ಟಿಕೆಟ್ ತಪ್ಪಿದಕ್ಕೆ ಉಮಾಶ್ರೀ ಬೆಂಬಲಿಗರಿಂದ ಆಕ್ರೋಶ

ಬನಹಟ್ಟಿ: ಸ್ಥಳೀಯರಿಗೆ ಕಾಂಗ್ರೆಸ್ ಟಿಕೆಟ್ ನಿಡಿದ್ದರಿಂದ ಆಕ್ರೋಶಗೊಂಡ ಮಾಜಿ ಸಚಿವೆ ಉಮಾಶ್ರೀ ಬೆಂಬಲಿಗರು ವಿರೋಧಿಸಿ ರಸ್ತೆ ತಡೆದು ಟೈರಗೆ ಬೆಂಕಿ ಹಚ್ಚಿ ಘೋಷಿಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.ಕಳೆದ ಹದಿನೈದು ವರ್ಷಗಳಿಂದ ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿ
ಕಾರ್ಯಕರ್ತರನ್ನು ಒಗ್ಗೂಡಿಸಿದ್ದಾರೆ ಈಗ ಹೈಕಮಾಂಡ್ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು ಅಸಮಾಧಾನಕ್ಕೆ ಎಡೆ ಮಾಡಿ ಕೊಟ್ಟಿದ್ದಕ್ಕೆ. ಈಗ ನೀಡಿರುವ ಟಿಕೆಟ್ ಹಿಂಪಡೆದು ಶ್ರೀಮತಿ ಉಮಾಶ್ರೀ ಅವರಿಗೆ ಮರಳಿ ಟಿಕೆಟ್ ನಿಡಬೇಕೆಂದು ಒತ್ತಾಯಿಸಿದರು. ಹೆಚ್ಚಿದ ಉಮಾಶ್ರೀಗೆ ಕಾಂಗ್ರೆಸ್ ಟಿಕೆಟ್ ನಿಡಬೇಕೆಂಬ ಬೇಡಿಕೆ. ಟಿಕೆಟ್ ನೀಡದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೈಕಮಾಂಡಗೆ ಎಚ್ಚರಿಕೆ ನೀಡಿದರು. ನೇಕಾರ ನಾಯಕಿಗೆ ಕೈ ಟಿಕೆಟ್ ತಪ್ಪಿದ್ದು ನೇಕಾರರಿಗೆ ಅನ್ಯಾಯ ಆಗುತ್ತಿದೆ ಎಂದರು ಉಮಾಶ್ರೀ ಅವರಿಗೆ ಷಡ್ಡಂತ್ರ ಮಾಡಿ ಟಿಕೆಟ್ ಕೈ ತಪ್ಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಮಾಶ್ರೀ ಅವರಿಗೆ ಟಿಕೆಟ್ ನೀಡಿದ ಘೋಷಿಣೆ ಅಭ್ಯರ್ಥಿಗೆ ಮುಂದುವರಿದರೆ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವುದಿಲ್ಲ ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ಮಲ್ಲಪ್ಪ ಸಿಂಗಾಡಿ,ವಿಠ್ಠಲ ಹೊಸಮನಿ,ಮಲ್ಲಪ್ಪ ಭಾವಿಕಟ್ಟಿ,ಸಿದ್ದು ಬೆನ್ನೂರ,ಜೋತೆಪ್ಪ ಕಪರಟ್ಟಿ ,ಪ್ರಕಾಶ ಮಮದಾಪೂರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
