;

ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರನಾಯಕ ಭಾರತ ದೇಶದ ಮಾಜಿ ಉಪಪ್ರಧಾನಿ ಡಾ!ಬಾಬು ಜಗಜೀವನರಾಮ್ ಅವರ ಜಯಂತಿಯ ಶುಭಾಶಯಗಳು…!!!

ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರನಾಯಕ ಭಾರತ ದೇಶದ ಮಾಜಿ ಉಪಪ್ರಧಾನಿ ಡಾ!ಬಾಬು ಜಗಜೀವನರಾಮ್ ಅವರ ಜಯಂತಿಯ ಶುಭಾಶಯಗಳು.
ಬಹುಶಃ ಭಾರತದಲ್ಲಿ ವರ್ಣ ಜಾತಿ ವ್ಯವಸ್ಥೆ
ಇಲ್ಲದಿದ್ದರೆ ಭಾರತದ ಅತ್ಯಂತ ಹೆಚ್ಚು ಜನಪ್ರಿಯವಾದ ಹೆಸರು ಯಾವುದಾದರೊಂದು ಇರಬಹುದಾದರೆ ಅದು
ಡಾ!ಬಾಬು ಜಗಜೀವನರಾಮ್ ಹೆಸರು ಇವರ ಚಲಬೀಡದ ಅವಿರತವಾಗಿ ಹೋರಾಟದ ಮನೋಭಾವ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಕ್ವಿಟ್ ಇಂಡಿಯಾದಂತಹ ಚಳುವಳಿಯ ಸಂದರ್ಭದಲ್ಲಿ ದೇಶದ ಧ್ವಜ ಹಿಡಿದು ಹೋಗುವ ಅಚಲವಾದ ದೈರ್ಯ ಮೆಚ್ಚಲೇಬೇಕು ದೇಶದ ಐಕ್ಯತೆ ಸಮಗ್ರತೆ ಸ್ವಾತಂತ್ರ್ಯ ವಿಚಾರ ಬಂದಗಾಲೆಲ್ಲ ದೇಶ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡು ಬಹುತ್ವದ ವ್ಯಕ್ತಿತ್ವ ಎಲ್ಲರಿಗೂ ಒಪ್ಪುವಂತಹ ಗುಣವಂತ ಅತಿ ಸಣ್ಣವಯಸ್ಸಿನಲ್ಲೆ ರಾಜಕೀಯಕ್ಕೆ ದುಮುಕುವ ಇವರು ಸ್ವಾತಂತ್ರ್ಯ ಭಾರತದ ಸ್ವಾತಂತ್ರ್ಯ ನಂತರದ ಸೋಲಿಲ್ಲದ ಸರದಾರ ಎಂಬ ಖ್ಯಾತಿ ದಾಖಲೆಯನ್ನು ಹೊಂದಿದ್ದಾರೆ.”
ಕಾಂಗ್ರೆಸ್ ಪಕ್ಷದಲ್ಲಿ ನೆಹರು ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಮಿಕ ಕಾಯಿದೆ ಮಾಡುವ ಮುಖಾಂತರ ಇಡೀ ದುಡಿಯುವ ವರ್ಗದ ಜೀವನದಲ್ಲಿ ಭದ್ರತೆ ರಕ್ಷಣೆ ನೀಡಿದ ಮಹಾನ್ ಚೇತನ,ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ಚಿಂತನೆ ನಡೆಸಿ ಕಾರ್ಯರೂಪಕ್ಕೆ ತರಲು ಕಾರಣಿಭೂತರಾದ ಡಾ!ಬಾಬೂಜಿ
ಭೂಸುಧಾರಣೆಯಂತಹ ಕಾಯ್ದೆ ಮೂಲಕವೇ ಗಾವಂಠಾಣ,ಗೋಮಾಳ,ಭೂ ರಹಿತ ದಲಿತ ಅತಿ ಹಿಂದೂಳಿದ ವರ್ಗದ ಜನರಿಗೆ ಭೂ ಒಡೆತನದ ಹಕ್ಕನ್ನು ನೀಡಲು ಅಂದಿನ ಕೃಷಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ದಲಿತರಿಗೆ ಮೀಸಲಾತಿಯಲ್ಲಿ ಬಡ್ತಿ ಮೀಸಲಾತಿಯನ್ನು ಕಲ್ಪಿಸಿಕೊಟ್ಟ ದೂರದೃಷ್ಟಿ ನಾಯಕ.
ದಲಿತರ ಕಲ್ಯಾಣಕ್ಕಾಗಿ ಕೊಟ್ಟ ಕೊಡುಗೆಗಳು ಅಪಾರ
1971 ಭಾರತ ಪಾಕಿಸ್ತಾನದ ಯುದ್ದದ ಸಂದರ್ಭದಲ್ಲಿ ರಕ್ಷಣೆ ಸಚಿವರಾಗಿ ಪಾಕಿಸ್ತಾನವನ್ನು ಯುದ್ದದ ಸಮಯದಲ್ಲಿ ಸೋಲಿಸಿ ಮುಖಾಂತರ ಹೊಸದಾಗಿ ಬಾಂಗ್ಲಾದೇಶ ಜನ್ಮತಾಳಲು ಕಾರಣವಾದವರು ಡಾ!ಬಾಬು ಜಗಜೀವನರಾಮ್ ಅವರು ದೇಶದುದ್ದಕ್ಕೂ ಇಂದಿರಾಗಾಂಧಿ ಏರಿದ್ದ ತುರ್ತುಪರಿಸ್ಥಿತಿ ವಿರೋಧ ಮಾಡುವ ಮುಖಾಂತರ ಕೆಚ್ಚೆದೆಯ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದ ಧೀರ ಕಾಂಗ್ರೆಸ್ ಪಕ್ಷದಲ್ಲಿ ನಡೆಯುವ ಲೋಪದೋಷಗಳನ್ನು ದಿಟ್ಟತನದಿಂದ ಹೇಳುವ ಛಲಗಾರ ಕಾಂಗ್ರೆಸ್ ಪಕ್ಷದ ಇಂದಿರಾ ಸರ್ವಾಧಿಕಾರ ನಿರಂಕುಶ ಪ್ರಭುತ್ವದ ವಿರುದ್ಧ ಸೆಡ್ಡು ಒಡೆದು ಕಾಂಗ್ರೆಸ್ ಪಕ್ಷ ತೊರೆದು ಡೆಮೊಕ್ರಟಿಕ್ ಪಾರ್ ಕಾಂಗ್ರೆಸ್ ಪಕ್ಷ ಕಟ್ಟಿಕೊಂಡು ಜಯಗಳಿಸಿದ ಧಿಮಂತ ರಾಜಕಾರಣಿ.
ಡಾ!ಬಾಬೂಜಿ ಅವರಂತಹ ಅಪ್ಪಟ ದೇಶ ಭಕ್ತಿ ಈ ಕೆಳಗೆ ಅವರ ಹೃದಯವಂತಿಕೆ ಮಾತುಗಳಿಂದ ಸಾಕ್ಷಿಕರಿಸಬಹುದು.
ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿ ಅಡಗಿದೆ.
ಅದರ ಆತ್ಮೋದ್ಧಾರದಲ್ಲಿ ( ಮುಕ್ತಿ ) ನಮ್ಮ ಆತ್ಮೋದ್ಧಾರ ಮತ್ತು ಅದರ ವಿಮೋಚನೆಯಲ್ಲಿ ನಮ್ಮ ವಿಮೋಚನೆ”
“ನಾನು ಯಾವಾಗಲೂ ದೇಶ ಅತ್ಯಂತ ಪ್ರಮುಖವಾದದ್ದೆಂದು ತಿಳಿದುಕೊಂಡಿದ್ದೇನೆ. ಸ್ವಲ್ಪ ಕಾಲದ ಹಿಂದೆ ದೇಶ ಎದುರಿಸುತ್ತಿದ್ದ ಅನೇಕ ಭಯಂಕರ ಸಮಸ್ಯೆಗಳನ್ನು ಎದುರಿಸಲು ಶ್ರೀ ರಾಜೀವ್ ಗಾಂಧಿ ನನ್ನ ಸಲಹೆ ಕೇಳಿದ್ದರು. ದೇಶದ ಹಿತಕ್ಕೆಂದು ನಾನು ಅಹಂ ತೊರೆದು ಅವರಿಗೆ ಸಲಹೆಗಳನ್ನು ನೀಡಿದ್ದೇನೆ. ಅದಕ್ಕೆ ಅವರೇ ಸಾಕ್ಷಿ
ನಾನಿರುತ್ತೇನೋ ಬಿಡುತ್ತೇನೋ, ನಾವು ಇರುತ್ತೇವೋ ಬಿಡುತ್ತೇವೋ, ಭಾರತವಂತೂ ಇದ್ದೆ ಇರುತ್ತದೆ.
ದೇಶದ ಒಗ್ಗಟ್ಟು, ಅಖಂಡತೆಯ ವಿಚಾರ ಬಂದಾಗ ಜಾತಿಯಾಗಲೀ, ಧರ್ಮವಾಗಲೀ, ಭಾಷೆಯಾಗಲಿ ದೊಡ್ಡ ವಿಚಾರವಾಗುವುದಿಲ್ಲ.
ದೇಶದೊಂದಿಗೆ ಹೋಲಿಸಿದಾಗ ಅವೆಲ್ಲ ನಗಣ್ಯ. ಅವಕ್ಕೆ ಅಸ್ತಿತ್ವವಿರುವುದೇ ದೇಶದಿಂದ. ದೇಶವೇ ಇಲ್ಲದಿದ್ದರೆ ಅವು ಇರುತ್ತಿದ್ದವೇ?
ಅದಕ್ಕೆ ನಾನು ದೇಶ ಪ್ರಮುಖ ಎಂದು ಹೇಳುತ್ತಿದ್ದರು.
ಒಬ್ಬ ದಲಿತ ವ್ಯಕ್ತಿ ಜನರಲ್ ಸೀಟ್ ನಲ್ಲಿ ಚುನಾವಣೆಗೆ ನಿಂತು ಜಯಶೀಲರಾಗಿದ್ದ ಮೊದಲನೆಯ ಮತ್ತು ಕೊನೆಯ ವ್ಯಕ್ತಿ ಯಾರೆಂದರೆ ಅದು ಔದ್ಯೋಗಿಕ ಮೀಸಲಾತಿ ( ನೌಕರಿಯಲ್ಲಿ ಮೀಸಲಾತಿ ) ಯನ್ನು ಸಂವಿಧಾನದಲ್ಲಿ ಅಳವಡಿಸಲು ಮಹತ್ವದ ಪಾತ್ರ ವಹಿಸಿದ ಡಾ. ಬಾಬು ಜಗಜೀವನ ರಾಮ್ ರವರು. ಅವರು 1937 ರಲ್ಲಿ ಬಿಹಾರ ವಿಧಾನಸಭೆಯ ಜನರಲ್ ಸೀಟ್ ಅವರಿಂದ ಚುನಾಯಿತರಾಗಿ ಸಂಸತ್ತಿನ ಸಚಿವರಾಗಿದ್ದರು.
#ಡಾ.#ಬಾಬು #ಜಗಜೀವನರಾಮ್ #ದೇಶಕ್ಕೆ #ನೀಡಿದ #ಕೊಡುಗೆಗಳು.
#ಸಂವಿಧಾನದ_ಸಭೆಯಲ್ಲಿ
5 ಸಮಿತಿ- ಉಪಸಮಿತಿಯ ಸದಸ್ಯರಾಗಿ ಕಾರ್ಯನಿರ್ವಾಸಿದ್ದಾರೆ,
ಕಾರ್ಮಿಕ ಖಾತೆಯ ಸಚಿವರಾದರು,TRADE UNION ACT,MINIMUM WAGES ACT,PF ACT ರಾಜ್ಯ ಕಾರ್ಮಿಕ ವಿಮಾ ಕಾಯಿದೆ,ತೋಟದ ಕಾರ್ಮಿಕ ಸಂರಕ್ಷಣಾ ಕಾಯಿದೆ, ಬಂದರು ಕಾರ್ಮಿಕ ಕಾಯಿದೆ,ದುಡಿಯುವ ವರ್ಗದ ವಿಶ್ವಕರ್ಮಿ ಆಗಿದ್ದರು ಬಾಬೂಜಿ.
1952ರ ಸಂಪರ್ಕ ಸಾರಿಗೆ ಸಚಿವರಾದರು ವಾಯು ಸಾರಿಗೆ ರಾಷ್ಟ್ರೀಕರಣ ಮಾಡಿದರು,ಅಂಚೆ ತಂತಿ ಇಲಾಖೆ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬೆಂಗಳೂರು ITI development ಮಾಡಿದ ಮಹಾನ್ ಚತುರ ರಾಜಕಾರಣಿ,
1956ರಲ್ಲಿ ರೈಲ್ವೆ ಖಾತೆ ಸಚಿವರಾಗಿದ್ದರು ಇದರಲ್ಲಿ ದುಡಿಯುವ ಬಡ ಕಾರ್ಮಿಕ ವರ್ಗಕ್ಕೆ ಕಾರ್ಮಿಕ ಪಿಂಚಣಿ ಪದ್ದತಿ ಅಳವಡಿಸಿದವರು,
ದಲಿತರಿಗೆ ವೃಂದ ಬಡ್ತಿ ಮಿಸಲಾತಿ ಜಾರಿಗೊಳಿಸುವರು,
1957 ರಲ್ಲಿ ಕೃಷಿ ಸಚಿವರಾದರು ಹಸಿದಿದ್ದ ದೇಶದ ಒಡಲಿಗೆ ಹಸಿರನ್ನೆ ತಿನ್ನಿಸಿದರು
ದೇಶದ ತುಂಬಾ ಸಣ್ಣ ಅತಿ ಸಣ್ಣ ರೈತರು
ಕೃಷಿ ಚಟುವಟಿಕೆಗಳನ್ನು ಮಾಡುವ ಮೂಲಕ ಈ ದೇಶದ ಆಹಾರ ಉತ್ಪಾದನೆ ಹೆಚ್ಚಿಸಲು ಸಹಾಯ ಸಹಕಾರ ಕೃಷಿ ಬೆಳೆಗಳಿಗೆ ಬೆಂಬಲ ನೀಡುವ ಮೂಲಕ ಹಸಿರು ಕ್ರಾಂತಿ ಹರಿಕಾರನಾದ
ಕ್ಷಿರೋತ್ಪನ್ನದಲ್ಲಿ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಲು ಪಶುಸಂಗೋಪನೆ ಆರ್ಥಿಕ ಕಸಬನ್ನಾಗಿಸಲು ಕಾರ್ಯಪ್ರವೃತ್ತರಾದರೂ ಗುಜರಾತ್ ರಾಜಸ್ಥಾನ ಈಗಿನ ಕರ್ನಾಟಕದ KMF ಡೈರಿಯು ಅವರ ಪರಿಶ್ರಮದಿಂದ ಆದಂತವು ಶ್ವೇತ ಕ್ರಾಂತಿಗೆ ಸೋಪಾನವಿಟ್ಟ ಮಹಾನ್ ಚೇತನ.
ಬರಪ್ರದೇಶಗಳಲ್ಲಿ ಎಣ್ಣಿ ಬೀಜ ದ್ವಿದಳ
ಧಾನ್ಯಗಳು ಬೆಳೆಯಲು ಪ್ರೊತ್ಸಾಹ ನೀಡಿದರು
ಹಳದಿ ಕ್ರಾಂತಿ ಸಹ ಕಾಣಲು ಪ್ರೇರಪಕರು.
ನೀರಾವರಿ ಯೋಜನೆಯನ್ನು ಜಾರಿ ಮಾಡಿಸಿ ಈಗಿನ ಕರ್ನಾಟಕ ತಮಿಳುನಾಡಿನ ಕಾವೇರಿ ನದಿ ವಿವಾದ ಬಗೆಹರಿಸಲು ಪ್ರಯತ್ನ ಮಾಡಿದರು ಆದರೆ ತಮಿಳುನಾಡು ಮೊಂಡು ವಾದದಿಂದ ಹಾಗೆ ಉಳಿದಿದೆ.
ಪ್ರಮುಖವಾಗಿ ಭೂ ಸುಧಾರಣೆ ಕಾಯಿದೆ ಜಾರಿಗೊಳಿಸಿ ಭೂಮಿ ಅನುಭೋಗ ಹೊಂದಿರುವ ವ್ಯಕ್ತಿಗಳು ಅದರ ಹಕ್ಕನ್ನು ಸ್ಥಾಪಿಸಿಕೊಳ್ಳಲು ಅವಕಾಶ ನೀಡಿದರು
ಕೃಷಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಬೇರ್ಪಡಿಸಿ ಅವುಗಳ ಸ್ವಾತಂತ್ರ ಖಾತೆಯ ಮೂಲಕ ಅನುವು ಮಾಡಿಕೊಡುವ ಮೂಲಕ ತಮ್ಮದೇ ಸ್ವಂತ ದೂರದೃಷ್ಟಿ ಹೊಂದಿದ್ದ ಚೇತನ.
1970 ಭಾರತದ ದೇಶದ ರಕ್ಷಣಾ ಇಲಾಖೆ ವಹಿಸಿಕೊಂಡರು ಆ ಸಂದರ್ಭದಲ್ಲಿ ಪಚ್ಚಿಮ ಪಾಕಿಸ್ತಾನ ಬಂಗಾಳಿ ಸ್ವಾಯತ್ತ ಆಗ್ರಹಿಸಿದ ರಾಮರು ಬಾಂಗ್ಲಾದೇಶದ ನಿರಾಶ್ರಿತರ ಆಶ್ರಯ ನೀಡಿ ಪಾಕಿಸ್ತಾನದ ವಿರುದ್ಧ 1972 ರಲ್ಲಿ ಯುದ್ಧ ಮಾಡದೇ ಪಾಕಿಸ್ತಾನ ಭಾರತಕ್ಕೆ ಶರಣಾಗತಿಯ ಆಯಿತು ಆಗ ಹೊಸ ರಾಷ್ಟ್ರವಾದ ಬಾಂಗ್ಲಾದೇಶ ಉದಯಕ್ಕೆ ಕಾರಣವಾದ ಮಹಾನ್ ದಕ್ಷ ಆಡಳಿತಗಾರ ಈ ಜಗಜೀವನರಾಮ್ ಅವರು. #ದಲಿತರಿಗೆ_ಬಾಬೂಜಿ_ಕೊಡುಗೆಗಳು:-
ಕಾರ್ಮಿಕ ವರ್ಗದ ಜನರಲ್ಲಿ ದಲಿತರು ಹೆಚ್ಚು ಇರುತ್ತಾರೆ ಅವರಿಗೆ PF ESI ,ಕನಿಷ್ಠ ಕೂಲಿ ಕಾಯಿದೆ,ಕಾರ್ಮಿಕರಿಗೆ ಪಿಂಚಣಿ.
ಮೊಟ್ಟಮೊದಲ ಬಾರಿಗೆ ರೈಲ್ವೆ ಇಲಾಖೆಯ ಅಮೂಲ ಬದಲಾವಣೆ ಮಾಡಲಾಯಿತು ಅಲ್ಲಿ ದುಡಿಯುವ ವರ್ಗದ ಸಮಾನತೆಯ ಅರ್ಥ ಕಲ್ಲಿಸಿದವರ ಜೊತೆಗೆ ರೈಲು ಇಲಾಖೆಯ ಬಡ್ತಿ ಮಿಸಲಾತಿ ನೀಡುವ ಮೂಲಕ ಎಲ್ಲಾ ಇಲಾಖೆಗಳಲ್ಲಿ ಬಡ್ತಿ ಮಿಸಲಾತಿ ಜಾರಿ ಮಾಡಲಾಯಿತು ಮತ್ತೆ ಭೂ ಸುಧಾರಣೆ ತರಲು ಮೂಲಕ ಭೂಮಿ ಅನುಭೋಗ ಹೊಂದಿದ್ದವರೆ ಅದರ ಒಡೆಯ ಎಂದು ಹೇಳಿದರು
“ಗರಿಬಿ ಹಠವೊ” ವ್ಯಾಖ್ಯಾನ ನೀಡಿ ಅದನ್ನು ಬಡವರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನ ಮಾಡಿದರು.
ಕರ್ನಾಟಕದಲ್ಲಿ ಪ.ಜಾತಿ.ಪ.ಪಂಗಡದ ಅಭಿವೃದ್ಧಿ ನಿಗಮ ಸ್ಥಾಪಿಸಿದ ದಲಿತರೊದ್ದರಕ.
ದುಡಿಯುವ ವರ್ಗದ ಕಾಯಕಕ್ಕೆ ಮಹತ್ವ ನೀಡಿದ ಶೋಷಿತರ ಬದುಕಿನ ಆಶಾಕಿರಣ…
ಡಾ.ಬಾಬೂ ಜಗಜೀವನರಾಮ್ ರಾಜಕೀಯ ಜೀವನ ಚರಿತ್ರೆಯಲ್ಲಿ ದಾಖಲು ಮಾಡುವಂತದ್ದು.
ಆಡು ಮುಟ್ಟದ ಸೊಪ್ಪಿಲ್ಲ ಜಗಜೀವನರಾಂ ಮುಟ್ಟದ ಖಾತೆಗಳೆ ಇಲ್ಲೆ ಎಂಬಂತೆ
ಈ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚು ಖಾತೆಗಳನ್ನು ದಕ್ಷ ಪ್ರಾಮಾಣಿಕತೆ ಉತ್ತಮ ಗುಣಮಟ್ಟದ ಆಡಳಿತ ನೀಡಿದ ಕಿರ್ತಿಗೆ ಏಕೈಕ ವ್ಯಕ್ತಿತ್ವ ಬಾಬೂಜಿ ಅವರದು
ಮೋದಲಿಗೆ ಕಾರ್ಮಿಕ ಖಾತೆ
ಶೋಷಿತರ ಬದುಕಿನ ಆಶಾಕಿರಣರಾದರೂ
ಸಂಪರ್ಕ ಖಾತೆ ಅದನ್ನು ರಾಷ್ಟ್ರೀಕರಣ ಮಾಡಿ ಜನಸಾಮಾನ್ಯರಿಗೂ ಎಲ್ಲರಿಗೂ ಸಮಾನತೆಯ ಕಲ್ಪನೆಯನ್ನು ಕಟ್ಟಿಕೊಟ್ಟರು
ಕೃಷಿ ಸಚಿವರಾದರು ಈ ಖಾತೆಯ ಇತಿಹಾಸದಲ್ಲಿ ಅತ್ಯಂತ ದಾಖಲೆ ನಿರ್ಮಿಸಿದರು ಭೂ ಸುಧಾರಣೆ ತರಲು ಯತ್ನಿಸಿದ ವ್ಯಕ್ತಿ ಹಸಿದ ದೇಶಕ್ಕೆ ಹಸಿರು ಊಣಿಸಿದ ಮಹಾತ್ಮ ಈ ಜಗಜೀವನರಾಮ್,ಕ್ಷೀರ ಕ್ರಾಂತಿ ಹಳದಿ ಕ್ರಾಂತಿ ಮುನ್ನುಡಿ ಬರೆದಿದ್ದಾರೆ.
ರಕ್ಷಣೆ ಖಾತೆ ಇದು ಐತಿಹಾಸಿಕ ದಾಖಲೆ ಇತಿಹಾಸದ ಪುಟಗಳಲ್ಲಿ ಯಾವುದಾದರೂ ಒಂದು ದೇಶ ಉದಯಕ್ಕೆ ಕಾರಣವಾಯಿತು ಅದು ಬಾಂಗ್ಲಾದೇಶ ವಿಮೋಚನಾ ಸಂದರ್ಭದಲ್ಲಿ ರಕ್ಷಣಾ ಇಲಾಖೆ ಜವಾಬ್ದಾರಿ ಸ್ಥಾನ ಹೊಂದಿರುವ ಬಾಬೂಜಿ ಹೊಸ ರಾಷ್ಟ್ರದ ಉದಯಕ್ಕೆ ಕಾರಣಿಭೂತರಾದರು.
ಮತ್ತು ಈ ಜನತಾ ರಂಗದ ಸರ್ಕಾರದಲ್ಲಿ ಜಾತಿಯ ಕಾರಣದಿಂದಾಗಿಯೇ ಜಗಜೀವನರಾಂ ಅವರಿಗೆ ದೊರೆಯಬೇಕಾದ ಪ್ರಧಾನಿ ಹುದ್ದೆ ತಪ್ಪಿತು ಇದು ಇತಿಹಾಸದಲ್ಲಿ ದಲಿತರಿಗೆ ಮಾಡಿದ ಮಹಾನ್ ದ್ರೋಹವೇ ಸರಿ ಆದರೂ ಈ ದೇಶದಲ್ಲಿ ಒಬ್ಬ ದಲಿತ ವ್ಯಕ್ತಿ ಉಪಪ್ರಧಾನಿಯಾಗಿದ್ದು ಇತಿಹಾಸವೇ ಸರಿ.
ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುವದರ ಹಿಂದೆ ಬಾಬೂಜಿ ಕೊಡುಗೆ ಅಪಾರ ಇದೆ ತುರ್ತುಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ನಿಂತು ವಿರೋಧ ಮಾಡಿದ ಮಹಾನ್ ಚೇತನ
ವಿ.ವಿ.ಗಿರಿ ರಾಷ್ಟ್ರಪತಿ ಆಗಲು ಪ್ರಮುಖ ನಾಯಕತ್ವವನ್ನು ಜಗಜೀವನರಾಂ ವಹಿಸಿಕೊಂಡು ಯಶಸ್ವಿಯಾದರು.
ಯಾವುದೇ ಆಶೆ ಆಮಿಷ ಬಲಿಯಾಗದೆ ಸ್ವಾಭಿಮಾನ ಮೂಲಕ ಈ ದೇಶದ ಐಕ್ಯತೆಯನ್ನು ಸಾಮರಸ್ಯ ಸ್ವಾತಂತ್ರ್ಯ ಹೊಂದಲು ತಮ್ಮನ್ನು ತೊಡಗಿಸಿಕೊಂಡವರು ಬಾಬೂಜಿ…… ಈ ದೇಶದಲ್ಲಿ ಶಾಂತಿಯ ಮೂಲಕ ಕ್ರಾಂತಿ ಮಾಡಿದ ವ್ಯಕ್ತಿ ಸಂಘರ್ಷದ ಕಿಡಿಯನ್ನು ಒಳಗೆ ಇಟ್ಟುಕೊಂಡು ಈ ದೇಶದ ತಮ್ಮ ವರ್ಗದ ಜನರು ಬದುಕನ್ನು ಕಂಡುಕೊಳ್ಳಲು ಪ್ರಯತ್ನ ಮಾಡಿದರು ಬಾಬೂಜಿ ರಾಜಕೀಯ ಆಡಳಿತದ ಅವಧಿಯನ್ನು ದೊಡ್ಡ ಇತಿಹಾಸ ಇದೆ.
ಇಂದು ಜಾತಿವಾದವು ರಾಜಕೀಯ ಬದುಕಿನಲ್ಲಿ ಎಷ್ಟು ವ್ಯಾಪಕವಾಗಿ ಪಸರಿಸಿದೆ ಎಂದರೆ ನಮ್ಮ ಪ್ರಜಾಪ್ರಭುತ್ವ ಇಡಿ ರಚನೆಯನ್ನು ದ್ವಂಶಗೊಳಿಸುವ ಭೀತಿ ಹುಟ್ಟಿಸುತ್ತದೆ ಆದರೆ
~ಡಾ.ಬಾಬೂ ಜಗಜೀವನರಾಂ
“ಜಾತಿಯ ಎಂಬುದು ಒಳಗೆ ಕೊರೆದು ತಿನ್ನುವ ಕ್ಯಾನ್ಸರ್ ಅದರ ಬಗ್ಗೆ ಯಾರು ಅಷ್ಟಾಗಿ ಲಕ್ಷ್ಯ ಹರಿಸಿದಂತಿಲ್ಲ ಎನ್ನುವ ಅಲ್ಲಲ್ಲಿ ಬಿಗುವಿನ ವಾತಾವರಣ ನಿರ್ಮಿಸಿದೆ”.

 

ವರದಿ.ಮಹಾಲಿಂಗ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *