;

ಕೂಡ್ಲಿಗಿ ವಿ,ಲೋಕೇಶ್ ನಾಯಕ ಇವರಿಗೆ ಬಿಜೆಪಿ ಟಿಕೆಟ್…!!!

ಕೂಡ್ಲಿಗಿ : ಲೋಕೇಶ್ ವಿ ನಾಯಕ ಇವರಿಗೆ ಬಿಜೆಪಿ ಟಿಕೆಟ್

ಕೂಡ್ಲಿಗಿ: ಲೋಕೇಶ್ ವಿ ನಾಯಕ್ ಅವರಿಗೆ ಬಿಜೆಪಿ ಪಕ್ಷವು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಿಸಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ದೊರೆಯಲಿಲ್ಲ ಎಂದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲೋಕೋಶ್ ನಾಯಕ ಅವರು ಈಗ ಬಿಜೆಪಿ ಸೇರಿದ್ದು ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಾರೆ. ಬಂಗಾರು ಹನುಮಂತು, ಸೂರ್ಯ ಪಾಪಣ್ಣ, ಎಸ್ ಪ್ರಕಾಶ್, ಕೋಡಿಹಳ್ಳಿ ಭೀಮಣ್ಣ, ರೇಣುಕಾ ಎಸ್ ಸೇರಿದಂತೆ ಹಲವರು ಟಿಕೆಟ್ ಗಾಗಿ ತೀವ್ರ ಕಸರತ್ತು ನಡೆಸಿದ್ದರು. ಪಕ್ಷ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ, ಪಕ್ಷವು ಅಂತಿಮವಾಗಿ ಲೋಕೇಶ್ ವಿ ನಾಯಕ್ ಅವರಿಗೆ ಮಣೆ ಹಾಕಿದೆ. ಇತ್ತೀಚೆಗೆ ಎನ್.ವೈ.ಗೋಪಾಲಕೃಷ್ಣ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಪಕ್ಷವು ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಘೋಷಿಸಿದೆ. ಇನ್ನೂ ಕೂಡ್ಲಿಗಿ ಕ್ಷೇತ್ರದಲ್ಲಿ 2018ರಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಯಾಗಬಯಸಿದ್ದ ಲೋಕೇಶನಾಯಕ ದೊರೆಯದಿರುವಾಗ ಪಕ್ಷೇತರನಾಗಿ ಸ್ಪರ್ಥಿಸಿ 25ಸಾವಿರ ಮತ ಪಡೆದು ಮೂರನೇಸ್ಥಾನದಲ್ಲಿದ್ದರು ನಂತರ ಮತ್ತೆ ಚುನಾವಣಾ ನಂತರ ಕಾಂಗ್ರೆಸ್ ಸೇರಿ ಈ ಭಾರಿ ಟಿಕೆಟ್ ಸಿಕ್ಕೆ ಸಿಗುತ್ತೇ ಎಂಬ ವಿಶ್ವಾಸದಲ್ಲಿದ್ದಾಗ ಇತ್ತೀಜೆಗೆ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣನವರ ಪುತ್ರ ಡಾ.ಶ್ರೀನಿವಾಸ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದ ಕಾರಣ ಬೇಸತ್ತು ಬಿಜೆಪಿ ಸೇರಿದ್ದರು. ಇದೀಗ ಯುವಕ ಲೋಕೇಶ್ ನಾಯಕರವರಿಗೆ ಪಕ್ಷ ಮಣೆ ಹಾಕಿ ಸ್ಥಾನ ನೀಡಿದೆ, ಇದನ್ನು ನೋಡಿದರೆ ಬಿಜೆಪಿ ಪಕ್ಷ ಈ ಭಾರಿಯು ಸಹ ತಾಲೂಕಿನಲ್ಲಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡಿರುವುದoತು ಬಹು ಮುಖ್ಯ…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;