;

ಭರಮಸಾಗರ ಜಿಲ್ಲಾಪಂಚಾಯ್ತಿ‌ ವ್ಯಾಪ್ತಿಯಲ್ಲಿ ಬಿರುಸಿನ ಮತಪ್ರಚಾರ ನಡೆಸಿದ ಮಾಜಿ ಸಚಿವ ಹೆಚ್.ಆಂಜನೇಯ…!!!

ಭರಮಸಾಗರ ಜಿಲ್ಲಾಪಂಚಾಯ್ತಿ‌ ವ್ಯಾಪ್ತಿಯಲ್ಲಿ ಬಿರುಸಿನ ಮತಪ್ರಚಾರ ನಡೆಸಿದ ಮಾಜಿ ಸಚಿವ ಹೆಚ್.ಆಂಜನೇಯ

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಚೌಲಿಹಳ್ಳಿ, ದ್ಯಾಪನಹಳ್ಳಿ, ಕೊಗುಂಡೆ . ಗ್ರಾಮಗಳಲ್ಲಿ ಇಂದು ಮಾಜಿ ಸಚಿವ ಹೆಚ್.ಆಂಜನೇಯ ಅವರು ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಗ್ರಾಮಸ್ಥರು, ಅಭಿಮಾನಿಗಳು ಡೋಲು, ತಮಟೆ ಬಾರಿಸಿ, ಪಟಾಕಿ ಸಿಡಿಸಿ ಹೂಮಳೆ ಸುರಿಸುವ ಮೂಲಕ ಅದ್ದೂರಿಯಾಗಿ ಆಂಜನೇಯ ಅವರನ್ನು ಸ್ವಾಗತಿಸಿದರು.

ಗ್ರಾಮದ ಹಲವು ಕೇರಿಗಳಲ್ಲಿ ಸಂಚರಿಸಿದ ಆಂಜನೇಯ ಅವರು ಮನೆ ಮನೆಗೆ ತೆರಳಿ ಮತ ಪ್ರಚಾರ ನಡೆಸಿದರು.

ಇದೇ ವೇಳೆ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು , ಎಲ್ಲ ಜನರ ಬದುಕು ಸಹಜ ಜೀವನದತ್ತ ಮರಳುವ ದಿನಗಳು ಬರಲಿವೆ ಎಂದು ಜನರಿಗೆ ತಿಳಿಸಿದರು..

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ತಾಂಡಾ ನಿಗಮದ ಮಾಜಿ ಅಧ್ಯಕ್ಷ ಅನಿಲ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಮುಖಂಡರಾದ ಬಿ.ನಾಗೇಂದ್ರಪ್ಪ, ಹೆಚ್.ಕೆಂಚಪ್ಪ, ಶಶಿ ಪಾಟೀಲ್, ಬಸವರಾಜಪ್ಪ, ಪರಶುರಾಮಪ್ಪ, ಕರಿಯಪ್ಪ ನಿವೃತ್ತ ಶಿಕ್ಷಕರು ಹಾಗೂ ಕೆಂಚಪ್ಪ ಸೇರಿದಂತೆ ಇತರೆ ಪ್ರಮುಖ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ. ಸುರೇಶ್ ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;