದಲ್ಲಿ ಇಟ್ಟಿರುವ ಬಸ್ತವಾಡ ಗ್ರಾಮದ ಕಾಮಗಾರಿಗಳನ್ನು ರದ್ದುಪಡಿಸಿದ್ದಾರೆ.

2) 2020 21ನೇ ಸಾಲಿನಲ್ಲಿ ಮೂಲ ಅನುದಾನ 4708171/- ಅನುದಾನದಲ್ಲಿ ಪರಿಶಿಷ್ಟ ಜಾತಿ ಪಂಗಡ 25% ಅನುದಾನವನ್ನು ಒಂದೇ ಕೆಲಸಕ್ಕೆ ಬಳಿಸಿದರು ಅದಕ್ಕೆ ನಾನು ದಿನಾಂಕ 2-3-2022ಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ರಾಯಬಾಗ್ ಹಾಗೂ 28 -2-2022ಕ್ಕೆ ಗ್ರಾಮ ಪಂಚಾಯಿತ ಅಳಗವಾಡಿ ಇವರಿಗೆ ಪರಿಶೀಲನೆಗೆ ಮತ್ತು ತಕರಾರು ಅರ್ಜಿ ಸಲ್ಲಿಸಿದ್ದು ಅದನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ.(ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಧರ ಶ್ರೀಶೈಲ ಮಾಲಗರ )
3) 2022 23ನೇ ಸಾಲಿನ ಮೂಲ ಅನುದಾನ 59.42574/-ಈ ಅನುದಾನವನ್ನು ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಮೊರಬ ಇವರು ಕೂಡ ಬಳಿಕೆಮಾಡಿರುವುದಿಲ್ಲ. 2020 ರಿಂದ 21, 2021 ರಿಂದ 23ರ ವರೆಗೆ ಅನುದಾನದಲ್ಲಿ ತಮಗೆ ಅನುಕೂಲ ರೀತಿಯಲ್ಲಿ ಖರ್ಚು ಹಾಕಿ ಬಿಲ್ಲು ಸಂದಾಯ ಮಾಡಿದ್ದಾರೆ. ಆದರೆ ಬಸ್ತವಾಡ ಗ್ರಾಮಕ್ಕೆ ಪ. ಜಾತಿ ಪ. ಪ.

ಪಂಗಡ ಪ್ಲಾಟ್ಗಳಲ್ಲಿ ಇಲ್ಲಿಯವರೆಗೆ ಮನೆ ಜಿ.ಪಿ ಎಸ್ ಮಾಡದೇ ಇರುವುದು ಹಕ್ಕು ಪತ್ರದಲ್ಲಿ ತಾರತಮ್ಯ ಮತ್ತು ಇನ್ನಿತರ ಕಾಮಗಾರಿಗಳು ಚರಂಡಿ, ನೀರು, ಸಿ ಸಿ ರಸ್ತೆ ಸ್ಮಶಾನ ಮಂಜೂರಾತಿ ಮಾಡಿರುವದಿಲ್ಲ.ಮೀಸಲಾತಿ ಅನುದಾನ ಬಗ್ಗೆ ಮಾಹಿತಿ ಕೇಳಿದರೂ ಸರಿಯಾದ ಮಾಹಿತಿ ನೀಡುತ್ತಿಲ್ಲ ಇತ್ತ ಕಾಮಗಾರಿಯೂ ಇಲ್ಲ ಜನಪ್ರತಿನಿದಿನಗಳು ಮತ್ತು ಅಧಿಕಾರಿಗಳು ಜಾಣ ಕುರುಡರಂತೆ ನಡೆದುಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಮಹಿಳಾ ಸದಸ್ಯರು ಹೆಸರಿಗೆ ಮಾತ್ರ ಸದಸ್ಯರು ಆಡಳಿತದಲ್ಲಿ ಅವರ ಯಜಮಾನ್ರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಈ ವಿಷಯದ ಕೂರಿತು ನಾವು ಅಧ್ಯಕ್ಷರನ್ನು ವಿಚಾರಸಿದರೆ ಪಿ ಡಿ ಓ ಅವರನ್ನೇ ಕೇಳಿ ಅಂತ ಮೌನಕ್ಕೆ ಶರಣರಾಗುತ್ತಾರೆ ಗ್ರಾಮ ಅಭಿವೃದ್ಧಿಗೆಂದು ಜನರು ಆಯ್ಕೆ ಮಾಡಿ ಗೌರವ ಸ್ಥಾನನೀಡಿ ಅಧಿಕಾರದಲ್ಲಿ ಕುಳ್ಳಿಸಿದರೆ ಮಣ್ಣು ತಿನ್ನುವ ಕೆಲಸ ಮಾಡಿದ ಅಧಿಕಾರಿಗಳು ಎಂದು ಬಸ್ತವಾಡ ಗ್ರಾಮದ ಎಸ್ ಸಿ ಸಮುದಾಯ ತಮಗಾದ ನೋವುಗಳನ್ನು ನಮ್ಮಮುಂದೆ ತೋಡಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಕುಮಾರಿ ಆರ್ ಆರ್ ಕಲ್ಯಾಣಕರ ವಕೀಲರು ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರು ಚಿಕ್ಕೋಡಿ ತಾಲೂಕು ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ್ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣ ಜಿಲ್ಲಾ ಅಧ್ಯಕ್ಷರು ಮಹಾಲಿಂಗ ಗಗ್ಗರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು….

ವರದಿ : ಮಹಾಲಿಂಗ ಗಗ್ಗರಿ ಜಿಲ್ಲಾ ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend