;

ಇಂದು ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ” ಕತ್ತಲು ರಾತ್ರಿ ರಾಜಕೀಯ ಆಟ ಶುರು…!!!

“ಇಂದು ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ”

ಇಂದು ಅಧಿಕೃತವಾಗಿ ಬಹಿರಂಗ ಸಭೆಗೆ ತೆರೆ ಎಳೆದಿದ್ದು. ಬುಧವಾರದಿಂದ ಬೆಳ್ಳಿಗೆ 7 ಗಂಟೆಯಿಂದ ಸಂಜೆ 6.30ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. 224 ವಿಧಾನಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ಹಿನ್ನೆಲೆ ಮತದಾನಕ್ಕೂ 48 ಘಂಟೆಗೂ ಮೊದಲು ಅಂದ್ರೆ ಇಂದಿನಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.. ಇಂದು ಸಂಜೆ 6 ಗಂಟೆಯಿಂದ ಅಬ್ಬರದ ರೋಡ್​ ಶೋ, ಪ್ರಚಾರ ಸಭೆಗೆ ಫುಲ್​ಸ್ಟಾಪ್​ ಹಾಕಲಾಗಿದೆ. ಆದ್ರೆ ಅಭ್ಯರ್ಥಿಗಳು ಆಯಾ ಕ್ಷೇತ್ರಗಳಲ್ಲಿ ಮನೆ ಮನೆ ಪ್ರಚಾರ ಮಾಡಲು ಮಾತ್ರ ಅವಕಾಶ ನೀಡಲಾಗುತ್ತದೆ.

ಇನ್ನು ಇಂದು ಚುನಾವಣಾ ಬಹಿರಂಗ ಪ್ರಚಾರ ಅಂತ್ಯ ಹಿನ್ನಲೆ ಎಲ್ಲಾ ಪಕ್ಷದ ಅಬ್ಯಾರ್ಥಿಗಳು ಕಾರ್ಯಕರ್ತರ ಜೊತೆ ಭರ್ಜರಿ ರೋಡ್ ಶೋ ಮಾಡಿದ್ದು ತಮ್ಮ ಕೋನೆಯ ಹಂತದ ಶಕ್ತಿ ಪ್ರದರ್ಶನ ತೋರಿಸಿದರು.
ಒಟ್ಟಾರೆ ಇಷ್ಟು ದಿನಗಳ ಕಾಲ ನೋಡಿದ್ದ ಭರ್ಜರಿ ಪ್ರಚಾರ, ಅಬ್ಬರದ ರೋಡ್​ ಶೋ ಹಾಗೂ ಭಾಷಣಗಳಿಗೆ ಇಂದು ಬ್ರೇಕ್ ಬಿದ್ದಿದ್ದು.. ಇದರ ಜೊತೆಗೆ 3 ದಿನ ಮದ್ಯ ಮಾರಾಟವೂ ಸ್ಥಗಿತವಾಗಲಿದೆ. ಆದ್ರೆ ಇನ್ನೇನಿದ್ರೂ ಅಭ್ಯರ್ಥಿಗಳಿಂದ ಮನೆ ಮನೆ ಪ್ರಚಾರದ ಅಬ್ಬರ ಜೋರಾಗಲಿದೆ…

ವರದಿ. ಅಶ್ರುಫುಲ್ಲ ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;