;

ನಂಬಿ ಮೋಸ ಹೋದೆವು ಎಂದು ತಾಲ್ಲೂಕು ಹೋರಾಟ ಸಮಿತಿಯಿಂದ ಆಕ್ರೋಶ…!!!

ನಂಬಿ ಮೋಸ ಹೋದೆವು ಎಂದು ತಾಲ್ಲೂಕು ಹೋರಾಟ ಸಮಿತಿಯಿಂದ ಆಕ್ರೋಶ

ಮಹಾಲಿಂಗಪುರ : ತೇರದಾಳ ಮತ ಕ್ಷೇತ್ರದಲ್ಲಿ ತಮಗೆ ಭಾಜಪ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂಬ ಭಯದಿಂದ ಶಾಸಕ ಸವದಿ ಜನತೆಗೆ ಮಹಾಲಿಂಗಪುರ ತಾಲೂಕು ಘೋಷಣೆಯಾಗಿದೆ ಎಂಬ ಸುಳ್ಳಿನ ಸರಮಾಲೆ ಪೋಣಿಸಿ ಕೊನೆಗೆ ಚುನಾವಣಾ ಅಂಗಳಕ್ಕೆ ತಳ್ಳಿ ಕೇವಲ ಘೋಷಣೆಗಾಗಿ ಅಧಿಕಾರಿಗಳಿಂದ ಪರವಾಣಿಗೆಗೆ ಸಿಎಂ ಬೊಮ್ಮಾಯಿ ಕಾಯುತ್ತಿದ್ದಾರೆ ಎಂಬ ಮಾರ್ಜಾಲ ನೀತಿ ಬೋಧಿಸುತ್ತಿದ್ದಾರೆ ಎಂದು ತಾಲೂಕು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ಸರ್ಕಾರ ಹಾಗೂ ಶಾಸಕ ಸವದಿ ವಿರುದ್ಧ ಕಿಡಿ ಕಾರಿದರು.
ಮಂಗಳವಾರ ತಾಲೂಕು ಹೋರಾಟ ವೇದಿಕೆಯ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಸಿಎಂ. ಬೊಮ್ಮಾಯಿ ಅನೇಕ ಬಾರಿ ತಾಲೂಕು ಹೋರಾಟ ನಿಯೋಗಕ್ಕೆ ತಾಲೂಕು ಘೋಷಣೆ ಮಾಡಿ ಸಿಹಿ ಸುದ್ದಿ ನೀಡುವೆ ಎಂಬ ಪೊಳ್ಳು ಭರವಸೆಯನ್ನು ನೀಡುತ್ತಾ ಹೋರಾಟಗಾರರ ಜೊತೆ ಕಣ್ಣು ಮುಚ್ಚಾಲೆ ಆಡುತ್ತಿದ್ದಾರೆ.ಕೇವಲ ೩೮ ದಿವಸಗಳ ಸ್ಥಳೀಯರ ಹೋರಾಟದಿಂದ ಮೂಡಲಗಿ ಪಟ್ಟಣ ತಾಲೂಕು ಘೋಷಣೆಯಾಯಿತು. ಅಲ್ಲಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯಕ್ಷಮತೆ ಮೆಚ್ಚುವಂತಹದ್ದು. ಆದರೆ ನಮ್ಮ ಶಾಸಕ ಸವದಿ ಪದೆ ಪದೆ ಜನರನ್ನು ಯಾಮಾರಿಸುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಕಾಲೆಳೆದರು.


ಸಿಎಂ ಬೊಮ್ಮಾಯಿ ಮಹಾಲಿಂಗಪುರ ತಾಲೂಕು ಘೋಷಣೆ ಮಾಡುವುದಿದ್ದರೆ ಕೊನೆಯ ಅಧಿವೇಶನದ ಮುಂಚೆ ಮಾಡಬಹುದಿತ್ತು. ಮಾಡುವ ಮನಸ್ಸಿಲ್ಲದೆ ವಿನಾಕಾರಣ ಕಾಲಹರಣ ಮಾಡಿ ಚುನಾವಣೆ ಮುಗಿಸುವ ತರಾತುರಿಯಲ್ಲಿದ್ದಾರೆ, ಇರಲಿ ಸುಳ್ಳು ಹೇಳಿ ವರ್ಷ ಗಟ್ಟಲೆ ತಾಲೂಕು ಹೋರಾಟ ಮಾಡುತ್ತಿರುವ ಮನಸ್ಸುಗಳಿಗೆ ಘಾಸಿಯಂತೂ ಆಗಿದೆ ಶಾಸಕ ಸವದಿಗೆ ಇದರ ಶಾಪ ತಟ್ಟೆ ತಟ್ಟುತ್ತದೆ ಮಹಾಲಿಂಗಪುರ ತಾಲೂಕಿಗಾಗಿ ನಮ್ಮ ಹೋರಾಟ ಅಚಲ ವೇದಿಕೆ ತೆರವು ಗೊಳಿಸುವುದಿಲ್ಲ ಮುಂದೆ ಯಾವುದೇ ಸರಕಾರ ಬರಲಿ ಅದಕ್ಕೆ ನಮ್ಮ ಹೋರಾಟದಿಂದ ಬಿಸಿ ಮುಟ್ಟಿಸುತ್ತೇವೆ ಎಂದರು.
ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ತಾಲೂಕು ಘೋಷಣೆ ವಿಷಯದಲ್ಲಿ ಶಾಸಕ ಸವದಿ ಹಾಗೂ ಸಿಎಂ ಬೊಮ್ಮಾಯಿ ಹೋರಾಟಗಾರರಿಗೆ ಮೋಸ ಮಾಡಿದ್ದಾರೆ. ಕರೆದಾಗಲೆಲ್ಲ ಚಿಕ್ಕ ಮಕ್ಕಳಂತೆ ಬೆಂಗಳೂರಿಗೆ ಹೋಗುವುದಲ್ಲದೆ ಇವರು ಹೇಳುವ ಬಣ್ಣದ ಮಾತುಗಳಿಗೂ ನಾವು ಮಾರು ಹೋಗಿದ್ದು, ಉತ್ತರ ಕರ್ನಾಟಕದವರೆ ಸಿಎಂ ಇವರಲ್ಲಿ ಕಣಿಕರ ಇದೆ ಎಂದು ತಿಳಿದಿದ್ದೇವು ಅದು ಹುಸಿಯಾಗಿ ಇವರು ಮಾಡಿರುವ ವಿಶ್ವಾಸ ದ್ರೋಹಕ್ಕೆ ನಮಗೆಲ್ಲ ಬೇಸರವಾಗಿದೆ. ಊರಿನ ಹಾಗೂ ಹಳ್ಳಿಗಳ ಜನತೆಯ ಅಣತಿ ಪಡೆದು ಮುಂದಿನ ಹೋರಾಟಕ್ಕೆ ಅಣಿಯಾಗುತ್ತೇವೆ.ತಾಲೂಕು ಘೋಷಣೆಯಾಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಮಾಜಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಮಾತನಾಡಿ, ತಾಲೂಕು ಘೋಷಣೆ ವಿಷಯದಲ್ಲಿ ನಮ್ಮ ಶಾಸಕ ಸವದಿ ಎಡವಿದ್ದಾರೆ. ೨೦೦೪ರಲ್ಲಿ ಅಂದಿನ ಸಚಿವ ತಿಮ್ಮಾಪುರ ಎಪ್ರಿಲ್ ಫೂಲ್ ಮಾಡಿದ ತರಹ ಇವರೂ ಮಾಡಲು ಹೊರಟಿದ್ದಾರೆ. ಇದಕ್ಕೆಲ್ಲ ನಾವು ಸೊಪ್ಪು ಹಾಕುವುದಿಲ್ಲ ಪಕ್ಷಾತೀತವಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.


ಮುಖಂಡರಾದ ಯಲ್ಲನಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ ಮಾತನಾಡಿ, ತಾಲೂಕು ಘೋಷಣೆಯಾಗಿದೆ ಆದೇಶ ಪತ್ರ ತರುತ್ತೇನೆ ಎಂದು ಸುಳ್ಳು ಹೇಳುತ್ತಾ ಶಾಸಕ ಸವದಿ ಜನರ ವೋಟು ಪಡೆಯುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ಜನತೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಜನತೆಯಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರಪ್ಪ ಬ್ಯಾಕೋಡ್, ಶಿವು ಅಂಗಡಿ, ವಿರೇಶ ಆಸಂಗಿ, ಎಸ್ ಎಂ.ಪಾಟೀಲ್, ಶಿದ್ದು ಶಿರೋಳ,ದುಂಡಪ್ಪ ಇಟ್ನಾಳ, ಅಲ್ಲಪ್ಪ ದಡ್ಡಿಮನಿ, ಹಣಮಂತ ಜಮಾದಾರ, ರಫೀಕ್ ಮಾಲದಾರ, ಹಣಮಂತ ಭಜಂತ್ರಿ, ಮಲ್ಲು ಮಿರ್ಜಿ, ನ್ಯಾಯವಾದಿ ಸಂಗಣ್ಣವರ, ದಾದಾಪೀರ ನಗಾರ್ಚಿ, ಶಿವು ಸೋರಗಾವಿ ಮುಂತಾದವರಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;