ಹೊಳಲ್ಕೆರೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಡಾ. ಜಯಸಿಂಹ ಲೋಕನಾಥ್…
ವೈದ್ಯಸೇವೆಗೆ ರಾಜೀನಾಮೆ ನೀಡಿ ಈ ಹಿಂದೆ ತಾಲೂಕಿನಾದ್ಯಂತ ಎಲ್ಲ ಹಳ್ಳಿಗಳಲ್ಲಿ ಅಬ್ಬರದ ಪ್ರಚಾರ ಮಾಡಿ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ, ಡಾ ಜಯಸಿಂಹ ಲೋಕ್ ನಾಥ್ ಅವರಿಗೆ ಬಿಜೆಪಿ ಟಿಕೆಟ್ ಮಿಸ್ ಆಗಿದೆ..
ಈ ಹಿನ್ನೆಲೆಯಲ್ಲಿ ಕಳೆದ ಗುರುವಾರ ಹೊಳಲ್ಕೆರೆ ಪಟ್ಟಣದಲ್ಲಿ ಅಭಿಮಾನಿಗಳು ಮತ್ತು ಬಂಜಾರ ಸಮುದಾಯದ ಸಬೆ ಕರೆದು ಚುನಾವಣೆಗೆ ನಿಲ್ಲುವ ಚರ್ಚೆ ನಡೆಸಿದರು. ಅಭಿಮಾನಿಗಳು ಹಾಗೂ ತಾಲೂಕಿನ ಜನರ ಒತ್ತಾಸೆಯಂತೆ ಜಯಸಿಂಹ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ತಿರ್ಮಾನಿದರು..

ಅದರಂತೆ ಇಂದು ಅಪಾರ ಬೆಂಬಲಿಗರು, ಅಭಿಮಾನಿಗಳು ಮುಖಂಡರೊಂದಿಗೆ, ಸೇರಿ ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಹೊಳಲ್ಕೆರೆ ಪಟ್ಟಣದ ಬೀದಿಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರು..
ಇದೆ ವೇಳೆ ಮಾದ್ಯಮದವರ ಜೊತೆ ಮಾತನಾಡಿದ ಅವರು ನಮ್ಮ ತಾಲೂಕಿನಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆ ಸೇರಿದಂತೆ ತಾಲೂಕಿನಲ್ಲಿ ಅನೇಕ ಉತ್ತಮ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಮಾಡಲಿದ್ದೇನೆ. ತಾಲೂಕಿನಾದ್ಯಂತ ಈ ಹಿಂದೆ ಹಳ್ಳಿಗಳಿಗೆ ತೆರಳಿದಾಗ ನನಗೆ ಜನರು ಗೆಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ನವ ಹೊಳಲ್ಕೆರೆ ನಿರ್ಮಾಣದ ಕನಸಿಗೊಂದು ನಮಗೂ ಅವಕಾಶ ಕೊಡಿ ಸರ್ವ ಜನಾಂಗದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ವಿನಂತಿಸಿದರು..
ಈ ಸಂದರ್ಭದಲ್ಲಿ ಧನಂಜಯ್ ನಾಯ್ಕ್ ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರು ಮತ್ತು ಕುರುಬ ಸಮಾಜದ ಮುಖಂಡರಾದ ರುದ್ರಪ್ಪ, ಮಾಜಿ ಯಾಲೂಕು ಪಂಚಾಯತ್ ಅದ್ಯಕ್ಷರಾದ ಮೋಹನ್ ನಾಗರಾಜ್. ದೇವೇಂದ್ರನಾಯ್ಕ್. ಹಾಗೂ ಅಭಿಮಾನಿಗಳು ಇನ್ನು ಮುತಾಂದ ಮುಖಂಡರುಗಳು ಇದ್ದರು…

ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
