;

ವಾರದ ಭಾನುವಾರದ ಸಂತೆಯನ್ನು ಇಂದಿನಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ಮುಂದುವರಿಸಿದ ಸ್ಥಳೀಯ ಗ್ರಾಂ.ಪಂ.ಆಡಳಿತ!!!!

ವಾರದ ಭಾನುವಾರದ ಸಂತೆಯನ್ನು ಇಂದಿನಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ಮುಂದುವರಿಸಿದ ಸ್ಥಳೀಯ ಗ್ರಾಂ.ಪಂ.ಆಡಳಿತ!!!!!!! ಕೂಡ್ಲಿಗಿ: ದಿನಾಂಕ,2-4-23 ಭಾನುವಾರದಿಂದ ತಾಲೂಕಿನ ಬಣವಿಕಲ್ಲು ಗ್ರಾಮದ ವಾರದ ಭಾನುವಾರ ನಡೆಯುವ ಸಂತೆಯನ್ನು ಬೆಳಿಗ್ಗೆಯಿಂದ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಇಂದಿನಿಂದ ಪ್ರಕಟಣೆಯಲ್ಲಿ ತರಕಾರಿ ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊನೆಗೂ ನಮ್ಮೂರಿನ ವಾರದ ಭಾನುವಾರದ ಸಂತೆಯನ್ನು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಮೂಲಕ ಸ್ಥಳೀಯ ಗ್ರಾಮ ಪಂಚಾಯಿತಿಯವರು ಅನುಕೂಲ ಮಾಡಿಕೊಟ್ಟಿರುವುದು ಒಳ್ಳೆಯ ಕೆಲಸವಾಗಿದೆ ಎಂದು ಇಲ್ಲಿನ ಸ್ಥಳೀಯರು ಗ್ರಾಂ.ಪಂ.ಗೆ ಆಡಳಿತಕ್ಕೆ ಧನ್ಯವಾದಗಳನ್ನು ತಿಳಿಸಿದರು. ಕಾರಣ ದೇಶದಲ್ಲೇ ಕೊರೊನಾ ಎಂಬ ಮಹಾಮಾರಿಯ ಸಂದರ್ಭದಲ್ಲಿ ಉಂಟಾದ ಲಾಕ್ ಡೌನ್ ನಿಂದ ವಾರದ ಸಂತೆಯನ್ನು ಅಲ್ಲಿಂದ ಇಲ್ಲಿಯವರೆಗೂ ಮುಂಜಾನೆ 5 ರಿಂದ ಆರಂಭಗೊಂಡು ಕೇವಲ 4 ತಾಸು ಸಂತೆಯನ್ನು ನಡೆಸುತ್ತೀದ್ದರು, ಇದರಿಂದ ರೈತರು ಮತ್ತು ಬಡ ಕೂಲಿ ಕಾರ್ಮಿಕರಿಗೆ ಬಹಳ ಅನಾನುಕೂಲವಾಗುತ್ತಿತ್ತು ಎಂದು ಇಲ್ಲಿನ ಸ್ಥಳೀಯರ ಬಹಳ ದಿನದ ಅಭಿಪ್ರಾಯವಾಗಿತ್ತು. ಇಂದಿನಿಂದ ಬಣವಿಕಲ್ಲು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ, ಮತ್ತು ಸಂತೆಯನ್ನು ನಡೆಸುವ ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯವರು ಹೊರಡಿಸಿದ ಈ ಆದೇಶವನ್ನು ನಿಯಮಾನಸಾರವಾಗಿ ಅಂಗಡಿ ಮಾಲೀಕರು ಪಾಲಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;